For Quick Alerts
ALLOW NOTIFICATIONS  
For Daily Alerts

ಈ ಹಳ್ಳಿಗರಿಗೆ ಹಾವಿನ ಸಾಕಣೆ ಭರ್ಜರಿ ವ್ಯಾಪಾರ; ಸಾವಿರಾರು ಡಾಲರ್ ಆದಾಯ

|

ಕುರಿ ಸಾಕಣೆ, ಕೋಳಿ, ಹಂದಿ, ಜೇನು, ಮೀನು ಹಾಗೂ ಮೊಲ ಸಾಕಣೆ ಇಂಥ ವ್ಯವಹಾರಗಳನ್ನು ಕೇಳಿರುತ್ತೀರಿ ಹಾಗೂ ನೋಡಿರುತ್ತೀರಿ. ಇಂಡೋನೇಷ್ಯಾದಲ್ಲಿ ಮೊಸಳೆ ಸಾಕಣೆ ಕೂಡ ಮಾಡುತ್ತಾರೆ. ಆದರೆ ಚೀನಾದ ಈ ಸ್ಥಳದಲ್ಲಿ ಹಾವಿನ ಸಾಕಣೆ ಮಾಡುತ್ತಾರೆ. ಈ ಸ್ಥಳದ ಹೆಸರು ಝಿಸಿಕಿಯೋ. ಇಲ್ಲಿನ ಸ್ಥಳೀಯರು ಒಂದು ಕಾಲಕ್ಕೆ ಕೃಷಿ ಹಾಗೂ ಮೀನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದರು. ಆದರೆ ಈಗ ಹಾಗಿಲ್ಲ.

ಇಲ್ಲಿನ ಹಳ್ಳಿಗೆ ನೀವು ಕಾಲಿಟ್ಟರೆ ಸಾಲಾಗಿ ಜೋಡಿಸಿಟ್ಟ ಮರದ ಪೆಟ್ಟಿಗೆಗಳು ಕಾಣಿಸುತ್ತವೆ. ಅದರೊಳಗೆ ನೂರಾರು ಹಾವುಗಳು. ನಾಗರಹಾವಿನಿಂದ ಶುರುವಾಗಿ ನಾನಾ ಜಾತಿಯ ಹಾವುಗಳನ್ನು ಕಾಣಬಹುದು. ಬೇಸಿಗೆ ಕಾಲದಲ್ಲಿ ಕಾಂಕ್ರೀಟ್ ನ ಪಿಟ್ ಮಾಡಲಾಗುತ್ತದೆ. ಅದರೊಳಗೆ ಜಗತ್ತಿನ ಅತ್ಯಂತ ಅಪಾಯಕಾರಿ ಹಾವುಗಳನ್ನು ಸಹ ಕಾಣಬಹುದು. ಅದರಲ್ಲೂ ಒಂದು ಹಾವಿನ ಬಗ್ಗೆ ಬಹಳ ಹೆದರಿಕೆ ಇದೆ- ಅದು "ಫೈವ್ ಸ್ಟೆಪ್ ಸ್ನೇಕ್".

ದುಬಾರಿ ದುನಿಯಾ: ತರಕಾರಿ, ಚಿಕನ್, ಫಿಶ್, ಹಣ್ಣು ಶ್ರೀಮಂತರಿಗೂ ಎಟುಕಲ್ಲದುಬಾರಿ ದುನಿಯಾ: ತರಕಾರಿ, ಚಿಕನ್, ಫಿಶ್, ಹಣ್ಣು ಶ್ರೀಮಂತರಿಗೂ ಎಟುಕಲ್ಲ

