For Quick Alerts
ALLOW NOTIFICATIONS  
For Daily Alerts

ಚೀನಾ ಕರೆನ್ಸಿಗೂ 'ಕೊರೊನಾ ಸೋಂಕು': 6 ಲಕ್ಷ ಕೋಟಿ ಮಟಾಶ್

|

ಚೀನಾದಲ್ಲಿ ಭಾರೀ ಭೀತಿ ಮೂಡಿಸಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿರುವ ಡೆಡ್ಲಿ ಕೊರೊನಾವೈರಸ್ ಈಗಾಗಲೇ ಚೀನಾದ ಆರ್ಥಿಕತೆ ಮೇಲೆ ಭಾರೀ ಹೊಡೆತ ನೀಡಿದೆ. ಜನರ ಜೀವವನ್ನು ಬಲಿ ತೆಗೆದುಕೊಂಡಿರುವುದರ ಜೊತೆಗೆ ಉದ್ಯಮದ ಮೇಲೆ ಭಾರೀ ಪೆಟ್ಟು ನೀಡಿದೆ.

ಕೊರೊನಾವೈರಸ್‌ ಸೋಂಕು ತಡೆಗಾಗಿ ಚೀನಾ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಈಗಾಗಲೇ ಪತ್ಯೇಕ ಆಸ್ಪತ್ರೆಯನ್ನೇ ನಿರ್ಮಿಸಿ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಕೊರೊನಾವೈರಸ್‌ನಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿನ ನೋಟುಗಳನ್ನು ನಾಶಮಾಡಲು ತೀರ್ಮಾನಿಸಿದೆ.

ವೈರಸ್‌ ಹೆಚ್ಚಿರುವ ಪ್ರದೇಶಗಳಲ್ಲಿನ ನೋಟುಗಳು ನಾಶ
 

ವೈರಸ್‌ ಹೆಚ್ಚಿರುವ ಪ್ರದೇಶಗಳಲ್ಲಿನ ನೋಟುಗಳು ನಾಶ

ಕೊರೊನಾವೈರಸ್‌ ತೀವ್ರವಾಗಿ ಹಾನಿಗೊಳಗಾದ ಕೆಲವು ಪ್ರದೇಶಗಳಲ್ಲಿನ ಆಸ್ಪತ್ರೆಗಳು, ಮಾರುಕಟ್ಟೆಗಳು ಮತ್ತು ಬಸ್‌ಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ನೋಟುಗಳನ್ನು ನಾಶಮಾಡಲು ಯೋಜನೆ ಮಾಡಿರುವುದಾಗಿ ಚೀನಾದ ಕೇಂದ್ರ ಬ್ಯಾಂಕ್ ಹೇಳಿದೆ.

600 ಬಿಲಿಯನ್ ಯುವಾನ್ ನೋಟು ಬದಲಾವಣೆ

600 ಬಿಲಿಯನ್ ಯುವಾನ್ ನೋಟು ಬದಲಾವಣೆ

ಸೋಂಕು ಪೀಡಿದ ಪ್ರದೇಶಗಳಲ್ಲಿ ಚಲಾವಣೆಯಲ್ಲಿರುವ ಸುಮಾರು 600 ಬಿಲಿಯನ್ ಯುವಾನ್ ಅಂದರೆ 85.6 ಬಿಲಿಯನ್ (ಭಾರತದ ರುಪಾಯಿಗಳಲ್ಲಿ 6 ಲಕ್ಷ, 11,955 ಕೋಟಿ) ಹಣವನ್ನು ನಾಶ ಮಾಡಿ ಹೊಸದಾಗಿ ಮುದ್ರಿತ ಕಾಗದದ ಕರೆನ್ಸಿಯನ್ನು ರಚಿಸಲು ಯೋಜಿಸಲಾಗಿದೆ ಎಂದು ಚೀನಾದ ಕೇಂದ್ರೀಯ ಬ್ಯಾಂಕಿನ ಉಪ ಗವರ್ನರ್ ಫ್ಯಾನ್ ಯೀಫೈ ಹೇಳಿದ್ದಾರೆ.

