For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಎಚ್ಚೆತ್ತ ಜಗತ್ತಿನ ಆರೋಗ್ಯ ಕ್ಷೇತ್ರ : ಭವಿಷ್ಯದಲ್ಲಿ ಈ 7 ಬದಲಾವಣೆ ಸಾಧ್ಯತೆ

|

ಕೊರೊನಾವೈರಸ್ ಜಗತ್ತಿನಲ್ಲಿ ಅತ್ಯಂತ ಗಂಭೀರ ಪರಿಣಾಮ ಬೀರಿದ್ದು ಅಭಿವೃದ್ಧಿ ರಾಷ್ಟ್ರಗಳೇ ಕಣ್ಣಿಗೆ ಕಾಣದ ಶತ್ರುವಿನ ಕಾಟಕ್ಕೆ ತತ್ತರಿಸಿ ಹೋಗಿವೆ. ಕೊರೊನಾ ಮಹಾಮಾರಿಯು ದಿನಕ್ಕೆ ಸಾವಿರ ಸಾವಿರ ಬಲಿಗಳನ್ನು ತೆಗೆದುಕೊಳ್ಳುತ್ತಿದೆ. ವೈದ್ಯಕೀಯ, ಟೆಕ್ನಾಲಜಿ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಭಾರೀ ಅಭಿವೃದ್ಧಿ ಕಂಡ ರಾಷ್ಟ್ರಗಳೇ ದಿಕ್ಕೇ ತೋಚದಂತಾಗಿದೆ.

 

ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಲು ಯೋಜನೆ ನಡೆಸುತ್ತಿರುವ ಈ ವಿಜ್ಞಾನ ಯುಗದಲ್ಲಿ, ಕೇವಲ ಒಂದು ವೈರಸ್ ಇಡೀ ವಿಶ್ವದ ಆರ್ಥಿಕತೆಯನ್ನೇ ಗುಡಿಸಿ ಗುಂಡಾತರ ಮಾಡಿದೆ. ಪ್ರತಿ ದೇಶದಲ್ಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ವಿಶ್ವದ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ ಅಮೆರಿಕಾ, ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಮುಂದಿರುವ ಇಟಲಿ, ಭಾರೀ ಸಂಪದ್ಬರಿತ ಸೂರ್ಯ ಮುಳುಗದ ನಾಡು ಇಂಗ್ಲೆಂಡ್, ಪ್ರವಾಸಿ ತಾಣ ಪ್ಯಾರಿಸ್, ಹೀಗೆ ಈ ವೈರಸ್ ಯಾವುದನ್ನು ಬಿಟ್ಟಿಲ್ಲ.

ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರಿದಿದ್ದರೂ ಇಡೀ ವಿಶ್ವವೇ ಈ ಮಟ್ಟಿಗೆ ವೈರಸ್‌ಗೆ ತುತ್ತಾಗಿರುವುದು ಮತ್ತೊಮ್ಮೆ ತನ್ನನ್ನ ತಾನೇ ಅವಲೋಕನ ಮಾಡಿಕೊಳ್ಳುವಂತೆ ಮಾಡಿಕೊಟ್ಟಿದೆ. ಹೀಗಾಗಿ ಕೊರೊನಾ ಕಲಿಸಿದ ಪಾಠದಿಂದ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಸಾಧ್ಯತೆ ಇದೆ ಎಂಬುದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿ.

