For Quick Alerts
ALLOW NOTIFICATIONS  
For Daily Alerts

ಚೀನಾ ಸಾಲ ಆಪ್ ಪ್ರಕರಣ: 46.67 ಕೋಟಿ ವಶಕ್ಕೆ ಪಡೆದ ಇಡಿ

|

ಚೀನಾದ ವ್ಯಕ್ತಿಗಳು ನಿಯಂತ್ರಣ ಮಾಡುವಂತಹ, ಕಾನೂನು ಬಾಹಿರವಾದ ಸ್ಮಾರ್ಟ್‌ಫೋನ್ ಆಧಾರಿತ ತ್ವರಿತ ಸಾಲಗಳ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀಯಂತಹ ಆನ್‌ಲೈನ್ ಪಾವತಿ ಗೇಟ್‌ವೇಗಳ ಬೆಂಗಳೂರಿನ ಕಚೇರಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಸುಮಾರು 46.67 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.

 

ಈಸಿಬುಝ್‌, ರೋಝರ್‌ಪೇ, ಕ್ಯಾಶ್‌ಫ್ರೀ ಮತ್ತು ಪೇಟಿಎಂನ ವಿವಿಧ ಬ್ಯಾಂಕ್ ಖಾತೆಗಳು ಮತ್ತು ವರ್ಚುವಲ್ ಖಾತೆಗಳಲ್ಲಿ ಇರಿಸಲಾಗಿದ್ದ 46.67 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಪುಣೆ ಮೂಲದ ಈಸಿಬುಝ್‌ ಪ್ರೈವೇಟ್ ಲಿಮಿಟೆಡ್‌ನಿಂದ ಒಟ್ಟು 33.36 ಕೋಟಿ ರೂ., ಬೆಂಗಳೂರಿನ ರೋಝರ್‌ಪೇ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌ನಿಂದ 8.21 ಕೋಟಿ ರೂ., ಬೆಂಗಳೂರಿನಲ್ಲಿರುವ ಕ್ಯಾಶ್‌ಫ್ರೀ ಪೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ರೂ. 1.28 ಕೋಟಿ ಮತ್ತು ನವದೆಹಲಿಯ ಪೇಟಿಎಂ ಪೇಮೆಂಟ್ ಸರ್ವೀಸಸ್ ಲಿಮಿಟೆಡ್‌ನಿಂದ ರೂ. 1.11 ಕೋಟಿ ಪತ್ತೆಯಾಗಿದೆ.

 

ಚೀನಾದ ಸಾಲ ಆಪ್ ಪ್ರಕರಣ: ಪೇಟಿಎಂ ಮೇಲೆ ಇಡಿ ದಾಳಿಚೀನಾದ ಸಾಲ ಆಪ್ ಪ್ರಕರಣ: ಪೇಟಿಎಂ ಮೇಲೆ ಇಡಿ ದಾಳಿ

ಫೆಡರಲ್ ತನಿಖಾ ಸಂಸ್ಥೆಯು ದಾಳಿಯ ಸಮಯದಲ್ಲಿ "ಈ ಚೀನೀ ವ್ಯಕ್ತಿಗಳ ನಿಯಂತ್ರಿತ ಘಟಕಗಳ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದೆ," ಎಂದು ಹೇಳಿದ್ದಾರೆ. ಭಾರತೀಯರ ನಕಲಿ ದಾಖಲೆಗಳನ್ನು ಬಳಸುತ್ತಾರೆ ಮತ್ತು ನಕಲಿ ನಿರ್ದೇಶಕರನ್ನಾಗಿ ಮಾಡುವುದು ಅಪರಾಧದ ಆದಾಯ ಎಂದು ಪರಿಗಣಿಸಲಾಗುತ್ತದೆ ಎಂದು ಆರೋಪ ಮಾಡಲಾಗಿದೆ.

ಚೀನಾ ಸಾಲ ಆಪ್ ಪ್ರಕರಣ: 46.67 ಕೋಟಿ ವಶಕ್ಕೆ ಪಡೆದ ಇಡಿ

ಚೀನೀ ವ್ಯಕ್ತಿಗಳು ನಿರ್ವಹಣೆ ಮಾಡುವ ಆರೋಪ

"ಈ ಘಟಕಗಳನ್ನು ಚೀನೀ ವ್ಯಕ್ತಿಗಳು ನಿಯಂತ್ರಿಸುತ್ತಾರೆ/ನಿರ್ವಹಿಸುತ್ತಾರೆ," ಎಂದು ಕೂಡಾ ಇಡಿ ಹೇಳಿದೆ. "ಪೇಮೆಂಟ್ ಗೇಟ್‌ವೇಗಳು/ಬ್ಯಾಂಕ್‌ಗಳೊಂದಿಗೆ ಹೊಂದಿರುವ ವಿವಿಧ ವ್ಯಾಪಾರಿ ಐಡಿಗಳು/ಖಾತೆಗಳ ಮೂಲಕ ಹೇಳಲಾದ ಘಟಕಗಳು ತಮ್ಮ ಶಂಕಿತ/ಅಕ್ರಮ ವ್ಯವಹಾರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ವಿಚಾರವಾಗಿ ರೇಜರ್‌ಪೇ, ಪೇಟಿಎಂ ಮತ್ತು ಕ್ಯಾಶ್‌ಫ್ರೀಯಂತಹ ಆನ್‌ಲೈನ್ ಪಾವತಿ ಗೇಟ್‌ವೇಗಳ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗುತ್ತಿದೆ," ಎಂದು ಇತ್ತೀಚೆಗೆ ದಾಳಿ ಬಳಿಕ ತಿಳಿಸಿದೆ.

ಗೇಮಿಂಗ್ ವ್ಯಸನಕ್ಕೆ ಚೀನಾ ಹಾಕುತ್ತಿದೆ ಕಡಿವಾಣ!ಗೇಮಿಂಗ್ ವ್ಯಸನಕ್ಕೆ ಚೀನಾ ಹಾಕುತ್ತಿದೆ ಕಡಿವಾಣ!

ಈ ಆಪ್‌ಗಳು/ಬ್ಯಾಂಕ್‌ಗಳೊಂದಿಗೆ ಹೊಂದಿರುವ ಖಾತೆಗಳ ಮೂಲಕ ಅಕ್ರಮ ಆದಾಯವನ್ನು ಉತ್ಪಾದನೆ ಮಾಡುತ್ತಿದೆ. ನಕಲಿ ದಾಖಲೆ ಇದೆ. ಈ ಸಾಲದ ಆಪ್‌ಗಳನ್ನು ಬಳಕೆ ಮಾಡಿ ಮೊಬೈಲ್ ಮೂಲಕ ಸಾಲ ಪಡೆದ ಜನರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಘಟಕಗಳ/ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆ ದಾಖಲಿಸಿರುವ ಕನಿಷ್ಠ 18 ಎಫ್‌ಐಆರ್‌ಗಳನ್ನು ಆಧರಿಸಿ ತನ್ನ ಮನಿ ಲಾಂಡರಿಂಗ್ ಪ್ರಕರಣವನ್ನು ಆಧರಿಸಿದೆ ಎಂದು ಇಡಿ ಹೇಳಿದೆ.

English summary

Chinese loan app case: ED freezes Rs 46.67 cr worth funds of Easebuzz, Razorpay, Paytm

Chinese loan app case: recently ED raids Easebuzz, Razorpay, Paytm. Today ED freezes Rs 46.67 cr worth funds of Easebuzz, Razorpay, Paytm.
Story first published: Friday, September 16, 2022, 15:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X