For Quick Alerts
ALLOW NOTIFICATIONS  
For Daily Alerts

74,000 ಕೋಟಿ ರುಪಾಯಿ ನಷ್ಟ ಅನುಭವಿಸಿದ ಏರ್‌ಟೆಲ್, ವೋಡಾಫೋನ್, ಐಡಿಯಾ

|

ಭಾರತದ ಟೆಲಿಕಾಂ ವಲಯವು ಮತ್ತಷ್ಟು ನಷ್ಟ ಅನುಭವಿಸಿದ್ದು, 2ನೇ ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್, ವೋಡಾಫೋನ್, ಐಡಿಯಾ ಭಾರೀ ನಷ್ಟ ಅನುಭವಿಸಿವೆ.

ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್, ವೋಡಾಫೋನ್, ಐಡಿಯಾ ಒಟ್ಟಾರೆ 74,000 ಕೋಟಿ ರುಪಾಯಿ ನಷ್ಟ ಅನುಭವಿಸಿವೆ. ಸರ್ಕಾರಕ್ಕೆ ನೀಡಬೇಕಿದ್ದ ಬೃಹತ್ ಪ್ರಮಾಣದ ಬಾಕಿ ಮೊತ್ತವನ್ನು ಪಾವತಿಸಬೇಕಿದ್ದ ಸಂಸ್ಥೆಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದ್ದು ನಷ್ಟದ ಹಾದಿ ಹಿಡಿದಿವೆ.

74,000 ಕೋಟಿ ನಷ್ಟ ಅನುಭವಿಸಿದ ಏರ್‌ಟೆಲ್, ವೋಡಾಫೋನ್, ಐಡಿಯಾ

 

ವೋಡಾಫೋನ್, ಐಡಿಯಾ ಒಟ್ಟಾರೆ ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದು 2ನೇ ತ್ರೈಮಾಸಿಕ ಅವಧಿಯಲ್ಲಿ 50,922 ಕೋಟಿ ರುಪಾಯಿಗೆ ತಲುಪಿದೆ. ಇನ್ನು ದೇಶದ 2ನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್‌ಟೆಲ್ ಕೂಡ 23,045 ಕೋಟಿ ರುಪಾಯಿ ನಿವ್ವಳ ನಷ್ಟ ಕಂಡಿವೆ.

BSNLನ 70 ಸಾವಿರ ಉದ್ಯೋಗಿಗಳಿಂದ VRS ಆಯ್ಕೆ

ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೊಂದಾಣಿಕೆಯ ಒಟ್ಟು ಆದಾಯ ಕುರಿತಾಗಿ ವೋಡಾಫೋನ್ , ಐಡಿಯಾ ಏರ್‌ಟೆಲ್ ಸಂಸ್ಥೆಗಳು ಒಟ್ಟಾರೆ 92,000 ಕೋಟಿ ರುಪಾಯಿಯಷ್ಟು ಬಾಕಿ ಮೊತ್ತ ಹಾಗೂ ಬಡ್ಡಿ ಸೇರಿದ ಹಣವನ್ನು ಪಾವತಿಸಬೇಕಾಗಿತ್ತು.

English summary

Combined Loss Of 74,000 Crore for Vodafone, Airtel, Idea

Vodafone, Airtel, Idea Thursday reported that record qurartely losses at 74,000 crore
Story first published: Friday, November 15, 2019, 9:39 [IST]
Company Search
COVID-19