For Quick Alerts
ALLOW NOTIFICATIONS  
For Daily Alerts

ಜಪಾನ್ ನನ್ನು ಜಗ್ಗಿ ಜಾಲಾಡಿದ 'ಕೊರೊನಾ'; ಆರ್ಥಿಕತೆಯಲ್ಲಿ ಭಾರೀ ಇಳಿಕೆ

|

ಕೊರೊನಾ ಕಾರಣಕ್ಕೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಜಪಾನ್ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಭಾರೀ ಇಳಿಕೆ ಆಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯು ಕಳೆದ ತ್ರೈಮಾಸಿಕಕ್ಕಿಂತ 7.8% ಕುಗ್ಗಿದೆ. ಇದನ್ನು ವಾರ್ಷಿಕ ದರಕ್ಕೆ ಬದಲಿಸಿ ಹೇಳಬೇಕೆಂದರೆ, 27.8% ಆಗುತ್ತದೆ. 1980ರ ಆಧುನಿಕ ದಾಖಲೆಗಳಲ್ಲೇ ಈ ಬಾರಿಯದು ಅತ್ಯಂತ ಹೀನಾಯ ಕುಸಿತ ಹಾಗೂ ಸತತ ಮೂರನೇ ತ್ರೈಮಾಸಿಕ ಈ ರೀತಿ ಕುಗ್ಗಿದೆ.

ಏಪ್ರಿಲ್- ಜೂನ್ ತ್ರೈಮಾಸಿಕ ಅವಧಿಯ ಉಳಿದ ಪ್ರಮುಖ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಜಪಾನ್ ಸ್ಥಿತಿ ಉತ್ತಮವಾಗಿದೆ. ಯು.ಎಸ್. ಹಾಗೂ ಜರ್ಮನಿ ಕಳೆದ ತ್ರೈಮಾಸಿಕಕ್ಕಿಂತ ತಲಾ ಹತ್ತು ಪರ್ಸೆಂಟ್ ಇಳಿಕೆ ಕಂಡಿವೆ. ಇನ್ನು ಯುನೈಟೆಡ್ ಕಿಂಗ್ ಡಮ್ ಉತ್ಪಾದನೆ ಈ ಹಿಂದಿನ ಅವಧಿಗಿಂತ 20.4% ಕಡಿಮೆ ಆಗಿದೆ.

UK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆUK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆ

ಜಿ7 ರಾಷ್ಟ್ರಗಳ ಆರ್ಥಿಕತೆ ಪೈಕಿ ಕೆನಡಾ ಜಿಡಿಪಿ ಹಿಂದಿನ ತ್ರೈಮಾಸಿಕಕ್ಕಿಂತ 12% ಕುಗ್ಗಬಹುದು ಎಂದು ನಿರಿಕ್ಷಿಸಲಾಗಿದೆ. ಆದರೆ ಚೀನಾ ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಹಳಿಗೆ ಮರಳಿದೆ. ಇತರ ಆರ್ಥಿಕತೆಗಳಂತೆಯೇ ಕೊರೊನಾ ಕಾರಣದಿಂದಲೇ ಜಪಾನ್ ಜಿಡಿಪಿ ಭಾರೀ ಪ್ರಮಾಣದಲ್ಲಿ ಕುಗ್ಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಕೈಗೊಂಡ ಲಾಕ್ ಡೌನ್ ಕ್ರಮಗಳಿಂದ ರಫ್ತು ಪ್ರಮಾಣ ಕಡಿಮೆ ಆಗಿರುವುದು ಸೇರಿ ಇತರ ಪರಿಣಾಮಗಳಾಗಿವೆ.

ಜಪಾನ್ ನನ್ನು ಜಗ್ಗಿ ಜಾಲಾಡಿದ 'ಕೊರೊನಾ'; ಆರ್ಥಿಕತೆಯಲ್ಲಿ ಇಳಿಕೆ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರು ವಾರಗಳ ಕಾಲ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದರಿಂದ ವ್ಯಾಪಾರ- ವ್ಯವಹಾರಗಳಿಗೆ ಭರ್ತಿ ಪೆಟ್ಟು ಬಿದ್ದಿತ್ತು. ಜೂನ್ ಹಾಗೂ ಜುಲೈನಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾದರೂ ಚೇತರಿಕೆ ವೇಗದ ಬಗ್ಗೆ ಕುತೂಹಲ ಹಾಗೂ ಆತಂಕ ಇದ್ದೇ ಇದೆ.

ಜಪಾನ್ ಸರ್ಕಾರವು ಜುಲೈ ಮಧ್ಯ ಭಾಗದಲ್ಲಿ ಸಬ್ಸಿಡಿ ಯೋಜನೆಗಳನ್ನು ಘೋಷಿಸಿ, ದೇಶೀಯ ಪ್ರವಾಸೋದ್ಯಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸಿತು. ಆದರೆ ಆಗಸ್ಟ್ ತಿಂಗಳೊಂದರಲ್ಲೇ 19 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾದವು. ಜಪಾನ್ ನಲ್ಲಿ ಒಟ್ಟಾರೆಯಾಗಿ ಪತ್ತೆಯಾದ ಕೊರೊನಾ ಸೋಂಕಿತ ಪ್ರಕರಣಗಳು 55,426. ಸಾವನ್ನಪ್ಪಿದವರು 1,101 ಮಂದಿ ಎಂದು ಸೋಮವಾರ ಜಪಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

English summary

Corona Effect: Japan Sees Its Biggest Ever GDP Contraction In Q2

Japan's government data released on Monday showed that its economy shrank at an annualized rate of 27.8 percent in the April-June period. Due to restrictions imposed amid the corona virus pandemic.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X