ಸ್ಥಳೀಯ ಹಳ್ಳಿಗರೇ ಹೇಳುವಂತೆ ಇದು ಬಹಳ ಅಪಾಯಕಾರಿ ಹಾವು. ಯಾವುದಾದರೆ ವ್ಯಕ್ತಿಗೆ ಇದು ಕಚ್ಚಿದರೆ ಸಾಯುವ ಮುಂಚೆ ಐದು ಹಂತಗಳು ಇರುತ್ತವೆ. ಇಲ್ಲಿನ ಜನರ ಮಾಂಸಕ್ಕಾಗಿ ಹಾವು ಸಾಕಣೆ ಮಾಡಲಾಗುತ್ತದೆ. ರೆಸ್ಟೋರೆಂಟ್ ಗಳಿಗೆ ಮಾರಲಾಗುತ್ತದೆ. ಇವುಗಳ ವಿವಿಧ ಭಾಗಗಳನ್ನು ಚೀನಾದ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಬಳಸಲಾಗುತ್ತದೆ. ಹಾವಿನ ಈ ವ್ಯವಹಾರದಲ್ಲಿ ಕಂಪೆನಿಗಳು ಡಬಲ್ ಲಾಭ ಪಡೆಯುತ್ತಿವೆ.

ಹತ್ತು ವರ್ಷಗಳ ಹಿಂದೆ ರೈತ ಹಾಂಗ್ ‌ಚಾಂಗ್ ನಿಂದ ಆರಂಭ

ಹತ್ತು ವರ್ಷಗಳ ಹಿಂದೆ ರೈತ ಹಾಂಗ್ ‌ಚಾಂಗ್ ನಿಂದ ಆರಂಭ

ಆರಂಭದಲ್ಲಿ ಹಾವುಗಳನ್ನು ಕಾಯಿಲೆ ಗುಣ ಪಡಿಸಲು ಬಳಸಲಾಗುತ್ತಿತ್ತು. ಆದರೆ ಇದರಲ್ಲಿ ವ್ಯಾಪಾರ ಇದೆ ಎಂದು ಗುರುತಿಸಿದ ನಂತರ ಸುಲಭವಾಗಿ ಹಣ ಮಾಡಬಹುದು ಎಂಬ ಕಾರಣಕ್ಕೆ ಹಾವು ಸಾಕಣೆಯಲ್ಲಿ ತೊಡಗಿದ್ದಾರೆ. ಮೂಲಗಳ ಪ್ರಕಾರ, ಹತ್ತು ವರ್ಷಗಳ ಹಿಂದೆ ರೈತ ಹಾಂಗ್ ಚಾಂಗ್ ಇಲ್ಲಿ ಮೊದಲ ಬಾರಿಗೆ ಹಾವಿನ ಸಾಕಣೆ ಪರಿಚಯಿಸಿದ್ದಾರೆ.

ಚೀನಿಯರ ಔಷಧಕ್ಕಾಗಿ ಹಾವಿನ ಬಳಕೆ

ಚೀನಿಯರ ಔಷಧಕ್ಕಾಗಿ ಹಾವಿನ ಬಳಕೆ

ಯಾಂಗ್ ಹೇಳುವಂತೆ, ಆರಂಭದಲ್ಲಿ ಆತ ಕಾಯಿಲೆ ವಾಸಿ ಮಾಡುವ ಔಷಧಕ್ಕಾಗಿ ಹಾವನ್ನು ಹಿಡಿಯುತ್ತಿದ್ದ. ಕ್ರಮೇಣ ಇದರಲ್ಲಿ ವ್ಯಾಪಾರದ ಅವಕಾಶ ಇದೆ ಎಂದು ಆತನಿಗೆ ಅನಿಸಿತ್ತು. ಹಳ್ಳಿಯ ಇತರರು ಆತನ ಹಾದಿಯನ್ನೇ ತುಳಿದಿದ್ದಾರೆ. ಹಾವುಗಳಿಗೆ ಬೇಡಿಕೆ ಹೆಚ್ಚುತ್ತಲೇ ಬಂದು, ಒಂದು ಕಾಲ ಬಡ ಗ್ರಾಮವಾಗಿದ್ದ ಝಿಸಿಕಿಯೊದಲ್ಲಿ ಇವತ್ತಿಗೆ ಶ್ರೀಮಂತಿಕೆ ಇದೆ. ಇಲ್ಲಿನ ಸ್ಥಳೀಯರು ಸಾವಿರಾರು ಡಾಲರ್ ಆದಾಯ ಪಡೆಯುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲೂ ಡಿಮ್ಯಾಂಡ್ ಇದೆ