ಆರೋಗ್ಯ ಕಾರ್ಯಕರ್ತರಿಗೆ ಮತ್ತಷ್ಟು ಕೌಶಲ್ಯ ಸಾಧಿಸುವುದು

ಆರೋಗ್ಯ ಕಾರ್ಯಕರ್ತರಿಗೆ ಮತ್ತಷ್ಟು ಕೌಶಲ್ಯ ಸಾಧಿಸುವುದು

ಈ ಸುಧಾರಿತ ಆರೋಗ್ಯ ವ್ಯವಸ್ಥೆಯಿದ್ದರೂ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತು ತತ್ತರಿಸಿರುವುದನ್ನು ಪರಿಶೀಲಿಸಲು ಆರೋಗ್ಯ ಕ್ಷೇತ್ರ ಮುಂದಾಗಲಿದೆ. ಏಕಾಏಕಿ ಈ ರೀತಿಯಾಗಿ ಸಾಂಕ್ರಾಮಿಕ ರೋಗ ಹರಡಿದರೆ ಹೇಗೆ ಎದುರಿಸಬೇಕೆಂಬ ಸಾಮೂಹಿಕ ಪರಿಣಿತ ಕಡಿಮೆ. ಆದರೆ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಇದು ಬದಲಾಗುತ್ತದೆ ಮತ್ತು ದೇಶಗಳು ತಮ್ಮ ಆರೋಗ್ಯ ಕಾರ್ಯಕರ್ತರನ್ನು ಏಕಾಏಕಿ ಮರು ಕೌಶಲ್ಯ ಮಾಡಲು ಹೊರಟಿದೆ. ಅಸ್ತಿತ್ವದಲ್ಲಿರುವ ಆರೋಗ್ಯ ಕಾರ್ಯಕರ್ತರು ತರಬೇತಿ ಪ್ರಕ್ರಿಯೆಗಳಿಗೆ ಒಳಗಾಗಬೇಕಾಗಬಹುದು ಮತ್ತು ವೃತ್ತಿಪರ ಶಿಕ್ಷಣ ಪಠ್ಯಕ್ರಮವು ಉತ್ತಮವಾಗಿ ಬದಲಾಗುತ್ತದೆ.

ಸಾಂಕ್ರಾಮಿಕ ರೋಗವು ಜಾಗತಿಕ ಆರೋಗ್ಯ ಆಡಳಿತದ ದುರ್ಬಲತೆಯನ್ನು ಸಹ ಬಹಿರಂಗಪಡಿಸಿದೆ. ಟೀಕೆಗಳನ್ನು ಬದಿಗಿಟ್ಟು ನೋಡಿದರೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸರ್ಕಾರಗಳಿಗೆ ಸಲಹೆ ನೀಡುವಲ್ಲಿ ಮತ್ತು ಸಮತೋಲಿತ ದೃಷ್ಟಿಕೋನವನ್ನು ರೂಪಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ. WHO ನ ಆದೇಶವು ಅದರ ಅಸ್ತಿತ್ವದ ಸ್ವರೂಪ ಮತ್ತು ಧನಸಹಾಯಕ್ಕಾಗಿ ಸರ್ಕಾರಗಳ ಮೇಲೆ ಅವಲಂಬಿತವಾಗಿರುವುದರಿಂದ ತೀವ್ರವಾಗಿ ಸೀಮಿತವಾಗಿದೆ. ಇದು ತನ್ನದೇ ರೂಪದಲ್ಲಿ ಬೆಳೆದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕು.

 

ಉತ್ತಮ ಜಾಗತಿಕ ಆಡಳಿತ ನಿರ್ಮಾಣ
 

ಉತ್ತಮ ಜಾಗತಿಕ ಆಡಳಿತ ನಿರ್ಮಾಣ

ಜಿ -20 ಮತ್ತು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನಂತಹ ಏಜೆನ್ಸಿಗಳು ವಿಶ್ವಸಂಸ್ಥೆಯ (ಯುಎನ್) ಏಜೆನ್ಸಿಗಳಿಗೆ ಅದರ ವ್ಯಾಪ್ತಿ ಮತ್ತು ಪ್ರಭಾವದ ಮೂಲಕ ಪೂರಕವಾಗಬಹುದು . ಆದರೂ ಈ ಸಾಂಕ್ರಾಮಿಕ ಸಮಯದಲ್ಲಿ ನಾವು ಅದನ್ನು ಇನ್ನೂ ನೋಡಬೇಕಾಗಿಲ್ಲ. ಯುರೋಪಿಯನ್ ಒಕ್ಕೂಟದ (ಇಯು) ಸುದೀರ್ಘವಾದ ಮಾತುಕತೆಗಳು ಮತ್ತು ಸದಸ್ಯ ರಾಷ್ಟ್ರಗಳನ್ನು ಬೆಂಬಲಿಸುವಲ್ಲಿ ವಿಫಲವಾದರೂ ಸಹ ಆರೋಗ್ಯ ಸಮಸ್ಯೆಗಳಿಗೆ ಉತ್ತಮವಾದ ಸಮನ್ವಯದ ಜಾಗತಿಕ ಆಡಳಿತ ವ್ಯವಸ್ಥೆ ನಮಗೆ ಬೇಕು ಎಂದು ತೋರಿಸುತ್ತದೆ.

ಅನೇಕ ಹೆಚ್ಚಿನ ಆದಾಯದ ದೇಶಗಳಲ್ಲಿ ನೀತಿ ಅಸ್ಥಿರತೆಯಿಂದಾಗಿ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವುದು ಕಷ್ಟವಾಗಬಹುದು, ಆದರೆ ಕೊರೊನಾವು ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಇದು ಡಬ್ಲ್ಯುಎಚ್‌ಒಗೆ ವಿಶಾಲವಾಗಿ ಪೂರಕವಾಗುವ ಸಾಧ್ಯತೆಯಿದೆ.

