For Quick Alerts
ALLOW NOTIFICATIONS  
For Daily Alerts

ಕೊರೊನಾ ಪರಿಣಾಮ: ತೈಲ ಸಂಗ್ರಹಕ್ಕೆ ನೆಲದ ಮೇಲೆ ಜಾಗವೇ ಸಿಗುತ್ತಿಲ್ಲ: ನೌಕೆಗಳು, ರೈಲ್ವೇ ಬೋಗಿಗಳಿಗೆ ಹುಡುಕಾಟ

|

ಕೊರೊನಾವೈರಸ್‌ ಜಗತ್ತಿನ ಪ್ರತಿಯೊಂದು ಉದ್ಯಮದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ತೈಲ ಉತ್ಪಾದನಾ ರಾಷ್ಟ್ರಗಳ ಪರಿಸ್ಥಿತಿಯಂತೂ ಹೇಳತೀರದು. ವಿಶ್ವದ ಅನೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ತೈಲ ಬೇಡಿಕೆಯೇ ಇಲ್ಲದೆ ಕುಸಿಯಲಾರಂಭಿಸಿದೆ.

ಕೊರೊನಾವೈರಸ್ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ಉತ್ಪಾದಕ ರಾಷ್ಟ್ರಗಳಿಗೆ ತೈಲ ತುಂಬಿಡಲು ನೆಲದ ಮೇಲೆ ಜಾಗವೇ ಸಿಗತ್ತಿಲ್ಲ. ತೈಲ ಸಂಗ್ರಹಣೆಗೆ ಹರಸಾಹಸವನ್ನೇ ಮಾಡುತ್ತಿವೆ. ಸ್ವಲ್ಪ ಸಂಗ್ರಹಾರ ಸಿಕ್ಕಿದರೂ ಅಲ್ಲಿಯೂ ಬಿಡದೆ ತುಂಬಿಸಲು ಮುಂದಾಗುತ್ತಿವೆ.

ನೆಲದ ಮೇಲಿನ ತೈಲ ಸಂಗ್ರಹಗಳೆಲ್ಲಾ ಸಂಪೂರ್ಣ ಭರ್ತಿ

ನೆಲದ ಮೇಲಿನ ತೈಲ ಸಂಗ್ರಹಗಳೆಲ್ಲಾ ಸಂಪೂರ್ಣ ಭರ್ತಿ

ತೈಲ ಉತ್ಪಾದಕಾ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ತೈಲ ಉತ್ಪಾದನೆಗಿಂತ ಸಂಗ್ರಹಣೆ ವಿಚಾರ. ಈಗಾಗಲೇ ವಿಶ್ವದಲ್ಲಿ ತೈಲ ಬೇಡಿಕೆಯು ನೆಲಕಚ್ಚಿದ್ದು, ಹಲವು ತಿಂಗಳ ಹಿಂದಿನ ತೈಲವೇ ಬಳಕೆಯಾಗುತ್ತಿಲ್ಲ.


ಈಗಾಗಲೇ ನೆಲದ ಮೇಲಿರುವ ತೈಲ ತುಂಬಿಸುವ ಟ್ಯಾಂಕ್‌ಗಳೆಲ್ಲ ಸಂಪೂರ್ಣವಾಗಿ ಭರ್ತಿಯಾಗಿವೆ. ಇನ್ನು ಉಳಿದ ತೈಲವನ್ನು ಎಲ್ಲಿ ದಾಸ್ತಾನಿಡುವುದು ಎಂಬ ಚಿಂತೆ ಈ ದೇಶಗಳನ್ನು ಕಾಡಲಾರಂಭಿಸಿದ್ದು, ಈಗ ತೈಲ ಟ್ಯಾಂಕರ್‌ ನೌಕೆಗಳನ್ನು ಕಾಯ್ದಿರಿಸಿಕೊಂಡು ಅವುಗಳನ್ನು ಸಮುದ್ರದಲ್ಲಿ ತೇಲುವ ತೈಲ ದಾಸ್ತಾನಾಗಿ ಬಳಸಲು ನಿರ್ಧರಿಸಲಾಗಿದೆ.

ಕೋಟಿ ಕೋಟಿ ಬ್ಯಾರೆಲ್ ನೌಕೆಗಳಲ್ಲಿ ತುಂಬಿಸಿಡಲು ಸಿದ್ಧತೆ

ಕೋಟಿ ಕೋಟಿ ಬ್ಯಾರೆಲ್ ನೌಕೆಗಳಲ್ಲಿ ತುಂಬಿಸಿಡಲು ಸಿದ್ಧತೆ

ಲಾಕ್‌ಡೌನ್ ಮುಗಿದು ಕೊರೊನಾಸೋಂಕು ಕಮ್ಮಿಯಾದ ಬಳಿಕ ತೈಲಗಳಿಗೆ ಮತ್ತೆ ಬೇಡಿಕೆ ಬರಲಿದೆ. ಹೀಗಾಗಿ ಈಗಾಗಲೇ ಉತ್ಪಾದನೆ ಮಾಡಲಾಗುತ್ತಿರುವ ತೈಲವನ್ನು ಬೇರೆ ಮಾರ್ಗಗಳ ಮೂಲಕ ಸಂಗ್ರಹಿಸಿಡಲು ಸಿದ್ಧತೆ ನಡೆದಿದೆ.

