For Quick Alerts
ALLOW NOTIFICATIONS  
For Daily Alerts

1000 ಕೋಟಿಯ ಹಗರಣ; ಹವಾಲ ಕಿಂಗ್ ಪಿನ್ ಚೀನಾ ಪ್ರಜೆಯ ಭಾಂಡಾರ ಬಯಲಿಗೆ

|

ಆದಾಯ ತೆರಿಗೆ ಇಲಾಖೆಯ ದಾಳಿ ನಂತರ ಲ್ಯು ಸ್ಯಾಂಗ್ ಎಂಬ ಚೀನಾ ಪ್ರಜೆಯನ್ನು ಬಂಧಿಸಲಾಗಿದೆ. ಆತನ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಲಾಗಿದೆ. ಚೀನಾದ ನಕಲಿ ಕಂಪೆನಿಗಳ ಹೆಸರಿನಲ್ಲಿ ಈತ ಹವಾಲ ವ್ಯವಹಾರ ಮಾಡುತ್ತಿದ್ದ. ಈ ಹಿಂದೆ ಗೂಢಚರ್ಯೆ ಮಾಡಿದ ಆರೋಪದಲ್ಲಿ ಇದೇ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

 

ಈ ಲ್ಯು ಸ್ಯಾಂಗ್ ಒಂದು ನಕಲಿ ಐಡಿ ಸೃಷ್ಟಿಸಿ, ಚಾರ್ಲಿ ಪೆಂಗ್ ಹೆಸರಲ್ಲಿ ಭಾರತದಲ್ಲಿದ್ದ. 2018ನೇ ಇಸವಿಯಲ್ಲಿ ಗೂಢಚರ್ಯೆ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ವಿಭಾಗ ಈತನನ್ನು ಬಂಧಿಸಿತ್ತು. ಮೂಲಗಳ ಪ್ರಕಾರ, ಚೀನಾ ಪರವಾಗಿ ಚಾರ್ಲಿ ಪೆಂಗ್ ಗೂಢಚರ್ಯೆ ಮಾಡುತ್ತಿದ್ದ ಹಾಗೂ ಅಕ್ರಮ ಹಣ ವರ್ಗಾವಣೆ ಮತ್ತು ಹವಾಲ ವ್ಯವಹಾರ ಕೂಡ ಮಾಡುತ್ತಿದ್ದ ಎಂದು ಆತನ ಮೇಲೆ ದೆಹಲಿ ಪೊಲೀಸರು ಆರೋಪ ಮಾಡಿದ್ದರು. ಆ ನಂತರ ಆತನನ್ನು ಕೋರ್ಟ್ ಖುಲಾಸೆ ಮಾಡಿತ್ತು.

300 ಕೋಟಿ ರುಪಾಯಿ ಹವಾಲ ವ್ಯವಹಾರ

300 ಕೋಟಿ ರುಪಾಯಿ ಹವಾಲ ವ್ಯವಹಾರ

ಅಕ್ರಮ ಹಣ ವರ್ಗಾವಣೆಯಲ್ಲಿ ಚೀನಾ ಕೈವಾಡ ಇದೆ ಎಂಬ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಬಂದ ಪಕ್ಕಾ ಮಾಹಿತಿಯ ಆಧಾರದಲ್ಲಿ ದೆಹಲಿ, ಗಾಜಿಯಾಬಾದ್, ಗುರುಗ್ರಾಮ್ ಸೇರಿ 21 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಈ ಶೋಧ ಕಾರ್ಯಾಚರಣೆ ವೇಳೆ ಲ್ಯು ಸ್ಯಾಂಗ್ ಹೆಸರು ಕೇಳಿಬಂದಿತ್ತು. ಐ.ಟಿ. ಇಲಾಖೆಯಿಂದ ಶೋಧ ನಡೆದ 21 ಸ್ಥಳಗಳ ಪೈಕಿ ಒಂದು ಕಡೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಲ್ಯು ಸ್ಯಾಂಗ್ ಎಂಟರಿಂದ ಹತ್ತು ಬ್ಯಾಂಕ್ ಖಾತೆ ಹೊಂದಿದ್ದಾನೆ. ಅವು ನಕಲಿ ಚೀನಾ ಕಂಪೆನಿಗಳ ಹೆಸರಿನಲ್ಲಿದ್ದು, 300 ಕೋಟಿ ರುಪಾಯಿ ಹವಾಲ ವ್ಯವಹಾರ ಮಾಡಿದ್ದಾನೆ. ಬಂಧನ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಸಿಬ್ಬಂದಿ ನೆರವಿನಿಂದ ಪ್ರತಿ ನಿತ್ಯ ಮೂರು ಕೋಟಿ ರುಪಾಯಿಯಷ್ಟು ಹವಾಲ ವ್ಯವಹಾರ ನಡೆಸುತ್ತಿದ್ದನಂತೆ ಈ ಲ್ಯು ಸ್ಯಾಂಗ್.