 

ದಾಸ್ತಾನುವನ್ನು ಹೆಚ್ಚಿಸುವುದು

ದಾಸ್ತಾನುವನ್ನು ಹೆಚ್ಚಿಸುವುದು

ಶೀತಲ ಸಮರದ ಸಮಯದಲ್ಲಿ ಮತ್ತು 1973 ರ ತೈಲ ಆಘಾತದ ನಂತರ, ಅನೇಕ ದೇಶಗಳು ಅಗತ್ಯ ಸರಕುಗಳು ಮತ್ತು ವೈದ್ಯಕೀಯ ಸರಬರಾಜುಗಳ ಕಾರ್ಯತಂತ್ರದ ದಾಸ್ತಾನುಗಳನ್ನು ನಿರ್ವಹಿಸುತ್ತಿದ್ದವು. ಕೆಲವು ದೇಶಗಳು ಹೆಚ್ಚಿನ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡುವುದನ್ನು ಮುಂದುವರಿಸಿದವು. ಆದರೆ ಹೆಚ್ಚಿನ ದೇಶಗಳು ಅದನ್ನು ತ್ಯಜಿಸಿದವು.

ಅಮೆರಿಕಾ ಕೂಡ ಸಾಧಾರಣವಾದ ದಾಸ್ತಾನು ಸಂಗ್ರಹವನ್ನು ನಿರ್ವಹಿಸುತ್ತಿದೆ, ಫಿನ್‌ಲ್ಯಾಂಡ್ ಈಗಲೂ ಗಮನಾರ್ಹ ಪ್ರಮಾಣದಲ್ಲಿ ಸಂಗ್ರಹವನ್ನು ಮುಂದುವರಿಸಿದೆ. ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆರ್ಥಿಕತೆಗೆ ಗಮನಕೊಟ್ಟರೇ ವಿನಹಃ ಹೆಚ್ಚಿನ ದಾಸ್ತಾನಿಗೆ ಮನಸ್ಸು ಮಾಡದೇ ಇರುವುದು ಕೊರೊನಾ ಬಂದ ಮೇಲೆ ಜಗತ್ತಿಗೆ ತಿಳಿದಿದೆ. ಇದರಿಂದಾಗಿ ಔಷಧೀ ಕೊರತೆಗಳು ಎದುರಾಗಿ ಅಭಿವೃದ್ಧಿಶೀಲ ರಾಷ್ಟ್ರಗಳೇ ಪರದಾಡುತ್ತಿವೆ. ಆದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಸರ್ಕಾರಗಳು ಕಾರ್ಯತಂತ್ರದ ದಾಸ್ತಾನುಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ಅಲ್ಪಾವಧಿಯಲ್ಲಿ ಆರ್ಥಿಕತೆಯನ್ನು ಪ್ರಾರಂಭಿಸಲು ಇದನ್ನು ಸಾಧನಗಳಲ್ಲಿ ಒಂದಾಗಿಯೂ ಬಳಸಬಹುದು.

 

ಅಗತ್ಯ ಸರಬರಾಜುಗಳತ್ತ ಗಮನ ಹರಿಸುವುದು

ಅಗತ್ಯ ಸರಬರಾಜುಗಳತ್ತ ಗಮನ ಹರಿಸುವುದು

ಕೊರೊನಾ ಬಂದ ಮೇಲೆ ಔಷಧಿಯ ಅವಶ್ಯಕತೆಯು ಜಗತ್ತನ್ನೇ ಕಾಡುತ್ತಿದೆ. ಔಷಧಿಯ ಉತ್ಪಾದನೆಯ ಮೇಲೆ ಸಾರ್ವಜನಿಕ ವಲಯವು ನಿಯಂತ್ರಣ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ತಿಳಿಸುತ್ತಿದೆ . ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಗಾಗಿ ಬಹಳ ಕಡಿಮೆ ಹೂಡಿಕೆಗಳು ನಡೆದಿವೆ, ಅದು ಇನ್ನೂ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ.