ಕನಿಷ್ಠ 3 ಕೋಟಿ ಬ್ಯಾರೆಲ್‌ನಷ್ಟು ವೈಮಾನಿಕ ಇಂಧನ, ಗ್ಯಾಸೋಲಿನ್‌ ಮತ್ತು ಡೀಸೆಲ್‌ ಅನ್ನು ನೌಕೆಗಳಲ್ಲಿ ತುಂಬಿಸಿಡಲು ಸಿದ್ಧತೆ ನಡೆದಿದೆ. ನೌಕೆಗಳಷ್ಟೇ ಅಲ್ಲ, ರೈಲು ಬೋಗಿಗಳು, ಪೈಪ್‌ಲೈನ್‌ಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ಜಗತ್ತಿನಾದ್ಯಂತ ಎಲ್ಲ ದೇಶಗಳೂ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿರುವ ಕಾರಣ, ಜನರು ಮನೆಗಳಲ್ಲೇ ಬಂಧಿಗಳಾಗಿರೆ. ಹೀಗಾಗಿ, ತೈಲದ ಬೇಡಿಕೆ ಭಾರೀ ಪ್ರಮಾಣದಲ್ಲಿ ತಗ್ಗಿದೆ. ಹೀಗಾಗಿ ಹೆಚ್ಚುವರಿ ತೈಲವನ್ನು ಎಲ್ಲಿ ತುಂಬಿಸಿಡುವುದು ಎಂಬುದೇ ಈ ದೇಶಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶೂನ್ಯಕ್ಕಿಂತ ಕೆಳಗಿಳಿದಿದ್ದ ತೈಲ ದರ ಚೇತರಿಕೆ

ಶೂನ್ಯಕ್ಕಿಂತ ಕೆಳಗಿಳಿದಿದ್ದ ತೈಲ ದರ ಚೇತರಿಕೆ

ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯಕ್ಕಿಂತಲೂ ಕೆಳಮಟ್ಟಕ್ಕಿಳಿದು ಬ್ಯಾರೆಲ್‌ಗೆ -37 ಡಾಲರ್‌ಗಳವರೆಗೆ ತಲುಪಿದ್ದ ಅಮೆರಿಕಾದ ಕಚ್ಚಾ ತೈಲ ದರ ಬುಧವಾರ ಸ್ವಲ್ಪಮಟ್ಟಿಗೆ ಏರಿಕೆ ಕಂಡಿದೆ. ವೆಸ್ಟ್ ಟೆಕ್ಸಾಸ್‌ ಇಂಟರ್‌ ಮೀಡಿಯೆಟ್‌ ದರ್ಜೆಯ ತೈಲ ದರ 10 ಪರ್ಸೆಂಟ್ ಏರಿಕೆಯಾಗಿದ್ದು, ಬ್ಯಾರೆಲ್‌ ಗೆ 12.68 ಡಾಲರ್‌ ಆಗಿದೆ.

ಸದ್ಯ ತೈಲ ಬೇಡಿಕೆ ಹೇಗಿದೆ?

ಸದ್ಯ ತೈಲ ಬೇಡಿಕೆ ಹೇಗಿದೆ?

ಈಗಾಗಲೇ ಲಾಕ್‌ಡೌನ್‌ನಿಂದಾಗಿ ಅತಿ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಪ್ರಮುಖವಾದ ಭಾರತದಲ್ಲಿ ಕಚ್ಚಾ ತೈಲದ ಬೇಡಿಕೆಯು 70 ಪರ್ಸೆಂಟ್‌ನಷ್ಟು ಕುಸಿದಿದೆ. ಲಾಕ್‌ಡೌನ್ ಮೇ 3ರವರೆಗೆ ವಿಸ್ತರಣೆಯಾಗಿರುವ ಪರಿಣಾಮ ಸದ್ಯಕಂತೂ ಬೇಡಿಕೆ ಏರುವ ಮಾತಿಲ್ಲ. ಆದರೆ ಭಾರತವೂ ಕಡಿಮೆ ಬೆಲೆಗೆ ಸಿಗುತ್ತಿರುವ ತೈಲವನ್ನು ಸಂಗ್ರಹಣೆ ಮಾಡುತ್ತಿದ್ದು, ಹಾರಾಟ ನಡೆಸದೇ ನೆಲಕಚ್ಚಿರುವ ವಿಮಾನ ಸಂಸ್ಥೆಗಳಿಗೆ ಇದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ.

ಇನ್ನು ಅಮೆರಿಕಾದಲ್ಲಿ ಈಗಾಗಲೇ ತೈಲ ಸಂಗ್ರಹಗಳು ಭರ್ತಿಯಾಗುವ ಹಂತ ತಲುಪಿದ್ದು, ಪ್ರತಿ ದಿನದ ಬೇಡಿಕೆ 14.4 ದಶಲಕ್ಷ ಬ್ಯಾರೆಲ್‌ಗೆ ಕುಸಿದಿದೆ. ಇಂಗ್ಲೆಂಡ್‌ನಲ್ಲಿ ಡೀಸೆಲ್‌ ಮಾರಾಟ 57 ಪರ್ಸೆಂಟ್‌ರಷ್ಟು ಕುಸಿತಗೊಂಡಿದೆ.

 

English summary

Corona Impact Oil Production Countries Searching For Storage

In this Article explained how the oil production countries facing problem for to store crude oil
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X