ನಾಗರೀಕರ ಪ್ರತಿ ನಡೆ ಮೇಲೂ ಚೀನಾ ಸರ್ಕಾರದ ಕಣ್ಣು ! ನಿಮ್ಮ ಊಹೆಗೆ ನಿಲುಕದ್ದು

ಹೊಸ ನೋಟುಗಳ ಮೇಲೂ ನಿಗಾ

ಹೊಸ ನೋಟುಗಳ ಮೇಲೂ ನಿಗಾ

ದೇಶದ ಇತರ ಪ್ರದೇಶಗಳಲ್ಲಿ, ಒಳಬರುವ ಕಾಗದದ ಕರೆನ್ಸಿಯನ್ನು ಚಲಾವಣೆಯಿಂದ ತೆಗೆದುಹಾಕಿ ಮತ್ತು ಅದನ್ನು ಹೊಸ ನಗದು ಮೂಲಕ ಬದಲಾಯಿಸುವಂತೆ ಸರ್ಕಾರ ಬ್ಯಾಂಕುಗಳಿಗೆ ಈಗಾಗಲೇ ಆದೇಶಿಸಿದೆ. ಹೊಸ ಹಣವನ್ನು 14 ದಿನಗಳವರೆಗೆ ಕ್ಯಾರೆಂಟೈನ್ ಅಡಿಯಲ್ಲಿ ಇರಿಸಲು ಮತ್ತು ಹೆಚ್ಚಿನ ತಾಪಮಾನದಲ್ಲಿ ಇರಿಸಿ, ಜೊತೆಗೆ ನೇರಳಾತೀತ ಬೆಳಕಿನಿಂದ ಅದನ್ನು ಶೋಧಿಸಿ, ಸೋಂಕುರಹಿತವಾಗಿ ಸಾರ್ವಜನಿಕರಿಗೆ ಹಿಂದಿರುಗಿಸಲು ನಿರ್ದೇಶಿಸಲಾಗಿದೆ.

ಜನವರಿ 17ರಿಂದಲೇ ಹೊಸ ನೋಟುಗಳ ವಿತರಣೆ
 

ಜನವರಿ 17ರಿಂದಲೇ ಹೊಸ ನೋಟುಗಳ ವಿತರಣೆ

ಜನವರಿ 17ರಿಂದಲೇ ಚೀನಾ ಸರ್ಕಾರ ಹೊಸ ನೋಟುಗಳನ್ನು ವಿತರಣೆ ಮಾಡುತ್ತಿದೆ. ಈಗಾಗಲೇ 4 ಬಿಲಿಯನ್‌ ಯುವಾನ್ (572 ಮಿಲಿಯನ್ ಅಮೆರಿಕನ್ ಡಾಲರ್) ನಷ್ಟು ಹಣವನ್ನು ದೇಶಾದ್ಯಂತ ವಿತರಣೆ ಮಾಡಲಾಗಿದೆ.

ಜೊತೆಗೆ ಫೆಬ್ರವರಿ 3 ಮತ್ತು 13ರ ನಡುವೆ ಶೆನ್ಜೆನ್ ಹೊರತುಪಡಿಸಿ ದಕ್ಷಿಣ ಪ್ರಾಂತ್ಯದ ಗುವಾಂಗ್‌ಡಾಂಗ್‌ಗೆ ಸುಮಾರು 3 ಬಿಲಿಯನ್ ಯುವಾನ್‌ಗಳನ್ನು(ಚೀನಾದ ಕರೆನ್ಸಿ) ವಿತರಿಸಲಾಗಿದೆ. ಆದರೆ 7.8 ಬಿಲಿಯನ್ ಯುವಾನ್‌ಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಪಿಬಿಒಸಿ ತಿಳಿಸಿದೆ.

English summary

China To Destroy 85.6 Billion dollar Paper Currency

China’s central bank says it plans to destroy most of the banknotes from hardest hit coronavirus regions
Company Search
COVID-19