For Quick Alerts
ALLOW NOTIFICATIONS  
For Daily Alerts

Closing Bell: ಆರನೇ ದಿನವೂ ನಷ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿ

|

ಭಾರತೀಯ ಷೇರುಗಳ ಶುಕ್ರವಾರ ಸತತ ಆರನೇ ದಿನಕ್ಕೆ ಕುಸಿತವನ್ನು ಕಂಡಿದೆ. ಲಾಭದಲ್ಲೇ ಆರಂಭಿಕ ವಹಿವಾಟು ಪ್ರಾರಂಭವಾಗಿದ್ದು, ಆದರೆ ವಹಿವಾಟು ಅಂತ್ಯದಲ್ಲಿ ನಷ್ಟದೊಂದಿಗೆ ಕೊನೆಯಾಗಿದೆ. ಪ್ರಮುಖವಾಗಿ ಬ್ಯಾಂಕಿಂಗ್, ಹಣಕಾಸು ಮತ್ತು ಲೋಹದ ಷೇರುಗಳಲ್ಲಿ ನಷ್ಟ ಕಂಡು ಬಂದರೆ, ಆಟೋಮೊಬೈಲ್, ಗ್ರಾಹಕ ಸರಕುಗಳು ಮತ್ತು ಫಾರ್ಮಾದಲ್ಲಿ ಲಾಭ ಕಂಡು ಬಂದಿದೆ.

 

ಹೂಡಿಕೆದಾರರು ನಿರಂತರವಾಗಿ ಹೆಚ್ಚಿನ ಹಣದುಬ್ಬರ ಮತ್ತು ಕೇಂದ್ರೀಯ ಬ್ಯಾಂಕುಗಳ ನೀತಿಯ ಪರಿಣಾಮದಿಂದಾಗಿ ಆತಂಕದಲ್ಲಿದ್ದದು ಷೇರು ಪೇಟೆಯು ನಿರಂತರ ಕುಸಿತ ಕಾಣುತ್ತಿದೆ. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 137 ಪಾಯಿಂಟ್‌ಗಳು ಅಥವಾ 0.26 ಶೇಕಡಾ ಕುಸಿದು 52,794 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 26 ಪಾಯಿಂಟ್ ಅಥವಾ 0.16 ರಷ್ಟು ಕುಸಿದು 15,782 ಕ್ಕೆ ಸ್ಥಿರವಾಗಿದೆ.

Opening Bell: ಚೇತರಿಸಿದ ನಿಫ್ಟಿ, ಸೆನ್ಸೆಕ್ಸ್: 450 ಅಂಕ ಜಿಗಿತ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.03 ಮತ್ತು ಸ್ಮಾಲ್ ಕ್ಯಾಪ್ ಶೆಡ್ 0.94 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ದುರ್ಬಲಗೊಂಡವು. ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಮತ್ತು ನಿಫ್ಟಿ ಮೆಟಲ್ ಅನುಕ್ರಮವಾಗಿ ಶೇಕಡಾ 1.23, ಶೇಕಡಾ 1.26 ಮತ್ತು ಶೇಕಡಾ 2.08 ರಷ್ಟು ಕುಸಿದಿದೆ.

 Closing Bell: ಆರನೇ ದಿನವೂ ನಷ್ಟದಲ್ಲಿ ಸೆನ್ಸೆಕ್ಸ್, ನಿಫ್ಟಿ

ಯಾವೆಲ್ಲಾ ಷೇರುಗಳು ನಷ್ಟ, ಯಾವುದಕ್ಕೆ ಲಾಭ?

ಪ್ರಮುಖವಾಗಿ ಹಿಂಡಾಲ್ಕೊ ಭಾರೀ ನಷ್ಟವನ್ನು ಕಂಡಿದೆ. ಷೇರುಗಳು ಶೇಕಡಾ 4.84 ರಿಂದ 386.20 ಕ್ಕೆ ತಲುಪಿದೆ. ಎಸ್‌ಬಿಐ, ಜೆಎಸ್‌ಡಬ್ಲ್ಯು ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಕೂಡ ನಷ್ಟ ಅನುಭವಿಸಿವೆ. ಬಿಎಸ್‌ಇಯಲ್ಲಿ 2,159 ಷೇರುಗಳು ಏರಿಕೆ ಕಂಡು, 1,178 ಕುಸಿತ ಕಂಡಿದ್ದರಿಂದ ಒಟ್ಟಾರೆ ಮಾರುಕಟ್ಟೆ ಉತ್ತಮವಾಗಿತ್ತು.

ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಮಾರುತಿ, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ವಿಪ್ರೋ, ಎಚ್‌ಡಿಎಫ್‌ಸಿ ಟ್ವಿನ್ಸ್ (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್) ಮತ್ತು ಟೆಕ್ ಮಹೀಂದ್ರಾ ಭಾರೀ ಕುಸಿತ ಕಂಡಿದೆ.

 

ಇದಕ್ಕೆ ವ್ಯತಿರಿಕ್ತವಾಗಿ, ಸನ್ ಫಾರ್ಮಾ, ಎಂ & ಎಂ, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಾಭದೊಂದಿಗೆ ಷೇರು ಪೇಟೆಯಲ್ಲಿ ವಹಿವಾಟು ಕೊನೆ ಮಾಡಿದೆ. ಅಲ್ಲದೆ, ಟಾಟಾ ಮೋಟಾರ್ಸ್ ಮಾರ್ಚ್ 31, 2022 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಸಣ್ಣ ನಷ್ಟ ಕಂಡ ಬಗ್ಗೆ ಪ್ರಕಟಿಸಿದ ಬಳಿಕ 8.51 ರಷ್ಟು ಏರಿಕೆಯಾಗಿ ರೂಪಾಯಿ 404 ಕ್ಕೆ ತಲುಪಿದೆ.

5 ಲಕ್ಷ ಕೋಟಿ ರೂ. ನಷ್ಟ: ಸೆನ್ಸೆಕ್ಸ್ ಕುಸಿತಕ್ಕೆ ಕಾರಣವೇನು?

ಚೇತರಿಕೆ ಕಂಡಿದ್ದ ನಿಫ್ಟಿ, ಸೆನ್ಸೆಕ್ಸ್

ಕಳೆದ ಹಲವಾರು ದಿನಗಳಿಂದ ಕುಸಿತ ಕಾಣುತ್ತಿದ್ದ ನಿಫ್ಟಿ, ಸೆನ್ಸೆಕ್ಸ್ ಇಂದು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿತ್ತು. ಶುಕ್ರವಾರ ಭಾರತೀಯ ಇಕ್ವಿಟಿಗಳು ಜಿಗಿತ ಕಂಡಿತ್ತು. ಯುಎಸ್‌ ಷೇರುಗಳ ಏರಿಕೆ ಬಳಿಕ, ಏಷ್ಯನ್ ಷೇರು ಮಾರುಕಟ್ಟೆ ಏರಿತ್ತು. ಆದರೂ ಹೂಡಿಕೆದಾರರು ನಿರಂತರವಾಗಿ ಹೆಚ್ಚಿನ ಹಣದುಬ್ಬರದಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.

ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ (SGX ನಿಫ್ಟಿ) ನಿಫ್ಟಿ ಫ್ಯೂಚರ್ಸ್‌ನಲ್ಲಿನ ದೇಶೀಯ ಸೂಚ್ಯಂಕಗಳು ಶುಭಾರಂಭ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 481 ಪಾಯಿಂಟ್‌ಗಳು ಅಥವಾ ಶೇಕಡಾ 0.91 ರಷ್ಟು ಜಿಗಿದು 53,411 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 147 ಪಾಯಿಂಟ್ ಅಥವಾ 0.93 ರಷ್ಟು ಏರಿಕೆಯಾಗಿ 15,955 ಕ್ಕೆ ವಹಿವಾಟು ನಡೆಸಿತು. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.47 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 2.57 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಉತ್ತಮವಾಗಿ ವಹಿವಾಟು ಆರಂಭ ಮಾಡಿದೆ. ಎಲ್ಲಾ 15 ಸೆಕ್ಟರ್ ಗೇಜ್‌ಗಳು ಪಾಸಿಟಿವ್ ವಹಿವಾಟು ಆರಂಭ ಮಾಡಿದೆ.

English summary

Closing Bell: Sensex, Nifty Extend Losses To Sixth Day

Closing Bell: Sensex, Nifty Extend Losses To Sixth Day In Volatile Trade.
Story first published: Friday, May 13, 2022, 17:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X