1000 ಕೋಟಿ ರುಪಾಯಿಯ ಹಗರಣ
 

1000 ಕೋಟಿ ರುಪಾಯಿಯ ಹಗರಣ

ಆತನ ಬಳಿ ನಲವತ್ತು ಬ್ಯಾಂಕ್ ಖಾತೆಗಳಿದ್ದವು. ಬ್ಯಾಂಕ್ ಸಿಬ್ಬಂದಿ ಮೇಲೆ ಸಹ ದಾಳಿ ನಡೆಸಲಾಗಿದೆ. ಒಟ್ಟಾರೆ ಇದು 1000 ಕೋಟಿ ರುಪಾಯಿಯ ಹಗರಣ ಎನ್ನಲಾಗುತ್ತಿದೆ. ಚೀನಾ ಕಂಪೆನಿಯ ಅಂಗಸಂಸ್ಥೆಗಳ ಹೆಸರಿನಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿತ್ತು. ಅಂದ ಹಾಗೆ ಈ ಲ್ಯು ಸ್ಯಾಂಗ್ ಕಳೆದ ಮೂರು ವರ್ಷಗಳಿಂದ ಈ ಹಗರಣ ನಡೆಸುತ್ತಿದ್ದ ಎಂಬ ಗುಮಾನಿ ಇದೆ. ಈತ ಆಗಿಂದಾಗ್ಗೆ ವಿಳಾಸಗಳನ್ನು ಸಹ ಬದಲಾಯಿಸಿದ್ದಾನೆ. ಇದರಲ್ಲಿ ವಿದೇಶಿ ಹವಾಲ ವ್ಯವಹಾರವೂ ಒಳಗೊಂಡಿದೆ. ಹಾಂಕಾಂಗ್, ಅಮೆರಿಕ ಡಾಲರ್ ವ್ಯವಹಾರವೂ ಈತ ನಡೆಸಿದ್ದಾನೆ. ಲ್ಯು ಸ್ಯಾಂಗ್ ಬಳಿಯಿದ್ದ ಎರಡು ನಕಲಿ ಆಧಾರ್ ಕಾರ್ಡ್, ನಕಲಿ ಪ್ಯಾನ್ ಕಾರ್ಡ್ ಹಾಗೂ ನಕಲಿ ಪಾಸ್ ಪೋರ್ಟ್ ವಶಕ್ಕೆ ಪಡೆಯಲಾಗಿದೆ.

ಭಾರತದ ಮಹಿಳೆ ಜತೆ ಮದುವೆ

ಭಾರತದ ಮಹಿಳೆ ಜತೆ ಮದುವೆ

ಅಧಿಕಾರಿಗಳ ಪ್ರಕಾರ, ಚಾರ್ಲಿ ಪೆಂಗ್ ಮೂಲ ಹೆಸರು ಲ್ಯು ಸ್ಯಾಂಗ್. ಈತ ಚೀನಾದ ನಾಗರಿಕ. ಹುಟ್ಟಿ- ಬೆಳೆದಿದ್ದು ಲ್ಹಾಸಾ ಹಾಗೂ ಟಿಬೆಟ್. ಸದ್ಯಕ್ಕೆ ಗುರುಗ್ರಾಮ್, ಹರ್ಯಾಣ ವಿಳಾಸದಲ್ಲಿ ಇದ್ದಾನೆ. ಈತನ ಬಳಿ ಭಾರತೀಯ ಪಾಸ್ ಪೋರ್ಟ್ ಸಹ ಇದೆ. ಅದಕ್ಕಾಗಿ ಆತ ಭಾರತದ ಯುವತಿಯನ್ನು ಮದುವೆ ಆಗಿದ್ದಾನೆ. ಆಕೆ ಮೂಲತಃ ಮಿಜೋರಾಂನ ಲುಂಗ್ಲೈನವಳು. ಆಕೆಯ ಪಾಸ್ ಪೋರ್ಟ್ ಅನ್ನು ಸಹ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ.

English summary

China National Arrested In Money Laundering And Hawala Case

Luo Sang, China national arrested in money laundering and hawala racket. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X