For Quick Alerts
ALLOW NOTIFICATIONS  
For Daily Alerts

Electric Car Vs Petrol Car : ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರು ಮಿತವ್ಯಯವಾ? ನೀವೆಷ್ಟು ಹಣ ಉಳಿಸಬಲ್ಲಿರಿ?

|

ಎಲೆಕ್ಟ್ರಿಕ್ ಕಾರುಗಳು ಈಗೀಗ ಸಾಕಷ್ಟು ಬಿಡುಗಡೆಯಾಗುತ್ತಿವೆ. ಹಲವು ಬ್ರ್ಯಾಂಡ್‌ಗಳು ಇವಿ ಅವತರಣಿಕೆಗಳನ್ನು ಹೊರತರುತ್ತಿವೆ. ಟಾಟಾ ಮೋಟಾರ್ಸ್ ಸಂಸ್ಥೆ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಹೀಂದ್ರ ಅಂಡ್ ಮಹೀಂದ್ರ, ಟೊಯೋಟಾ ಮೊದಲಾದ ಕಂಪನಿಗಳೂ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತಿವೆ. ಭಾರತದಲ್ಲಿ ಈಗ ನಮಗೆ ಬಹಳಷ್ಟು ಇವಿಗಳ ಆಯ್ಕೆ ಲಭ್ಯ ಇದೆ.

 

ಎಲೆಕ್ಟ್ರಿಕ್ ವಾಹನ ಖರೀದಿಯ ಟ್ರೆಂಡ್ ಶುರುವಾಗಿದೆ. ಜನರು ಇವಿ ವಾಹನಗಳತ್ತ ಆಕರ್ಷಿತರಾಗಲು ಪ್ರಮುಖ ಕಾರಣ, ಚಾಲನೆ ವೆಚ್ಚ ಕಡಿಮೆ ಇರುವುದು ಮತ್ತು ಪರಿಸರಸ್ನೇಹಿ ಎಂಬುದು. ಬೆಲೆ ತುಸು ದುಬಾರಿಯಾದರೂ ಜನರು ಎಲೆಕ್ಟ್ರಿಕ್ ಕಾರುಗಳ ಮೇಲೆ ಆಸಕ್ತರಾಗುತ್ತಿದ್ದಾರೆ.

PMV Eas-E : ಭಾರತದ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; ಇಲ್ಲಿದೆ ಅಗ್ಗದ ಕಾರುಗಳ ಪಟ್ಟಿPMV Eas-E : ಭಾರತದ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; ಇಲ್ಲಿದೆ ಅಗ್ಗದ ಕಾರುಗಳ ಪಟ್ಟಿ

ವಾಸ್ತವಿಕವಾಗಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಕಾರುಗಳ ವೆಚ್ಚ ಎಷ್ಟು ಎಂಬುದನ್ನು ಅವಲೋಕಿಸುವುದು ಸಂದರ್ಭೋಚಿತ ಎನಿಸುತ್ತದೆ. ಇದಕ್ಕೆ ಉದಾಹರಣೆಯಾಗಿ ಟಾಟಾ ನೆಕ್ಸಾನ್‌ನ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಅವತರಣಿಕೆಯ ಕಾರುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ಎರಡು ಕಾರುಗಳ ಖರೀದಿ ವೆಚ್ಚ, ಮೈಂಟೆನೆನ್ಸ್ ವೆಚ್ಚ, ಇನ್ಷೂರೆನ್ಸ್ ಇತ್ಯಾದಿ ಎಲ್ಲವನ್ನೂ ನಿರ್ದಿಷ್ಟ ವರ್ಷಗಳ ಅವಧಿಯವರೆಗೆ ತುಲನೆ ಮಾಡಿದರೆ ಹೇಗಿರುತ್ತದೆ?

ಟಾಟಾ ನೆಕ್ಸಾನ್ (ಎಕ್ಸ್‌ಎಂಎ ಎಸ್) ಪೆಟ್ರೋಲ್ ಕಾರು

ಟಾಟಾ ನೆಕ್ಸಾನ್ (ಎಕ್ಸ್‌ಎಂಎ ಎಸ್) ಪೆಟ್ರೋಲ್ ಕಾರು

ಬೆಲೆ: 9,94,900 ರೂ
ಇನ್ಷೂರೆನ್ಸ್: 50,638 ರೂ
ನೊಂದಣಿ ಮತ್ತು ನಿರ್ವಹಣೆ ವೆಚ್ಚ: 78,143 ರೂ
ಒಟ್ಟು ಖರೀದಿ ವೆಚ್ಚ: 11,23,681 ರೂ.

