For Quick Alerts
ALLOW NOTIFICATIONS  
For Daily Alerts

ಅಲಿಬಾಬಾ ಕಂಪನಿಗೆ ಶಾಕ್‌ ನೀಡಿದ ಚೀನಾ ಸರ್ಕಾರ: 20,000 ಕೋಟಿ ರೂಪಾಯಿ ದಂಡ

|

ಮಾರುಕಟ್ಟೆ ಮೇಲೆ ತಾನು ಸಾಧಿಸಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಜಾಕ್‌ ಮಾ ಒಡೆತನದ ಅಲಿಬಾಬಾ ಸಂಸ್ಥೆಗೆ ಚೀನಾ ಸರ್ಕಾರ ಭಾರೀ ದಂಡ ವಿಧಿಸಿದೆ.

 

ಇ-ಕಾಮರ್ಸ್‌ ವೇದಿಕೆಯಲ್ಲಿ ತನ್ನ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಉತ್ಪಾದಕರಿಗೆ ಷರತ್ತು ವಿಧಿಸುವ ಮೂಲಕ ತನ್ನ ‌ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾತ್ರ ಮಾರಾಟ ಮಾಡಬೇಕು ಎಂದು ಹೇಳಿದೆ ಎಂಬ ಆರೋಪವಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವ ಪ್ರಯತ್ನ ಮಾಡಿರುವುದಾಗಿ ಸರ್ಕಾರವು 2.8 ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ಈ ಮೌಲ್ಯವು ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 22,000 ಕೋಟಿ ರೂಪಾಯಿಗಿಂತ ಹೆಚ್ಚು.

 
ಅಲಿಬಾಬಾ ಕಂಪನಿಗೆ ಶಾಕ್‌ ನೀಡಿದ ಚೀನಾ: 20,000 ಕೋಟಿ ರೂ. ದಂಡ

ಕಳೆದ ವರ್ಷ ಜಾಕ್‌ ಮಾ ಸೇರಿದಂತೆ Ant ಸಂಸ್ಥೆಗೆ ಸೇರಿದ್ದ 37 ಬಿಲಿಯನ್ ಡಾಲರ್ ಮೌಲ್ಯದ ಅಮಾನ್ಯ ಮಾಡಿ ಚೀನಾ ಶಾಕ್ ನೀಡಿತ್ತು. ಇದಾದ ಬಳಿಕ ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಜಾಕ್‌ ಮಾ ಟ್ವೀಟ್ ಮಾಡಿದ್ದಲ್ಲದೆ ಮೂರು ತಿಂಗಳು ಕಾಲ ನಾಪತ್ತೆಯಾಗಿದ್ದರು.

ಚೀನಾ ಸರ್ಕಾರವು ಸಿಟ್ಟಿನಿಂದ ಅಲಿಬಾಬಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂಬ ತೀವ್ರವಾದ ಊಹಾಪೋಹಗಳ ಬಳಿಕ ಬಿಲಿಯನೇರ್ ಅಲಿಬಾಬಾ ಜನವರಿ 20ರಂದು ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಇದೀಗ 2019ರಲ್ಲಿ ಅಲಿಬಾಬಾ ಕಂಪನಿ ನಡೆಸಿದ ವಹಿವಾಟಿನ ಶೇಕಡಾ 4ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಆ ವರ್ಷ ಕಂಪನಿ 455.7 ಬಿಲಿಯನ್‌ ಯುವಾನ್‌ ವ್ಯಾಪಾರ ನಡೆಸಿತ್ತು.

English summary

China Regulator Fines Alibaba $2.8 Billion For Antitrust Violations

The Chinese Communist Party’s has issued a RMB 18.2 billion ($2.8 billion) fine on the e-commerce giant, Alibaba nearly four months after launching an investigation in December last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X