For Quick Alerts
ALLOW NOTIFICATIONS  
For Daily Alerts

ಬಿಟ್‌ಕಾಯಿನ್‌ನಲ್ಲಿ 'ಕಾಯಿನ್' ಇದ್ದ ಮಾತ್ರಕ್ಕೆ ಅದು ಹಣವಲ್ಲ: ಐಎಂಎಫ್ ಮುಖ್ಯಸ್ಥೆ

|

ಕ್ರಿಪ್ಟೋ ಉತ್ಪನ್ನಗಳನ್ನು ಹಣದ ನಡುವೆ ಹಲವಾರು ಗೊಂದಲಗಳ ವಿರುದ್ಧ ಸೋಮವಾರ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಪ್ರತಿಕ್ರಿಯೆ ನೀಡಿದ್ದಾರೆ. ಬಿಟ್‌ಕಾಯಿನ್‌ನಲ್ಲಿ 'ಕಾಯಿನ್' ಎಂಬ ಪದ ಇದ್ದ ಮಾತ್ರಕ್ಕೆ ಅದು ಹಣವಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ ಕುರಿತು ನಡೆದ ಅಧಿವೇಶನದಲ್ಲಿ ಮಾತನಾಡಿದ ಐಎಂಎಫ್ ಮುಖ್ಯಸ್ಥ ಕ್ರಿಸ್ಟಾಲಿನಾ ಜಾರ್ಜಿವಾ, "ಕ್ರಿಪ್ಟೋ ಉತ್ಪನ್ನಗಳು ಹೆಚ್ಚು ಕಡಿಮೆ ವೆಚ್ಚದಲ್ಲಿ ಮತ್ತು ಉತ್ತಮ ಒಳಗೊಳ್ಳುವಿಕೆಯಲ್ಲಿ ವೇಗವಾಗಿ ಲಾಭವನ್ನು ನೀಡಬಹುದು. ಆದರೆ ಸೇಬು ಬೇರೆ ಬಾಳೆಹಣ್ಣು ಬೇರೆಯೇ ಎಂಬುವುದು ನಮಗೆ ತಿಳಿದಿರುವುದು ಅವಶ್ಯಕವಾಗಿದೆ. ಕ್ರಿಪ್ಟೋ ವಿಚಾರದಲ್ಲಿ ನಿಯಂತ್ರಣ ಮುಖ್ಯವಾಗಿದೆ," ಎಂದು ಉಲ್ಲೇಖ ಮಾಡಿದರು.

ಕ್ರಿಪ್ಟೋಕರೆನ್ಸಿ ಮತ್ತೆ ಕುಸಿತ, ಮಾರುಕಟ್ಟೆ ಮೌಲ್ಯ 1.36 ಟ್ರಿಲಿಯನ್ ಡಾಲರ್ಕ್ರಿಪ್ಟೋಕರೆನ್ಸಿ ಮತ್ತೆ ಕುಸಿತ, ಮಾರುಕಟ್ಟೆ ಮೌಲ್ಯ 1.36 ಟ್ರಿಲಿಯನ್ ಡಾಲರ್

ವರ್ಲ್ಡ್ ಎಕನಾಮಿಕ್ ಫೋರಮ್ ವಾರ್ಷಿಕ ಸಭೆಯ ಅದೇ ಅಧಿವೇಶನದಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಫ್ರಾನ್ಸ್ ಗವರ್ನರ್ ಫ್ರಾಂಕೋಯಿಸ್ ವಿಲ್ಲೆರಾಯ್ ಡಿ ಗಲ್ಹ ಮಾತನಾಡಿ ನೋಟುಗಳನ್ನು ಪರಿಚಯಿಸಿದಾಗ ಅವುಗಳು ಉತ್ತಮ ತಾಂತ್ರಿಕ ಪ್ರಗತಿಯನ್ನು ಸಾಬೀತುಪಡಿಸಿದವು ಎಂದು ತಿಳಿಸಿದ್ದಾರೆ.

ಬಿಟ್‌ಕಾಯಿನ್‌ನಲ್ಲಿ 'ಕಾಯಿನ್' ಇದ್ದ ಮಾತ್ರಕ್ಕೆ ಅದು ಹಣವಲ್ಲ: ಐಎಂಎಫ

"ನಾನು ಯಾವಾಗಲೂ ಕ್ರಿಪ್ಟೋವನ್ನು ಸ್ವತ್ತು ಎಂದು ಉಲ್ಲೇಖಿಸಿ ಮಾತನಾಡುತ್ತೇನೆಯೇ ಹೊರತು ಅದನ್ನು ಹಣ ಎಂದು ಅಲ್ಲ. ಯಾವುದೇ ಕರೆನ್ಸಿಗೆ, ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿಯಲ್ಲಿ ಯಾರೂ ಕೂಡಾ ಜವಾಬ್ದಾರರಲ್ಲ," ಎಂದು ವಿವರಿಸಿದರು.

ಕ್ರಿಪ್ಟೋದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಜನರು

"ನಾವು ಒಂದು ಕಡೆ ಕರೆನ್ಸಿ ಮತ್ತು ಇನ್ನೊಂದು ಬದಿಯಲ್ಲಿ ನಂಬಿಕೆ ಹೊಂದಲು ಸಾಧ್ಯವಿಲ್ಲ. ಅವು ಜೊತೆಯಾಗಿ ಇರಬೇಕು. ಜನರು ಕ್ರಿಪ್ಟೋದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಂಬಿಕೆಯಿಂದಾಗಿ ಭಾರೀ ನಷ್ಟ ಉಂಟಾಗುತ್ತಿದೆ," ಎಂದು ಅಭಿಪ್ರಾಯಿಸಿದರು.

ಇನ್ನು ಜಗತ್ತಿನ ಪ್ರಮುಖ ಅರ್ಥ ವ್ಯವಸ್ಥೆಗಳ್ಲಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಇಲ್ಲ ಎಂದು ಕೂಡಾ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಈ ವೇಳೆಯೇ ಸ್ಪಷ್ಟಪಡಿಸಿದ್ದಾರೆ. ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಕ್ರಿಸ್ಟಾಲಿನಾ ಜಾರ್ಜಿವಾ ಬಳಿ ಹಿಂಜರಿತದ ನಿರೀಕ್ಷೆ ಇದೆಯೇ ಎಂದು ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜಿವಾ, "ಈ ವೇಳೆ ಹಿಂಜರಿತ ಎದುರಾಗದು. ಆದರೆ ಇದರ ಅರ್ಥ ಮುಂದೆ ಹಿಂಜರಿತ ಬರುವುದೇ ಇಲ್ಲ ಎಂದು ಅಲ್ಲ," ಎಂದು ಸ್ಪಷ್ಟಣೆ ನೀಡಿದ್ದಾರೆ.

English summary

Coin' in Bitcoin’s name doesn’t make it money Says IMF chief

'Coin' in Bitcoin’s name doesn’t make it money: IMF chief asserts stance on crypto at WEF 2022.
Story first published: Tuesday, May 24, 2022, 14:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X