ಇದು ಎಕ್ಸ್‌ಶೋರೂಮ್ ವೆಚ್ಚ. ರೋಡ್ ಟ್ಯಾಕ್ಸ್ ಇತ್ಯಾದಿ ಗಣಿಸಿದರೆ ವೆಚ್ಚ ಇನ್ನಷ್ಟು ಹೆಚ್ಚುತ್ತದೆ. ಒಂದು ಲಕ್ಷ ಕಿಲೋಮೀಟರ್ ದೂರ ಕಾರನ್ನು ಚಲಾಯಿಸಿದಾಗ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಇಲ್ಲಿ ಅಂದಾಜಿಸಬಹುದು.

ಸರ್ವಿಸ್ ವೆಚ್ಚ: 50,000 ರೂ (ಸರಾಸರಿ)
ಇಂಧನ ವೆಚ್ಚ: ಪ್ರತಿ ಕಿಮೀಗೆ 6.92 ರೂ ವೆಚ್ಚ ಎಂದು ಗಣಿಸಿದರೆ ಒಟ್ಟು ಖರ್ಚು 6,92,857 ರೂ ಆಗುತ್ತದೆ.
ಒಟ್ಟು ಚಾಲನಾ ವೆಚ್ಚ: 7,42,857 ರೂ ಆಗುತ್ತದೆ.
ಇದಕ್ಕೆ 6 ವರ್ಷದವರೆಗಿನ ಹೆಚ್ಚುವರಿ ಇನ್ಷೂರೆನ್ಸ್ ಹಣ 39 ಸಾವಿರ ರೂ ಸೇರಿಸಬೇಕು.

ನೀವು ದಿನಕ್ಕೆ 46 ಕಿಮೀಯಷ್ಟು ದೂರ ಕಾರನ್ನು ಚಲಾಯಿಸುವಿರಾದರೆ ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಲು ಆರು ವರ್ಷ ಆಗುತ್ತದೆ. ಹೀಗಾಗಿ, ಆರು ವರ್ಷದಲ್ಲಿ ಕಾರು ಖರೀದಿಸಿದ ವೆಚ್ಚ, ಚಾಲನಾ ವೆಚ್ಚ ಮತ್ತು ಎರಡನೇ ಕಂತಿನ ಇನ್ಷೂರೆನ್ಸ್, ಇವಿಷ್ಟೂ ಸೇರಿ ನೀವು ಕಾರಿಗೆ ವ್ಯಯಿಸುವುದು 19,05,538 ರೂ ಆಗುತ್ತದೆ.

 

ಟಾಟಾ ನೆಕ್ಸಾನ್ ಪ್ರೈಮ್ (ಎಕ್ಸ್‌ಝಡ್ ಪ್ಲಸ್) ಎಲೆಕ್ಟ್ರಿಕ್ ಕಾರು
 

ಟಾಟಾ ನೆಕ್ಸಾನ್ ಪ್ರೈಮ್ (ಎಕ್ಸ್‌ಝಡ್ ಪ್ಲಸ್) ಎಲೆಕ್ಟ್ರಿಕ್ ಕಾರು

ಟಾಟಾ ನೆಕ್ಸಾನ್ ಕಾರಿನ ಬೆಲೆ: 16,30,000 ರೂ
ಇನ್ಷೂರೆನ್ಸ್ ಪ್ರೀಮಿಯಂ: 72,324 ರೂ
ನೊಂದಣಿ ವೆಚ್ಚ: 16,500 ರೂ
ಒಟ್ಟು ಖರೀದಿ ವೆಚ್ಚ: 17,18,824 ರೂ

ಒಂದು ಲಕ್ಷ ಕಿಮೀ ಕಾರು ಚಲಾಯಿಸಿದಾಗ ಆಗುವ ವೆಚ್ಚ:
ಸರ್ವಿಸ್ ವೆಚ್ಚ: 30,000 ರೂ
ಇಂಧನ ವೆಚ್ಚ: ಒಂದ ಲಕ್ಷ ಕಿಮೀಗೆ 68,181 ರೂ.
ಒಟ್ಟು ಚಾಲನಾ ವೆಚಚ: 98,181 ರೂ
ಹೆಚ್ಚುವರಿ ಇನ್ಷೂರೆನ್ಸ್: 55,600 ರೂ

