For Quick Alerts
ALLOW NOTIFICATIONS  
For Daily Alerts

ಬ್ರಿಟಿಷ್ ಏರ್ ವೇಸ್ ನಿಂದ 36,000 ಸಿಬ್ಬಂದಿ ಅಮಾನತು ನಿರೀಕ್ಷೆ

|

ಬ್ರಿಟಿಷ್ ಏರ್ ವೇಸ್ ನಿಂದ 36,000 ಮಂದಿಯಷ್ಟು ಸಿಬ್ಬಂದಿಯನ್ನು ಅಮಾನತು ಮಾಡಿ, ಆದೇಶ ಹೊರಡಿಸುವ ನಿರೀಕ್ಷೆ ಇದೆ. ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಯು.ಕೆ. ವಿಮಾನಗಳು ಬಹುತೇಕ ಹಾರಾಟ ನಿಲ್ಲಿಸಿವೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಬಹುದು ಎಂದು ಗುರುವಾರ ವರದಿ ಆಗಿದೆ.

 

ಯುನೈಟ್ ಯೂನಿಯನ್ ಜತೆಗೆ ವಾರಕ್ಕೂ ಹೆಚ್ಚುಕಾಲ ವಿಮಾನಯಾನ ಸಂಸ್ಥೆಯು ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಎರಡೂ ಕಡೆಯಿಂದ ಒಪ್ಪಂದಕ್ಕೆ ಬರಲಾಗಿದೆಯಾದರೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಹಿ ಆಗಬೇಕಿದೆ.

 

ಸ್ಟ್ರಾಬೆರಿ ಹಸುವಿಗೆ ಮೇವು, ದ್ರಾಕ್ಷಿ ಕಾಡು ಪಾಲು, ಹೂವು ಕೇಳೋರ್ಯಾರುಸ್ಟ್ರಾಬೆರಿ ಹಸುವಿಗೆ ಮೇವು, ದ್ರಾಕ್ಷಿ ಕಾಡು ಪಾಲು, ಹೂವು ಕೇಳೋರ್ಯಾರು

ಈ ಒಪ್ಪಂದದ ಪ್ರಕಾರ, ಬ್ರಿಟಿಷ್ ಏರ್ ವೇಸ್ ನ 80 ಪರ್ಸೆಂಟ್ ಕ್ಯಾಬಿನ್ ಸಿಬ್ಬಂದಿ, ಎಂಜಿನಿಯರ್ ಗಳು ಮತ್ತು ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಉದ್ಯೋಗ ಅಮಾನತಿನಲ್ಲಿ ಇರುತ್ತದೆ. ಗ್ಯಾಟ್ ವಿಕ್ ಹಾಗೂ ಲಂಡನ್ ನಗರದ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳ ಮೇಲೂ ಪ್ರಭಾವ ಬೀರಲಿದೆ.

ಬ್ರಿಟಿಷ್ ಏರ್ ವೇಸ್ ನಿಂದ 36,000 ಸಿಬ್ಬಂದಿ ಅಮಾನತು ನಿರೀಕ್ಷೆ

ಯಾರಿಗೆ ಈ ಅವಧಿಯಲ್ಲಿ ಉದ್ಯೋಗ ಇರುವುದಿಲ್ಲವೋ ಅಂಥವರಿಗೆ ಸರ್ಕಾರವು ವೇತನ ಪಾವತಿಸುತ್ತದೆ. ಆದರೆ ಈ ತನಕ ಬರುತ್ತಿದ್ದುದರಲ್ಲಿ ಶೇಕಡಾ 80ರಷ್ಟು ಅಥವಾ ಗರಿಷ್ಠ 2500 ಪೌಂಡ್ಸ್ ಪಾವತಿಸಲಾಗುತ್ತದೆ. ಈ ಮಧ್ಯೆ ವರ್ಜಿನ್ ಅಟ್ಲಾಂತಿಕ್ ವಿಮಾನಯಾನ ಸಂಸ್ಥೆಯು ಎರಡು ತಿಂಗಳ ಅವಧಿಗೆ ಹಾಗೂ ಈಸಿಜೆಟ್ ಉದ್ಯೋಗಿಗಳಿಗೆ ಮೂರು ತಿಂಗಳು ಕೆಲಸ ಇರುವುದಿಲ್ಲ.

ಯು.ಕೆ. ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ಪೆರುವಿನಿಂದ ಯು.ಕೆ. ನಾಗರಿಕರನ್ನು ಕರೆತರನ್ನು ಬ್ರಿಟಿಷ್ ಏರ್ ವೇಸ್ ಬಳಸಲಾಗಿತ್ತು. ಯು.ಕೆ.ಯಲ್ಲಿ 29,865 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 2,357 ಮಂದಿ ಸಾವನ್ನಪ್ಪಿದ್ದಾರೆ.

English summary

Corona Effect: British Airways To Suspend 36,000 Staff Members

British Airways is expected to announce the suspension of around 36,000 staff members after much of its fleet due to the coronavirus pandemic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X