For Quick Alerts
ALLOW NOTIFICATIONS  
For Daily Alerts

ಸಿಟಿ ಗ್ರೂಪ್ ನಿಂದ 6000 ಮಂದಿ ನೇಮಕ, 60 ಸಾವಿರ ಮಂದಿಗೆ ತರಬೇತಿ

By ಅನಿಲ್ ಆಚಾರ್
|

ಸಿಟಿ ಗ್ರೂಪ್ ನಿಂದ ಮುಂದಿನ ಮೂರು ವರ್ಷದಲ್ಲಿ ಏಷ್ಯಾದಲ್ಲಿ ಆರು ಸಾವಿರ ಯುವ ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಯುವಜನರು ತೀರಾ ಗಂಭೀರವಾದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಅವರಿಗೆ ಭರವಸೆ ನೀಡುವ ಪ್ರಯತ್ನ ಇದಾಗಿದೆ.

 

"ಈಗಿನ ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳಲು ಐದು ವರ್ಷ ಬೇಕಾಗಬಹುದು"

ಏಷ್ಯಾ ವಿಭಾಗದಲ್ಲಿ ಬರುವ ಸಿಟಿ ಗ್ರೂಪ್ ನ ಸಾಂಸ್ಥಿಕ ಹಾಗೂ ರೀಟೇಲ್ ವ್ಯವಹಾರದಲ್ಲಿ 24 ವರ್ಷದೊಳಗಿನ 60 ಸಾವಿರ ಮಂದಿಗೆ ಮುಂದಿನ ಮೂರು ವರ್ಷದಲ್ಲಿ ಉದ್ಯೋಗ ತರಬೇತಿ ನೀಡಲಾಗುತ್ತದೆ. ನ್ಯೂಯಾರ್ಕ್ ಮೂಲದ ಈ ಬ್ಯಾಂಕ್ ಶುಕ್ರವಾರ ಈ ಬಗ್ಗೆ ತಿಳಿಸಿದೆ.

ಸಿಟಿ ಹಾಗೂ ಸಿಟಿ ಫೌಂಡೇಷನ್ ನಿಂದ 3.5 ಕೋಟಿ ಯುಎಸ್ ಡಿ ಹೂಡಿಕೆ

ಸಿಟಿ ಹಾಗೂ ಸಿಟಿ ಫೌಂಡೇಷನ್ ನಿಂದ 3.5 ಕೋಟಿ ಯುಎಸ್ ಡಿ ಹೂಡಿಕೆ

ಏಷ್ಯಾದಲ್ಲಿ 2023ರ ಹೊತ್ತಿಗೆ ಕಡಿಮೆ ಆದಾಯ ಇರುವ ಯುವಜನರಿಗೆ ಉದ್ಯೋಗ ಸಾಧ್ಯತೆ ಹೆಚ್ಚಿಸುವ ಸಲುವಾಗಿಯೇ ಸಿಟಿ ಹಾಗೂ ಸಿಟಿ ಫೌಂಡೇಷನ್ ನಿಂದ 3.5 ಕೋಟಿ ಅಮೆರಿಕ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಲಾಗಿದೆ. ಇಡೀ ವಿಶ್ವದಲ್ಲಿನ ಒಟ್ಟು ಯುವ ಜನರ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಏಷ್ಯಾದಲ್ಲೇ ಇದೆ. ಅಂದರೆ, ಅಂದಾಜು 70 ಕೋಟಿ ಯುವ ಜನರಿದ್ದಾರೆ. ವಿಶ್ವ ಕಾರ್ಮಿಕ ಸಂಸ್ಥೆ ಪ್ರಕಾರ, ಈ ಪೈಕಿ 20%ನಷ್ಟು ದುಡಿಯವ ವಯಸ್ಸಿನವರಿದ್ದು, ಅದರಲ್ಲಿ ಅರ್ಧದಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. 2020ರ ಕೊನೆ ಹೊತ್ತಿಗೆ 13 ರಾಷ್ಟ್ರಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಕೆಲವು ಕಡೆಯಂತೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಯುವಜನರ ನಿರುದ್ಯೋಗ ದರವು ದುಪ್ಪಟ್ಟಾಗಲಿದೆ.

