For Quick Alerts
ALLOW NOTIFICATIONS  
For Daily Alerts

ಚೈನೀಸ್ ಸ್ಮಾರ್ಟ್ ಫೋನ್ ಗಳಿಗೆ ಭಾರತದಲ್ಲಿ ಬಿತ್ತು ಗುನ್ನಾ

|

ಚೈನೀಸ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ಮಾರುಕಟ್ಟೆ ಪಾಲು ಜೂನ್ ತ್ರೈಮಾಸಿಕ ಅಂತ್ಯಕ್ಕೆ ಭಾರತದಲ್ಲಿ 9% ಇಳಿಕೆ ಆಗಿದೆ. ಮಾರ್ಚ್ ಕೊನೆಗೆ ಶೇಕಡಾ 81ರಷ್ಟಿದ್ದ ಮಾರುಕಟ್ಟೆ ಪಾಲು ಜೂನ್ ಕೊನೆಗೆ 72ಕ್ಕೆ ಕುಸಿದಿದೆ. ಚೀನಾವಿರೋಧಿ ಭಾವನೆ, ಆಮದು ವಿಳಂಬ, ಭದ್ರತಾ ಕಾರಣಗಳು ಹಾಗೂ ಪೂರೈಕೆಯಲ್ಲಿನ ವ್ಯತ್ಯಯ ಈ ಎಲ್ಲ ಅಂಶಗಳು ಇದಕ್ಕೆ ಕಾರಣ ಆಗಿವೆ ಎಂದು ಕೌಂಟರ್ ಪಾಯಿಂಟ್ ತ್ರೈಮಾಸಿಕ ಸಂಶೋಧನಾ ವರದಿ ನೀಡಿದೆ.

ಒಪ್ಪೊ, ವಿವೋ ಮತ್ತು ರಿಯಾಲ್ಮಿಯಂಥ ಪ್ರಮುಖ ಚೈನೀಸ್ ಬ್ರ್ಯಾಂಡ್ ಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಇದರ ಜತೆ ಸರ್ಕಾರದಿಂದ ಚೀನಾ ಮೂಲದ 50ಕ್ಕೂ ಹೆಚ್ಚು ಅಪ್ಲಿಕೇಶನ್ ಗಳ ಮೇಲೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಚೀನಾವಿರೋಧಿ ಭಾವನೆ ಇದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳು ದೇಶದೊಳಕ್ಕೆ ಬರುವುದು ತಡವಾಗುತ್ತಿದೆ. ಇವೆಲ್ಲವೂ ಸೇರಿಕೊಂಡು ಮಾರುಕಟ್ಟೆ ಪಾಲಿನ ಮೇಲೆ ಪ್ರಭಾವ ಬೀರಿದೆ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

ಜೂನ್ ತ್ರೈಮಾಸಿಕಕ್ಕೆ ಭರ್ತಿ ಪೆಟ್ಟು

ಜೂನ್ ತ್ರೈಮಾಸಿಕಕ್ಕೆ ಭರ್ತಿ ಪೆಟ್ಟು

ಭಾರತ ಹಾಗೂ ಚೀನಾ ಮಧ್ಯೆ ಗಡಿ ಉದ್ವಿಗ್ನತೆಯು ಚೀನೀ ಉತ್ಪನ್ನಗಳ ಮಾರಾಟಕ್ಕೆ ಏಪ್ರಿಲ್ ನಿಂದ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಭರ್ತಿ ಪೆಟ್ಟನ್ನೇ ನೀಡಿದೆ. ಹಲವು ಒಕ್ಕೂಟ ಹಾಗೂ ಸಂಘ- ಸಂಸ್ಥೆಗಳು, ಖ್ಯಾತನಾಮರು ಭಾರತದಲ್ಲಿ ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು, ಭಾರೀ ಪರಿಣಾಮ ಬೀರಿದೆ. ಆ ಕಾರಣಕ್ಕೆ ಚೀನೀ ಸ್ಮಾರ್ಟ್ ಫೋನ್ ಗಳಿಗೆ ಬೇಡಿಕೆ ಕಡಿಮೆಯಾಗಿ, ಸ್ಯಾಮ್ಸಂಗ್, ನೋಕಿಯಾದಂಥ ಚೀನಾ ಹೊರಗಿನ ಉತ್ಪನ್ನಗಳಿಗೆ ಬೇಡಿಕೆ ಕುದುರುವಂತೆ ಮಾಡಿದೆ. ಈಗಿನ ವರದಿ ಪ್ರಕಾರ, ವಿವೋ ಬ್ರ್ಯಾಂಡ್ ಹೊರತುಪಡಿಸಿ ಚೀನಾದ ಉಳಿದ ಬ್ರ್ಯಾಂಡ್ ಗಳ ಮಾರಾಟ ಜೂನ್ ತ್ರೈಮಾಸಿಕಕ್ಕೆ ಇಳಿಕೆಯಾಗಿದೆ.

