For Quick Alerts
ALLOW NOTIFICATIONS  
For Daily Alerts

51 ಲಕ್ಷದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಸಿಜೆಐ ಬೋಬ್ಡೆ

|

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ (ಎಸ್.ಎ. ಬೋಬ್ಡೆ) ಅವರ ಮೋಟಾರ್ ಸೈಕಲ್ ಗಳ ಪ್ರೀತಿಯನ್ನು ಅವರೆಂದೂ ಮುಚ್ಚಿಟ್ಟಿಲ್ಲ. ನಾಗ್ಪುರ್ ಹೆದ್ದಾರಿಯಲ್ಲಿ ಬೋಬ್ಡೆ ಅವರು ಹಾರ್ಲೆ ಡೇವಿಡ್ಸನ್ ಬೈಕ್ ಓಡಿಸುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಹರಿದಾಡಿವೆ.

ನಾಗ್ಪುರದಲ್ಲಿ ಇರುವ ರಾಜ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಿಜೆಐ (ಭಾರತದ ಮುಖ್ಯ ನ್ಯಾಯಮೂರ್ತಿ) ಎಸ್.ಎ. ಬೋಬ್ಡೆ ಹಾರ್ಲೆ ಡೇವಿಡ್ಸನ್ ಬೈಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾರ್ಲೆ ಡೇವಿಡ್ಸನ್ "ಲಿಮಿಟೆಡ್ ಎಡಿಷನ್ CVO 2020"ಯಲ್ಲಿ ಬೋಬ್ಡೆ ಕೂತಿರುವ ಫೋಟೋ ಟ್ವಿಟ್ಟರ್ ನಲ್ಲಿ ಹಂಚಿಕೆ ಆಗಿದ್ದು, ಆ ನಂತರ ವೈರಲ್ ಆಗಿದೆ.

ಹಾರ್ಲೆ ಡೇವಿಡ್ಸನ್ ಲಿಮಿಟೆಡ್ ಎಡಿಷನ್ ಬೈಕ್

ಹಾರ್ಲೆ ಡೇವಿಡ್ಸನ್ ಲಿಮಿಟೆಡ್ ಎಡಿಷನ್ ಬೈಕ್

ಹಾರ್ಲೆ ಡೇವಿಡ್ಸನ್ "ಲಿಮಿಟೆಡ್ ಎಡಿಷನ್ CVO 2020" ಬೈಕ್ ಬೆಲೆ 51 ಲಕ್ಷ ರುಪಾಯಿ. 2000 ಸಿ.ಸಿ. ಸಾಮರ್ಥ್ಯದ ಈ ಬೈಕ್ V- ಟ್ವಿನ್ ಎಂಜಿನ್. ತೂಕ 400 ಕೇಜಿಗೂ ಹೆಚ್ಚಿಗೆ ಇದೆ. 2019ರ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಆಗುವ ಮುನ್ನ ಅವರು ನೀಡಿದ್ದ ಸಂದರ್ಶನವೊಂದರಲ್ಲಿ, ರಾಯಲ್ ಎನ್ ಫೀಲ್ಡ್ ಕಂಪೆನಿಯ ಬುಲೆಟ್ ಬೈಕ್ ತಮ್ಮ ಬಳಿ ಇತ್ತು, ಅದನ್ನು ಬಳಸುತ್ತಿದ್ದುದಾಗಿ ಹೇಳಿಕೊಂಡಿದ್ದರು.

ರಾಯಲ್ ಎನ್ ಫೀಲ್ಡ್ ಬುಲೆಟ್ ಓಡಿಸುತ್ತಿದ್ದರು

ರಾಯಲ್ ಎನ್ ಫೀಲ್ಡ್ ಬುಲೆಟ್ ಓಡಿಸುತ್ತಿದ್ದರು

"ನನಗೆ ಬೈಕ್ ಓಡಿಸುವುದು ಇಷ್ಟ. ನಾನು ಬುಲೆಟ್ ಬಳಸುತ್ತಿದ್ದೆ" ಎಂದು ಅವರು ಹೇಳಿದ್ದರು. ಅವರ ವಿಶೇಷ ಆಸಕ್ತಿಗಳೇನು ಮತ್ತು ಇಷ್ಟದ ಮೋಟಾರ್ ಸೈಕಲ್ ಯಾವುದು ಎಂದು ಕೇಳಿದ್ದ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದ್ದರು. ಮುಖ್ಯನ್ಯಾಯಮೂರ್ತಿ ಬೋಬ್ಡೆ ಅವರು ಸದ್ಯಕ್ಕೆ ಮಹಾರಾಷ್ಟ್ರದಲ್ಲಿನ ತಮ್ಮ ತವರೂರಿನಲ್ಲಿ ಇದ್ದಾರೆ.

ಟೆಸ್ಟ್ ಡ್ರೈವ್ ಮಾಡುವ ವೇಳೆ ಬಿದ್ದು ಗಾಯ
 

ಟೆಸ್ಟ್ ಡ್ರೈವ್ ಮಾಡುವ ವೇಳೆ ಬಿದ್ದು ಗಾಯ

ಕಳೆದ ವರ್ಷ ಹಾರ್ಲೆ ಡೇವಿಡ್ಸನ್ ಹೈ ಎಂಡ್ ಬೈಕ್ ಟೆಸ್ಟ್ ಡ್ರೈವ್ ಮಾಡುವಾಗ ಅಪಘಾತಕ್ಕೆ ಈಡಾಗಿದ್ದರು. ಬೈಕ್ ನಿಂದ ಬಿದ್ದು, ಗಾಯ ಮಾಡಿಕೊಂಡಿದ್ದರು. ಆ ಕಾರಣಕ್ಕೆ ಕೋರ್ಟ್ ಕಲಾಪಗಳಿಂದಲೂ ಕೆಲ ಸಮಯ ದೂರ ಇರಬೇಕಾಯಿತು. ಜತೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಚರ್ಚೆಗಳಿಂದಲೂ ದೂರ ಉಳಿಯಬೇಕಾಯಿತು.

English summary

CJI SA Bobde On Harley Davidson Bike Picture Went Viral On Social Media

Limited edition Harley Davidson bike ride by chief justice of India SA Bobde on Sunday. Pictures went viral.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X