For Quick Alerts
ALLOW NOTIFICATIONS  
For Daily Alerts

ತಾವಾಗಿಯೇ ಪರೀಕ್ಷೆಗೆ ಬಂದು ಕೊರೊನಾ ದೃಢಪಟ್ಟರೆ 1 ಲಕ್ಷ ನಗದು

|

ಚೀನಾದ ಹುಬೈ ಪ್ರಾಂತ್ಯದಲ್ಲಿ ಯಾರಾದರೂ ತಮಗಿರುವ ಕೊರೊನಾ ರೋಗ ಲಕ್ಷಣಗಳನ್ನು ಗಮನಕ್ಕೆ ತಂದು, ಅವರಿಗೆ ಆ ಸೋಂಕು ತಗುಲಿರುವುದು ಕೂಡ ಸಾಬೀತಾದಲ್ಲಿ 10,000 ಯುವಾನ್ (ಭಾರತೀಯ ರುಪಾಯಿಗಳಲ್ಲಿ 1,02,048) ನೀಡಲಿದೆ. ಕೊರೊನಾ ವೈರಾಣು ದಾಳಿಗೆ ಚೀನಾ ಅದ್ಯಾವ ಪರಿ ತಲೆ ಕೆಡಿಸಿಕೊಂಡಿದೆ ಎಂಬುದು ಈ ಘೋಷಣೆಯಿಂದಲೇ ತಿಳಿಯುತ್ತದೆ.

ವುಹಾನ್ ನಿಂದ ನೂರೈವತ್ತು ಕಿ.ಮೀ. ದೂರದಲ್ಲಿ ಇರುವ ಕಿಯಾನ್ ಜಿಯಾಂಗ್ ನಲ್ಲಿ ಹತ್ತು ಲಕ್ಷ ಜನಸಂಖ್ಯೆ ಇದ್ದು, ಒಟ್ಟು 197 ಪ್ರಕರಣಗಳು ಪತ್ತೆಯಾಗಿವೆ. ಸೋಂಕು ಪತ್ತೆಯಾಗಿರುವವರಿಗೆ ಚಿಕಿತ್ಸೆ ನೀಡಲು ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಇದೀಗ ಈ ಭಾಗದಲ್ಲಿ ನಗದು ನೀಡುವ ಮೂಲಕ ಸಾರ್ವಜನಿಕರಿಗೆ ತಾವಾಗಿಯೇ ಚಿಕಿತ್ಸೆಗೆ ಒಳಗಾಗುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಹುಬೈನಲ್ಲಿ 65,000 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. 2600 ಮಂದಿ ಸಾವನ್ನಪ್ಪಿದ್ದಾರೆ. ಈ ಕೊರೊನಾ ವೈರಾಣು ಮೂಲ ನೆಲೆಯೇ ಈ ಹುಬೈ ಎನ್ನಲಾಗಿದೆ. ಇನ್ನು ವಿಶ್ವದಾದ್ಯಂತ 2800 ಸಾವಿನ ಪ್ರಕರಣಗಳು, 80,000 ಸೋಂಕು ಪೀಡಿತರು ಎಂದು ಲೆಕ್ಕ ತೆರೆದಿಡಲಾಗುತ್ತಿದೆ.

ತಾವಾಗಿಯೇ ಪರೀಕ್ಷೆಗೆ ಬಂದು ಕೊರೊನಾ ದೃಢಪಟ್ಟರೆ 1 ಲಕ್ಷ ನಗದು

ಕೊರೊನಾ ಸೋಂಕಿನ ಲಕ್ಷಣಗಳು ಇದ್ದು, ಈ ಹಿಂದೆ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ, ಈಗ ಪರೀಕ್ಷೆ ವೇಳೆ ಕಾಯಿಲೆ ಇರುವುದು ಖಾತ್ರಿಯಾದರೆ ಹತ್ತು ಸಾವಿರ ಯುವಾನ್ ನಗದು ನೀಡಲಾಗುತ್ತದೆ. ಇನ್ನು ಸದ್ಯಕ್ಕೆ ಕಾಯಿಲೆ ಇಲ್ಲ ಎಂದು ಹೇಳಲಾಗದ ಸ್ಥಿತಿಯಲ್ಲಿ ಇರುವವರಿಗೆ 1 ಸಾವಿರ ಯುವಾನ್ ಮತ್ತು ಶಂಕಿತ ಪ್ರಕರಣಗಳಲ್ಲಿ 2 ಸಾವಿರ ಯುವಾನ್ ನಗದು ನೀಡಲಾಗುತ್ತದೆ.

ಹುಬೈ ಪ್ರಾಂತ್ಯದ ಹೊರತಾಗಿ ಇತರ ಕಡೆಯೂ ಇಂಥದ್ದೇ ನಗದು ಪ್ರೋತ್ಸಾಹ ನೀಡುತ್ತಿದ್ದು 300ರಿಂದ 500 ಯುವಾನ್ ನೀಡಲಾಗುತ್ತಿದೆ.

Read more about: china cash ಚೀನಾ ನಗದು
English summary

China City Offers Cash Reward For Corona Virus Patients Who Report To Officials

A city in China's Hubei province, will pay residents as much as 10,000 yuan ($1,425.96) if they proactively report symptoms of the illness and it is confirmed after testing.
Story first published: Thursday, February 27, 2020, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X