ಜಿಯೋ- ಗೂಗಲ್ ಸಹಭಾಗಿತ್ವದಲ್ಲಿ ಸ್ಮಾರ್ಟ್ ಫೋನ್

ಜಿಯೋ- ಗೂಗಲ್ ಸಹಭಾಗಿತ್ವದಲ್ಲಿ ಸ್ಮಾರ್ಟ್ ಫೋನ್

ಮಾರ್ಚ್ ನಲ್ಲಿ ಶಿಯೋಮಿ 30% ಕುಸಿದಿದ್ದು, ಜೂನ್ ಅಂತ್ಯಕ್ಕೆ 29% ಕುಸಿದಿದೆ. ರಿಯಾಲ್ಮಿ ಮಾರುಕಟ್ಟೆ ಪಾಲು 14ರಿಂದ 11 ಪರ್ಸೆಂಟ್ ಗೆ ಕುಸಿದಿದ್ದರೆ, ಇದೇ ಅವಧಿಯಲ್ಲಿ ಒಪ್ಪೋ ಮಾರುಕಟ್ಟೆ ಪಾಲು 12ರಿಂದ 9 ಪರ್ಸೆಂಟ್ ಗೆ ಕುಗ್ಗಿದೆ. ಸ್ಯಾಮ್ಸಂಗ್ ಹಾಗೂ ಭಾರತದ ಬ್ರ್ಯಾಂಡ್ ಗಳಾದ ಲಾವಾ, ಮೈಕ್ರೋಮಾಕ್ಸ್ ನಂಥವುಗಳಿಗೆ ಇದರಿಂದ ಅವಕಾಶದ ಬಾಗಿಲು ತೆರೆದಂತಾಗಿದೆ. ಈ ಮಧ್ಯೆ ಜಿಯೋ- ಗೂಗಲ್ ಸಹಭಾಗಿತ್ವದಲ್ಲಿ ಕೈಗೆಟುಕುವ ದರದಲ್ಲಿ 4G ಸ್ಮಾರ್ಟ್ ಫೋನ್ ತರುವುದರಲ್ಲಿವೆ. ಚೀನಾ ಫೋನ್ ಗಳನ್ನು ಖರೀದಿಸುವುದಕ್ಕೆ ಆಸಕ್ತಿ ಇಲ್ಲದಿದ್ದರೆ ಗ್ರಾಹಕರಿಗೆ ಪರ್ಯಾಯ ಆಯ್ಕೆಗಳಿಲ್ಲ. ಸ್ಯಾಮ್ಸಂಗ್, ನೋಕಿಯಾ, ಎಲ್.ಜಿ. ಹಾಗೂ ಆಪಲ್ ಕಂಪೆನಿ ಸ್ಮಾರ್ಟ್ ಫೋನ್ ಗಳು ಬಿಟ್ಟರೆ ಹೆಚ್ಚಿನ ಆಯ್ಕೆಗಳಿಲ್ಲ.

ಸ್ಯಾಮ್ಸಂಗ್ ಗೆ ಲಾಭವಾಗಿದೆ

ಸ್ಯಾಮ್ಸಂಗ್ ಗೆ ಲಾಭವಾಗಿದೆ

ಎಲ್.ಜಿ. ಹಾಗೂ ನೋಕಿಯಾ ಫೋನ್ ಗಳು ಬೆಲೆ ಮತ್ತು ಪರ್ಫಾರ್ಮೆನ್ಸ್ ವಿಚಾರಕ್ಕೆ ಸ್ಪರ್ಧೆ ನೀಡಲು ಆಗುತ್ತಿಲ್ಲ. ಇನ್ನು ಆಪಲ್ ಫೋನ್ ಗಳು ಸರಾಸರಿ ಭಾರತೀಯರ ಬಜೆಟ್ ಗೆ ತೀರಾ ದುಬಾರಿ. ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಮಾರಾಟ ಆಗುತ್ತಿರುವ ಸರಾಸರಿ ಬೆಲೆ ಅಂದರೆ 12,801 ರುಪಾಯಿ. ಇದು ಐ.ಡಿ.ಸಿ. ಮಾಹಿತಿ. ಚೀನೀ ಉತ್ಪನ್ನಗಳಿಗೆ ಸ್ಪರ್ಧೆ ನೀಡಿ, ಜೂನ್ ತ್ರೈಮಾಸಿಕದಲ್ಲಿ ಒಂದಿಷ್ಟು ಲಾಭ ಮಾಡಿಕೊಂಡಿರುವುದು ಸ್ಯಾಮ್ಸಂಗ್ ಮಾತ್ರ. ಮಾರ್ಚ್ ತ್ರೈಮಾಸಿಕದಲ್ಲಿ 16% ಇದ್ದ ಮಾರುಕಟ್ಟೆ ಪಾಲು ಜೂನ್ ತ್ರೈಮಾಸಿಕಕ್ಕೆ 26%ಗೆ ಏರಿಕೆ ಆಗಿದೆ.

English summary

Chinese Smartphone Companies Market Share Drop By 9 Percent In India

Chinese smartphone companies market share drop by 9% in India on the end of June quarter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X