ಅತಿ ದೊಡ್ಡ ಆದಾಯ ಏಷ್ಯಾದಿಂದ

ಅತಿ ದೊಡ್ಡ ಆದಾಯ ಏಷ್ಯಾದಿಂದ

ಏಷ್ಯಾ ಪೆಸಿಫಿಕ್ ನಲ್ಲಿ ಯುವಜನರ ನಿರುದ್ಯೋಗ ಬಿಕ್ಕಟ್ಟು ಇದ್ದು, ಅದರಲ್ಲೂ ಕಡಿಮೆ ಆದಾಯದ, ದುರ್ಬಲ ವರ್ಗದಲ್ಲಿ ಕೊರೊನಾದ ಕಾರಣಕ್ಕೆ ಪರಿಣಾಮ ಮತ್ತೂ ಗಂಭೀರವಾಗಿದೆ ಎಂದು ಸಿಟಿ ಏಷ್ಯಾ ಪೆಸಿಫಿಕ್ ಸಿಇಒ ಪೀಟರ್ ಬಜೆಟ್ ಹೇಳಿದ್ದಾರೆ. ಉತ್ತರ ಅಮೆರಿಕಾ ಹೊರತು ಪಡಿಸಿದಲ್ಲಿ ಸಿಟಿ ಗ್ರೂಪ್ ಗೆ ಅತಿ ದೊಡ್ಡ ಆದಾಯ ಏಷ್ಯಾದಿಂದ ಬರುತ್ತದೆ. 2020ರ ಮಾಹಿತಿ ಪ್ರಕಾರ, ಜಾಗತಿಕ ಆದಾಯದ ಶೇಕಡಾ 25ರಷ್ಟು ಈ ಭಾಗದಿಂದ ಬಂದಿದೆ.

ಹೊಸ ಹುದ್ದೆ, ಪ್ರತಿ ವರ್ಷದ ನೇಮಕಾತಿ ಎರಡೂ ಉಂಟು
 

ಹೊಸ ಹುದ್ದೆ, ಪ್ರತಿ ವರ್ಷದ ನೇಮಕಾತಿ ಎರಡೂ ಉಂಟು

ಬ್ಯಾಂಕಿಂಗ್, ಕ್ಯಾಪಿಟಲ್ ಮಾರ್ಕೆಟ್, ಅಡ್ವೈಸರಿ, ಮಾರ್ಕೆಟ್ಸ್ ಮತ್ತು ಸೆಕ್ಯೂರಿಟೀಸ್ ಸರ್ವೀಸಸ್ ಮತ್ತು ಗ್ರಾಹಕ ಬ್ಯಾಂಕಿಂಗ್ ಹೀಗೆ ವಿವಿಧ ವ್ಯವಹಾರಗಳಲ್ಲಿ ಉದ್ಯೋಗವನ್ನು ನೀಡಲಾಗುತ್ತದೆ ಎಂದು ಹಾಂಕಾಂಗ್ ಮೂಲದ ವಕ್ತಾರ ತಿಳಿಸಿದ್ದಾರೆ. ಈ ಉದ್ಯೋಗಾವಕಾಶಗಳಲ್ಲಿ ಹೊಸ ಹುದ್ದೆ ಹಾಗೂ ಪ್ರತಿ ವರ್ಷದ ನೇಮಕಾತಿ ಎರಡೂ ಒಳಗೊಂಡಿರುತ್ತವೆ. ಏಷ್ಯಾ ಪೆಸಿಫಿಕ್ ನಾದ್ಯಂತ ನೇಮಕಾತಿ ನಡೆಯುತ್ತದೆ. ಆ ಪೈಕಿ ಬಹುತೇಕ ಉದ್ಯೋಗ ಆಗ್ನೇಯ ಏಷ್ಯಾ ಭಾಗಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

English summary

Citigroup To Hire 6000 People In Asia Amid Covid-19 pandemic

Citi group in next 3 years to hire 6000 people in Asia Pacific region. North America based banking company announced on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X