For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ವಿಶ್ವದಾದ್ಯಂತ 14,600 ಉದ್ಯೋಗಿಗಳನ್ನು ವಜಾಗೊಳಿಸಲಿರುವ ಕಾರು ತಯಾರಕ ರೆನಾಲ್ಟ್

|

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಕಂಪನಿಯೂ ಮುಂದಿನ ಮೂರು ವರ್ಷಗಳಲ್ಲಿ ಎರಡು ಬಿಲಿಯನ್ ಯೂರೋ ವೆಚ್ಚ ಕಡಿತಗೊಳಿಸುವ ಯೋಜನೆಯ ಭಾಗವಾಗಿ ವಿಶ್ವದಾದ್ಯಂತ 14,600 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿದೆ.

ಈ ಯೋಜನೆಯು ಫ್ರಾನ್ಸ್ ನಲ್ಲಿಯೇ ಸುಮಾರು 4,600 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು, ವಿಶ್ವದಾದ್ಯಂತ ಇತರೆ 10 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಎಂದು ರೆನಾಲ್ಟ್ ಶುಕ್ರವಾರ ತಿಳಿಸಿದೆ. ರೆನಾಲ್ಟ್‌ ವಿಶ್ವದಾದ್ಯಂತ ಒಟ್ಟಾರೆ 1,80,000 ಉದ್ಯೋಗಿಗಳನ್ನು ಹೊಂದಿದೆ.

ವಿಶ್ವದಾದ್ಯಂತ 14,600 ಉದ್ಯೋಗಿಗಳನ್ನು ವಜಾಗೊಳಿಸಲಿರುವ ರೆನಾಲ್ಟ್

"ರೆನಾಲ್ಟ್ ಗ್ರೂಪ್ ಎದುರಿಸುತ್ತಿರುವ ತೊಂದರೆಗಳು, ವಾಹನ ಉದ್ಯಮವು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟು ಮತ್ತು ಪರಿಸರ ಪರಿವರ್ತನೆಯು ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
''ನಾವು ಹೆಚ್ಚು ಖರ್ಚು ಮಾಡಿದ್ದೇವೆ ಮತ್ತು ಹೂಡಿಕೆ ಮಾಡಿದ್ದೇವೆ ಮತ್ತು ಈಗ ನಮ್ಮ ನೆಲೆಗೆ ಮರಳುತ್ತೇವೆ" ಎಂದು ರೆನಾಲ್ಟ್ ಸಿಇಒ ಕ್ಲೋಟಿಲ್ಡೆ ಡೆಲ್ಬೋಸ್ ಹೇಳಿದ್ದಾರೆ.

ಮೂರು ವರ್ಷಗಳಲ್ಲಿ 2 ಬಿಲಿಯನ್ ಯುರೋಗಳಿಗಿಂತ ಹೆಚ್ಚು (2.2 ಬಿಲಿಯನ್ ಡಾಲರ್) ಉಳಿತಾಯವನ್ನು ಸಾಧಿಸಲು, ರೆನಾಲ್ಟ್ ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು 1.2 ಬಿಲಿಯನ್ ಯುರೋಗಳಷ್ಟು ವೆಚ್ಚವಾಗಲಿದೆ.

ಈ ಪ್ರಕಟಣೆ ಘೋಷಣೆ ಬಳಿಕ ಪ್ಯಾರಿಸ್‌ನಲ್ಲಿ ಬೆಳಿಗ್ಗೆ 9:34 ರ ವೇಳೆಗೆ ಷೇರುಗಳು 3.3% ನಷ್ಟು ಇಳಿದು 21.18 ಯುರೋಗಳಿಗೆ ತಲುಪಿದ್ದು, ಈ ವರ್ಷದ ಕುಸಿತವನ್ನು 50% ಕ್ಕೆ ವಿಸ್ತರಿಸಿದೆ.

English summary

Corona Impact Renault To Cut 14,600 Jobs Worldwide

Renault SA plans to eliminate about 14,600 jobs worldwide and lower production capacity by almost a fifth as part of Slash costs
Story first published: Friday, May 29, 2020, 16:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X