For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್ ಡೌನ್: ರಾತ್ರಿ ವಾಸ್ತವ್ಯ, ಊಟದ ಮಾಹಿತಿ ಗೂಗಲ್ ನಲ್ಲಿ

|

ಗೂಗಲ್ ನಿಂದ ಭಾರತದಲ್ಲಿ ಅದರ ಸರ್ಚ್ ಮತ್ತು ಮ್ಯಾಪ್ಸ್ ಗಳಲ್ಲಿ ಹೊಸ ಫೀಚರ್ ಸೇರ್ಪಡೆ ಮಾಡಲಾಗಿದೆ. ಕೊರೊನಾದಿಂದ ಬಾಧಿತವಾಗಿರುವ ಭಾರತದ ಹಲವು ನಗರಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ, ಊಟಕ್ಕೆ ಎಲ್ಲಿ ವ್ಯವಸ್ಥೆ ಇದೆ ಎಂಬ ಮಾಹಿತಿ ಇದರಲ್ಲಿ ದೊರೆಯುತ್ತದೆ. ಕೇಂದ್ರ ಸರ್ಕಾರದ ಜತೆಗಿನ ಸಹಯೋಗದಲ್ಲಿ ಈ ಹೊಸ ಕಾರ್ಯಕ್ರಮ ಆರಂಭವಾಗಿದೆ.

ಸರ್ಕಾರ ನಡೆಸುತ್ತಿರುವ ವಾಸ್ತವ್ಯ ಕೇಂದ್ರಗಳನ್ನು ಗೂಗಲ್ ಮ್ಯಾಪ್ಸ್, ಸರ್ಚ್ ಮೂಲಕ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ಗೂಗಲ್ ಅಸಿಸ್ಟೆಂಟ್ ಬಳಸಿಯೂ ಗೊತ್ತು ಮಾಡಿಕೊಳ್ಳಬಹುದು. ಗೂಗಲ್ ನೀಡಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ 30ಕ್ಕೂ ಹೆಚ್ಚು ನಗರಗಳಲ್ಲಿ ಈ ಫೀಚರ್ ಲಭ್ಯವಿದೆ.

ಕೊರೊನಾ ಲಾಕ್ ಡೌನ್; ಸಂಬಳ ಇಲ್ಲದೆ ಪರದಾಟ, ಕಷ್ಟ ