For Quick Alerts
ALLOW NOTIFICATIONS  
For Daily Alerts

ಕೊರೊನಾ ಪರಿಣಾಮ: ತನ್ನ ಉದ್ಯೋಗಿಗಳಿಗೆ ಎರಡು ಬಾರಿ ವೇತನ ನೀಡಲಿದೆ ರಿಲಯನ್ಸ್

|

ಕೊರೊನಾವೈರಸ್‌ ಪರಿಣಾಮ ದೇಶಾದ್ಯಂತ ಲಾಕ್‌ಡೌನ್ ಆಗಿದೆ. ಏಪ್ರಿಲ್ 15ರವರೆಗೆ ಯಾರು ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಎಲ್ಲಾ ಕಂಪನಿಗಳು, ಕೈಗಾರಿಕೆಗಳು ಈಗಾಗಲೇ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ರಜೆ ನೀಡಿದೆ. ಬಹುತೇಕ ಕಂಪನಿಗಳು ವೇತನ ಕಡಿತಕ್ಕೆ ಯೋಜಿಸುತ್ತಿದೆ. ಈ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳಿಗೆ ಎರಡು ಬಾರಿ ವೇತನ ನೀಡಲಿದೆ.

 

ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಕೊರೊನಾವೈರಸ್ ವಿರುದ್ಧ ಹೋರಾಡುವ ಕ್ರಮಗಳನ್ನು ಘೋಷಿಸಿದೆ. ತನ್ನ ಉದ್ಯೋಗಿಗಳು ಯಾರು 30,000 ಕ್ಕಿಂತ ಕಡಿಮೆ ಗಳಿಸುವವರಿಗೆ ತಿಂಗಳಿಗೆ ಎರಡು ಬಾರಿ ಸಂಬಳ ನೀಡಲಿದೆ. ಇದರಿಂದ ಉದ್ಯೋಗಿಗಳು ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವುದಕ್ಕೆ ಮೊದಲೇ ಅದರ ಅರ್ಧ ಸಂಬಳವನ್ನು ಮೊದಲೇ ಪಡೆಯಲಿದ್ದಾರೆ.

 
ಕೊರೊನಾ ಪರಿಣಾಮ: ಎರಡು ಬಾರಿ ವೇತನ ನೀಡಲಿದೆ ರಿಲಯನ್ಸ್

"ತಿಂಗಳಿಗೆ 30,000 ರುಪಾಯಿಗಿಂತ ಕಡಿಮೆ ಆದಾಯ ಗಳಿಸುವವರಿಗೆ, ಅವರ ಹಣದ ಹರಿವನ್ನು ರಕ್ಷಿಸಲು ಮತ್ತು ಯಾವುದೇ ಹೆಚ್ಚಿನ ಆರ್ಥಿಕ ಹೊರೆ ತಗ್ಗಿಸಲು ತಿಂಗಳಿಗೆ ಎರಡು ಬಾರಿ ಸಂಬಳ ನೀಡಲಾಗುವುದು" ಎಂದು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಈ ಮಾರಕ ವೈರಸ್ ವಿಶ್ವಾದ್ಯಂತ 10,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಭಾರತ ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕು ಪ್ರಕರಣಗಳನ್ನು ವರದಿ ಮಾಡಿದೆ.

ಕೋವಿಡ್ -19 ವಿರುದ್ಧದ ಈ ಯೋಜನೆಯಲ್ಲಿ ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ರಿಟೇಲ್, ಜಿಯೋ, ರಿಲಯನ್ಸ್ ಲೈಫ್ ಸೈನ್ಸಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫ್ಯಾಮಿಲಿಯ ಎಲ್ಲಾ 6,00,000 ಉದ್ಯೋಗಿಗಳನ್ನು ಒಟ್ಟುಗೂಡಿಸಿ ಒಟ್ಟು ಸಾಮರ್ಥ್ಯಗಳನ್ನು ಆಧರಿಸಿ ರಿಲಯನ್ಸ್ ಈ ಯೋಜನೆಯನ್ನು ರೂಪಿಸಿದೆ ಎಂದು ಕಂಪನಿ ತಿಳಿಸಿದೆ.

English summary

Corona Impact Reliance To Pay Twice Salary To Employees

Reliance Announced Those who earn below ₹30,000 per month, will get their salaries twice a month in the wake of coronavirus outbreak.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X