ಅಂತರರಾಷ್ಟ್ರೀಯ ಮಟ್ಟದಲ್ಲೂ ಡಿಮ್ಯಾಂಡ್ ಇದೆ

ಇಲ್ಲಿನ ಹಳ್ಳಿಗರು ತಮ್ಮ 'ಉತ್ಪನ್ನ'ವನ್ನು ದೇಶೀಯವಾಗಿಯೂ ಮಾರುತ್ತಾರೆ. ಅದೇ ರೀತಿ ಅಂತರರಾಷ್ಟ್ರೀಯ ಗ್ರಾಹಕರೂ ಇದ್ದಾರೆ. ಚೀನಾದ ವೈದ್ಯಕೀಯ ಪದ್ಧತಿಯಲ್ಲಿ ಹಾವಿನ ಬಳಕೆ ವ್ಯಾಪಕವಾಗಿದೆ. ರೋಗಿಯ ರೋಗನಿರೋಧಕ ಶಕ್ತಿ ಹೆಚ್ಚಾಗಲಿ ಎಂಬ ಕಾರಣಕ್ಕೆ ಹಾವಿನ ಸೂಪ್, ವೈನ್ ಕುಡಿಯುತ್ತಾರೆ. ಇಲ್ಲಿಂದ ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಯು.ಎಸ್. ಗೆ ಕೂಡ ಹಾವು ರಫ್ತಾಗುತ್ತದೆ.

ಮೊದಲಿಗೆ ಹೆದರುತ್ತಿದ್ದವರು ಈಗ ಚಪ್ಪರಿಸಿ ತಿನ್ನುತ್ತಾರೆ

ಮೊದಲಿಗೆ ಹೆದರುತ್ತಿದ್ದವರು ಈಗ ಚಪ್ಪರಿಸಿ ತಿನ್ನುತ್ತಾರೆ

ಇನ್ನು ಈ ಗ್ರಾಮದಲ್ಲಿ ಕೆಲವು ಸಲ ಕಂಡುಬರುವ ವ್ಯಕ್ತಿಗಳು ಆಸಕ್ತಿಕರವಾದ ಸಂಗತಿಗಳನ್ನೇ ಹೇಳುತ್ತಾರೆ. ತಾವು ಚಿಕಿತ್ಸೆಗಾಗಿಯೇ ನೂರಾರು ಮೈಲಿನಿಂದ ಇಲ್ಲಿಗೆ ಬಂದಿದ್ದೇವೆ ಅಂತ ಒಬ್ಬ ಅಂದರೆ, ಮೂರು ವರ್ಷ ಹಿಂದೆ ಪೂರ್ತಿಯಾಗಿ ಹಾಸಿಗೆ ಹಿಡಿದಿದ್ದೆ. ಆ ನಂತರ ಹಾವಿನ ಔಷಧಿಯನ್ನು ಕೆಲ ತಿಂಗಳು ತೆಗೆದುಕೊಂಡ ಮೇಲೆ ಈಗ ನಡೆದಾಡುತ್ತೇನೆ. ನನಗೆ ಸದ್ಯಕ್ಕೆ ಹಾವು ಬಹಳ ಇಷ್ಟವಾದ ಖಾದ್ಯ. ಇಲ್ಲಿಗೆ ಮೊದಲ ಸಲ ಬಂದಾಗ ಹಾವಿನ ಕಂಡರೆ ತುಂಬ ಹೆದರುತ್ತಿದ್ದೆ. ಈಗ ಯಾವ ಭಯವೂ ಇಲ್ಲ ಎಂದು ನಗುತ್ತಾ ಹೇಳುತ್ತಾರೆ.

English summary

China's This Village Residents Earning Thousands Of Dollars Through Snake Breeding

Zisiqiao, a Chinese village, most of the people in this place engaging in Snake breeding. Making thousands of dollars.
Story first published: Thursday, June 18, 2020, 8:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X