Closing Bell: ವಹಿವಾಟಿನ ಅಂತ್ಯಕ್ಕೆ ಲಾಭ: ಐಟಿ ಷೇರುಗಳ ಏರಿಕೆ
ಶುಕ್ರವಾರ(ಮೇ 27)ದಂದು ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯದ ವೇಳೆಗೆ ಲಾಭದೊಂದಿಗೆ ಸ್ಥಿರವಾಗಿದೆ. ಮುಖ್ಯವಾಗಿ ಐಟಿ ಷೇರುಗಳು ಏರಿಕೆ ಕಂಡಿದೆ. ರಾತ್ರೋರಾತ್ರಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಲಾಭವನ್ನು ಕಂಡಿದೆ. ಈ ಬೆನ್ನಲ್ಲೇ ಮೇ 27ರ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಗಳು ಲಾಭದೊಂದಿಗೆ ಷೇರು ಪೇಟೆಗೆ ಇಳಿದಿದೆ. ವಹಿವಾಟಿನ ಅಂತ್ಯದಲ್ಲೂ ಲಾಭ ಮುಂದುವರಿದಿದೆ.
ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಆಟೋಮೊಬೈಲ್ ಷೇರುಗಳ ಮೇಲೆ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. 30-ಷೇರು ಬಿಎಸ್‌ಇ ಸೆನ್ಸೆಕ್ಸ್ 632 ಪಾಯಿಂಟ್‌ಗಳು ಅಥವಾ ಶೇಕಡಾ 1.17 ರಷ್ಟು ಏರಿಕೆಯಾಗಿ 54,885 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 182 ಪಾಯಿಂಟ್ ಅಥವಾ 1.13 ರಷ್ಟು ಏರಿಕೆ ಕಂಡು 16,352 ಕ್ಕೆ ಸ್ಥಿರವಾಯಿತು.
Opening Bell: ಜಾಗತಿಕ ಮಾರುಕಟ್ಟೆ ಲಾಭ: ನಿಫ್ಟಿ, ಸೆನ್ಸೆಕ್ಸ್ ಏರಿಕೆ
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.38 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.36 ರಷ್ಟು ಏರಿದೆ. ನಿಫ್ಟಿ ಐಟಿ, ನಿಫ್ಟಿ ಪ್ರೈವೇಟ್ ಬ್ಯಾಂಕ್ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇಕಡಾ 2.54, 1.84 ಮತ್ತು ಶೇಕಡಾ 1.56 ರಷ್ಟು ಏರಿಕೆಯಾಗಿದೆ.

ಹೆಚ್ಚು ಲಾಭ ಗಳಿಸಿದ ಅಪೊಲೊ ಹಾಸ್ಪಿಟಲ್ಸ್ ಷೇರು
ಅಪೊಲೊ ಹಾಸ್ಪಿಟಲ್ಸ್ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 5.11 ರಷ್ಟು ಏರಿಕೆಯಾಗಿ ರೂಪಾಯಿ 3,850 ಕ್ಕೆ ತಲುಪಿದೆ. ಟೆಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಲೈಫ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ವಿಪ್ರೋ ಸಹ ಲಾಭ ಗಳಿಸಿದೆ. 2,215 ಷೇರುಗಳು ಲಾಭವನ್ನು ಕಂಡಿದ್ದರೆ, ಇದೇ ಸಂದರ್ಭದಲ್ಲಿ ಬಿಎಸ್‌ಇಯಲ್ಲಿ 1,108 ಷೇರುಗಳು ಇಳಿಕೆ ಕಂಡಿದೆ.
30-ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ವಿಪ್ರೋ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ಎಲ್ & ಟಿ, ಎಚ್‌ಸಿಎಲ್ ಟೆಕ್, ಹಿಂದೂಸ್ತಾನ್ ಯೂನಿಲಿವರ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಎಂ & ಎಂ ಹೆಚ್ಚು ಲಾಭ ಕಂಡಿದೆ. ಈ ಸಂದರ್ಭದಲ್ಲೇ ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಪವರ್‌ಗ್ರಿಡ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಏಷ್ಯನ್ ಪೇಂಟ್ಸ್ ಮತ್ತು ನೆಸ್ಲೆ ಇಂಡಿಯಾ ನಷ್ಟವನ್ನು ಕಂಡಿದೆ.