ಆರು ವರ್ಷಗಳಲ್ಲಿ ಇವಿಷ್ಟೂ ಸೇರಿಸಿದರೆ ಕಾರಿಗೆ ನೀವು ಮಾಡಿರುವ ವೆಚ್ಚ 18,72,605 ರೂ ಆಗುತ್ತದೆ. ಎಲೆಕ್ಟ್ರಿಕ್ ಕಾರು ಖರೀದಿಗೆ ಸರ್ಕಾರ ಕೆಲ ಉತ್ತೇಜನಕಾರಿ ಕ್ರಮ ಜಾರಿ ಮಾಡಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ, ತೆರಿಗೆ ವಿನಾಯಿತಿ ಇರುತ್ತದೆ. ಸಾಲ ಮಾಡಿ ಕಾರನ್ನು ಖರೀದಿಸಿದರೆ ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರಿನಿಂದ ಸುಮಾರು 1 ಲಕ್ಷ ರೂ ಉಳಿಸಬಹುದು.

 

ಯೋಚಿಸಿ ನೋಡಿ....

ಯೋಚಿಸಿ ನೋಡಿ....

ಆದರೆ, ನೀವು ಸಂಪೂರ್ಣವಾಗಿ ಹಣ ಕೊಟ್ಟು ಕಾರನ್ನು ಕೊಳ್ಳುವಿರಾದರೆ ಪೆಟ್ರೋಲ್ ಕಾರಿನಿಂದ 2 ಲಕ್ಷ ರೂ ಉಳಿಸಬಹುದು. ಹೇಗೆ ಅಂತೀರಾ? ಟಾಟಾ ನೆಕ್ಸಾನ್‌ನ ಎಲೆಕ್ಟ್ರಿಕ್ ಕಾರಿಗಿಂತ ಪೆಟ್ರೋಲ್ ಕಾರಿನ ಬೆಲೆ ಸುಮಾರು 6 ಲಕ್ಷ ರೂನಷ್ಟು ಹೆಚ್ಚು ಇರುತ್ತದೆ. ಈ 6 ಲಕ್ಷ ರೂ ಹಣವನ್ನು ಎಲ್ಲಿಯಾದರೂ ಠೇವಣಿ ಇರಿಸಿದರೆ ವಾರ್ಷಿಕವಾಗಿ ಶೇ. 6ರಷ್ಟಾದರೂ ಬಡ್ಡಿ ಸಿಗುತ್ತದೆ. ಇದು ಅರು ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಹಣವಾಗಿ ಕೂಡಿಕೊಳ್ಳುತ್ತದೆ.

ನೀವು ಕಾರನ್ನು ಹೆಚ್ಚು ಬಳಸುವಿರಾದರೆ ಎಲೆಕ್ಟ್ರಿಕ್ ಕಾರು ತುಸು ಸೂಕ್ತ ಎನಿಸಬಹುದು. ಆದರೆ ಹೆಚ್ಚು ಓಡಿಸುವುದಿಲ್ಲ ಎನ್ನುವುದಿದ್ದರೆ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಕನಿಷ್ಠ 10 ವರ್ಷವಾದರೂ ಬೇಕಾದೀತು. 10 ವರ್ಷವಾದ ಬಳಿಕ ಕಾರನ್ನು ಇಟ್ಟುಕೊಳ್ಳುವವರು ಕಡಿಮೆಯೇ. ಹೀಗಾಗಿ, ನೀವು ಸದ್ಯದ ಬೆಲೆ ಸ್ಥಿತಿಯಲ್ಲಿ ಉಳಿತಾಯದ ದೃಷ್ಟಿಯಿಂದ ಎಲೆಕ್ಟ್ರಿಕ್ ಕಾರು ಕೊಳ್ಳಲು ಮುಂದಾಗುವುದು ಎಷ್ಟರಮಟ್ಟಿಗೆ ಸರಿ ಎಂದು ನೀವೇ ಅವಲೋಕಿಸಬಹುದು.

ಈ ಮೇಲೆ ತಿಳಿಸಿದ ಅಂಕಿ ಅಂಶಗಳನ್ನು ಸದ್ಯದ ವೆಚ್ಚಗಳನ್ನು ಆಧಾರವಾಗಿಟ್ಟುಕೊಂಡು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ನಷ್ಟು ಅಗ್ಗವಾಗಿ ದೊರಕಬಹುದು. ಆಗ ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸೂಕ್ತ ಆಗುತ್ತವೆ.

 

English summary

Comparing Cost of Owning Electric Car And Petrol Car Over 6 Years

Electric car vs Petrol car- a cost comparision that include the fuel expense, service charge, insurance and other expenses. Here Tata Nexon's petrol and EV models are taken for comparision.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X