For Quick Alerts
ALLOW NOTIFICATIONS  
For Daily Alerts

ಕೊರೊನಾ ಏಟು; ವೇತನ ಹೆಚ್ಚಳದ ಜತೆಗೆ ಬೋನಸ್ ಸಿಗೋದು ಡೌಟು

|

ಭಾರತದಲ್ಲಿ ಐಟಿ ಸೇವೆ ಒದಗಿಸುವ ಕಂಪೆನಿಗಳ ಉದ್ಯೋಗ ಮಾಡುತ್ತಿರುವವರಿಗೆ ಕೆಟ್ಟ ಸುದ್ದಿಯೊಂದು ಬಂದಿದೆ. ಅಥವಾ ಈಗಾಗಲೇ ಅವರ ಕಿವಿಗೂ ಬಿದ್ದಿರಬಹುದು. ಈ ಬಾರಿ ವೇತನ ಹೆಚ್ಚಳ, ಬೋನಸ್ ದೊರೆಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾದ ಪರಿಣಾಮಕ್ಕೆ ಬಿದ್ದಿರುವ ಆರ್ಥಿಕ ಹೊಡೆತಕ್ಕೆ ವ್ಯಾಪಾರವೂ ಡಲ್ ಆಗಿದೆ.

ಹನ್ನೆರಡು ವರ್ಷಗಳ ಹಿಂದೆ ಯು.ಎಸ್. ನಲ್ಲಿ ಕಾಣಿಸಿಕೊಂಡಿದ್ದ ಆರ್ಥಿಕ ಬಿಕ್ಕಟ್ಟಿನ ವೇಳೆಯೂ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. "ಬೋನಸ್, ವೇರಿಯಬಲ್ ಪೇ ಅಥವಾ ಇನ್ ಕ್ರಿಮೆಂಟ್ ಅನ್ನು ಸದ್ಯಕ್ಕೆ ತಡೆ ಹಿಡಿದಿದ್ದೇವೆ. ಈ ಹಂತದಲ್ಲಿ ಈ ವಿಶ್ವದಲ್ಲಿ ಜನರ ಸುರಕ್ಷತೆಯನ್ನು ಕಾಪಾಡುವುದೇ ಮೊದಲ ಆದ್ಯತೆ ಆಗಿದೆ" ಎಂದು ಟೆಕ್ ಮಹೀಂದ್ರಾದ ಸಿಇಒ ಸಿ. ಪಿ. ಗುರ್ನಾನಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವರ್ಕ್ ಫ್ರಮ್ ಹೋಮ್ ಗೆ ಅವಕಾಶ

ವರ್ಕ್ ಫ್ರಮ್ ಹೋಮ್ ಗೆ ಅವಕಾಶ

ಭಾರತದಲ್ಲಿನ ತಂತ್ರಜ್ಞಾನ ಸೇವೆ ಒದಗಿಸುವ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಗೆ ಅವಕಾಶ ಕೊಟ್ಟಿವೆ. ಇನ್ನು ಟ್ರೇನಿಗಳನ್ನು ಕ್ಯಾಂಪಸ್ ಗಳಿಂದ ಮನೆಗೆ ಕಳುಹಿಸಲಾಗಿದೆ. ಭಾರತ ಮೂಲದ ಐಟಿ ಸೇವೆ ಒದಗಿಸುವ ಕಂಪೆನಿಗಳಲ್ಲಿ ಹತ್ತಕ್ಕೆ ಎಂಟು ಸಿಬ್ಬಂದಿ ಸ್ಥಳೀಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಾರೆ.

ಯು.ಎಸ್. ಹಾಗೂ ಯುರೋಪ್ ನಲ್ಲೂ ಮಾರ್ಕೆಟ್ ಗೆ ಹೊಡೆತ

ಯು.ಎಸ್. ಹಾಗೂ ಯುರೋಪ್ ನಲ್ಲೂ ಮಾರ್ಕೆಟ್ ಗೆ ಹೊಡೆತ

ಯು.ಎಸ್. ಹಾಗೂ ಯುರೋಪ್ ನಲ್ಲೂ ಮಾರ್ಕೆಟ್ ಗೆ ಹೊಡೆತ ಬಿದ್ದಿರುವುದರಿಂದ ಮುಂದಿನ ಆರ್ಥಿಕ ವರ್ಷದ ಐಟಿ ವಲಯದ ಬೆಳವಣಿಗೆ ಅಂದಾಜನ್ನೇ ಪರಿಷ್ಕರಿಸುವಂತೆ ಮಾಡಿದೆ. ಅತಿ ದೊಡ್ಡ ಹಾಗೂ ಮಧ್ಯಮ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ತಂತ್ರಜ್ಞಾನ ಸೇವೆ ಒದಗಿಸುವ ಕಂಪೆನಿಗಳ ಆದಾಯ 2-4% ಹಾಗೂ ಒಟ್ಟಾರೆ ಈ ಕ್ಷೇತ್ರದ ಆದಾಯ 3-8% ಕುಸಿಯಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಟಿಸಿಎಸ್ ವಾರ್ಷಿಕ ಅಪ್ರೈಸಲ್ ಮುಗಿದಿದೆ

ಟಿಸಿಎಸ್ ವಾರ್ಷಿಕ ಅಪ್ರೈಸಲ್ ಮುಗಿದಿದೆ

ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪೆನಿಯಿಂದ ವಾರ್ಷಿಕ ಅಪ್ರೈಸಲ್ ಮುಗಿದಿದೆ. ಆದರೆ ಎಷ್ಟು ಹೆಚ್ಚಳ ಮಾಡಬೇಕು ಎಂಬ ತೀರ್ಮಾನ ಆಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಮುಖ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಗೆ ಏನು ಮಾಡಬೇಕು ಎಂಬುದರ ಬಗ್ಗೆಯೇ ಹೆಚ್ಚು ಕೆಲಸ ಮಾಡುತ್ತಿದ್ದೇವೆ. ಸಂಬಳ ಹೆಚ್ಚಳವನ್ನು ತಡೆಯುವುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಕಂಪೆನಿಗಳ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ

ಕಂಪೆನಿಗಳ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ

ವಿಪ್ರೋ, ಎಚ್ ಸಿಎಲ್ ಟೆಕ್ನಾಲಜಿ, ಇನ್ಫೋಸಿಸ್ ನಲ್ಲಿ ವೇತನ ಹೆಚ್ಚಳಕ್ಕೆ ಇನ್ನೂ ಬಹಳ ಸಮಯ ಇದೆ. ಕೊರೊನಾದ ಪರಿಣಾಮ ಕಂಪೆನಿಗಳ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಂಪೆನಿಯ ಲಾಭ ಮತ್ತು ಆದಾಯದ ಮೇಲೆ ಬೋನಸ್ ನಿರ್ಧಾರ ಆಗುತ್ತದೆ. ಆದ್ದರಿಂದ ಅದು ಕೂಡ ಕಡಿಮೆ ಆಗುತ್ತದೆ. ಆ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಬೋನಸ್ ಕಡಿಮೆ ಆಗಬಹುದು ಎಂದು ಎವೆರೆಸ್ಟ್ ಗ್ರೂಪ್ ಸಿಇಒ ಹೇಳಿದ್ದಾರೆ.

English summary

Corona Effect: IT Companies May Block Hike And Bonus

Due to Corona virus effect Indian IT companies employees hike and bonus may block. Here is the details.
Story first published: Friday, March 20, 2020, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X