ಹೀಗಾಗಿ ಸರ್ಕಾರಗಳು ಮಧ್ಯಪ್ರವೇಶಿಸಿ ಮತ್ತು ಅಗತ್ಯವಾದ ಔಷಧಿಗಳನ್ನು ಮಾರುಕಟ್ಟೆಯಲ್ಲಿನ ಶಕ್ತಿಗಳ ಬದಲಾವಣೆಗಳಿಗೆ ಬಿಡದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಗುತ್ತಿಗೆ ಉತ್ಪಾದನೆ, ಸಾರ್ವಜನಿಕ ಸ್ವಾಮ್ಯದ ಉತ್ಪಾದನಾ ಸೌಲಭ್ಯಗಳು, ಉತ್ಪನ್ನಗಳನ್ನು ಉತ್ತೇಜಿಸುವುದು, ಸಂಶೋಧನೆಗಾಗಿ ಹೊಸ ಹಣಕಾಸು ಆಯ್ಕೆಗಳನ್ನು ಅನ್ವೇಷಿಸುವುದು ಮತ್ತು ಅಗತ್ಯ ಔಷಧಿಗಳ ಉತ್ಪಾದನೆಯನ್ನು ನಿರ್ವಹಿಸಲು ಲಾಭರಹಿತ ಸಂಸ್ಥೆಗಳನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ಆಯ್ಕೆಗಳು ಲಭ್ಯವಿದೆ.

 

ಎಲ್ಲರಿಗೂ ಲಸಿಕೆಗಳನ್ನು ಪೂರೈಸುವ ಪ್ರಯತ್ನ

ಎಲ್ಲರಿಗೂ ಲಸಿಕೆಗಳನ್ನು ಪೂರೈಸುವ ಪ್ರಯತ್ನ

ಕಳೆದ ಕೆಲವು ದಶಕಗಳಲ್ಲಿ ಲಸಿಕೆ ಸಂಶೋಧನೆಯು ದೀರ್ಘಕಾಲದ ಹಣದ ಕೊರತೆಯಿಂದಾಗಿ ಬಳಲುತ್ತಿದೆ. ಅಲ್ಲಿ ಔಷಧೀಯ ದೈತ್ಯರು ಮತ್ತು ಸರ್ಕಾರಗಳು ಅದರ ಆರ್ & ಡಿ ಗೆ ಗಮನಾರ್ಹವಾಗಿ ಹಣವನ್ನು ಹೂಡಿಕೆ ಮಾಡುವುದರಿಂದ ದೂರ ಸರಿದಿವೆ.

ಕೆಲವು ವೈರಾಲಜಿಸ್ಟ್‌ಗಳ ಪ್ರಕಾರ ಈ ಕೊರೊನಾ ವೈರಸ್ ಜಗತ್ತಿಗೆ ಎಚ್ಚರಿಕೆ ನೀಡಿದ್ದು ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್‌ಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಔಷಧ ಕಂಡುಹಿಡಿಯಬೇಕು ಎಂದು ಹೇಳುತ್ತಾರೆ. ಸಾಂಕ್ರಾಮಿಕ ರೋಗದಿಂದ ಆಗುವ ಜಾಗತಿಕ ನಷ್ಟಕ್ಕೆ ಹೋಲಿಸಿದರೆ ಲಸಿಕೆ ಸಂಶೋಧನೆಗೆ ಅಗತ್ಯವಾದ ಹಣವು ಹೆಚ್ಚೇನು ಆಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಔ‍ಷಧಿ ಸಂಶೋಧನೆಗೆ ಹೆಚ್ಚಿನ ಧನ ಸಹಾಯಕ್ಕೆ ಸರ್ಕಾರಗಳು ಮುಂದಾಗಬಹುದು.

 

'ಸಾಮಾಜಿಕ ದೂರ'ವನ್ನು ಕಡ್ಡಾಯಗೊಳಿಸಬಹುದು

'ಸಾಮಾಜಿಕ ದೂರ'ವನ್ನು ಕಡ್ಡಾಯಗೊಳಿಸಬಹುದು

ಮುಂಬರುವ ವರ್ಷಗಳಲ್ಲಿ ನಾವು ನೋಡಬಹುದಾದ ಮತ್ತೊಂದು ಬದಲಾವಣೆಯೆಂದರೆ ಜಾಗತಿಕ ಆರೋಗ್ಯ ಅಭ್ಯಾಸದಲ್ಲಿ ಸೋಶಿಯಲ್ ಡಿಸ್ಟೆನ್ಸ್ ಮುಂದುವರೆಯಬಹುದು. ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದನ್ನು ಪಾಲಿಸುವ ಅವಶ್ಯಕತೆ ಎದುರಾಗಿದೆ. ಹೀಗಾಗಿ ‘ಸಾಮಾಜಿಕ ದೂರವನ್ನು' ಕಡ್ಡಾಯಗೊಳಿಸುವಲ್ಲಿಯೂ ಸಹ ಜಾಗತಿಕ ದಕ್ಷಿಣದ ದೇಶಗಳು ಸ್ವತಂತ್ರ ಕೋರ್ಸ್ ಅನ್ನು ರೂಪಿಸಿವೆ.

ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮದೇ ಆದ ಸಾರ್ವಜನಿಕ ಆರೋಗ್ಯ ಸಾಮರ್ಥ್ಯವನ್ನು ಬೆಳೆಸಲು ಹೂಡಿಕೆ ಮಾಡಲು ಪ್ರಾರಂಭಿಸುತ್ತವೆ ಮತ್ತು ಇದು ದೀರ್ಘಕಾಲದವರೆಗೆ ವ್ಯವಸ್ಥಿತ ಪ್ರಕ್ರಿಯೆಯಾಗಿದೆ.

ಯೂನಿವರ್ಸಲ್ ಹೆಲ್ತ್ ಕವರೇಜ್

ಯೂನಿವರ್ಸಲ್ ಹೆಲ್ತ್ ಕವರೇಜ್

ಕೊನೆಯದಾಗಿ, ಏಕಾಏಕಿ ಸೋಂಕು ಹರಡುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಪ್ರಾಥಮಿಕ ಆರೈಕೆ ವ್ಯವಸ್ಥೆಯನ್ನು ಹೊಂದಿರದ ದೇಶಗಳನ್ನು ನಾವು ನೋಡಿದ್ದೇವೆ. ಅಮೆರಿಕಾ ಆರ್ಥಿಕ ಮತ್ತು ಉತ್ತಮವಾದ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದ್ದರೂ ಕೊರೊನಾವನ್ನು ಎದುರಿಸಲು ಹೆಣಗಾಡುತ್ತಿದೆ. ಹೀಗಾಗಿ ಯೂನಿವರ್ಸಲ್ ಹೆಲ್ತ್ ಕವರೇಜ್ (ಯುಹೆಚ್‌ಸಿ) ವ್ಯವಸ್ಥೆಯ ಅನುಪಸ್ಥಿತಿ ಆರೋಗ್ಯ ವ್ಯವಸ್ಥೆಯಲ್ಲಿ ಎದ್ದು ಕಾಣುತ್ತಿದೆ.

ಸದ್ಯ WHO ಈ ರೀತಿಯಾದ ಕಾರ್ಯಕ್ರಮ ಹೊಂದಿದ್ದರೂ ಇದು ಜನರನ್ನು ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಹೀಗಾಗಿ UHCಯನ್ನು ಆರೋ್ಯ ಕಾರ್ಯ ಸೂಚಿಯಾಗಿ ಬದಲಾಯಿಸಬೇಕಾಗಿದೆ. ಆರೋಗ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಬಲವಾದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯ ಮೂಲಕ ಯುಹೆಚ್‌ಸಿಯನ್ನು ಸಾಧಿಸಬೇಕಾಗಿದೆ ಎಂಬ ದೊಡ್ಡ ಒಮ್ಮತವಿದೆ. ಆರೋಗ್ಯ ರಕ್ಷಣೆಗೆ ಸಮನಾದ ಪ್ರವೇಶವು ಸಮಾಜದ ಆರೋಗ್ಯವನ್ನು ಸುಧಾರಿಸಲು ಮುಖ್ಯ ಆಧಾರವಾಗಿರುವುದರಿಂದ ಜಗತ್ತು ಈ ದಿಕ್ಕಿನಲ್ಲಿ ಸಾಗಬೇಕು.

ಏಕಾಏಕಿ ಎದುರಾಗುವ ಈ ರೀತಿಯ ತೊಂದರೆಗಳಿಗೆ ನಮ್ಮಲ್ಲಿ ಗುರಾಣಿ ಅವಶ್ಯಕ. ಅಲ್ಲದೆ ಅದೇ ತಪ್ಪುಗಳು ಮತ್ತೆ ಸಂಭವಿಸದಂತೆ ತಡೆಯಲು ನಮ್ಮ ಆರೋಗ್ಯ ವ್ಯವಸ್ಥೆಯು ತೀವ್ರ ಬದಲಾವಣೆಗೆ ಒಳಗಾಗಬೇಕಾಗಿದೆ.

 

English summary

Corona Impact 7 Changes To Expect In The Global Healthcare System

These are the 7 Changes To Expect In The Global Healthcare System after covid-19 pandemic
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X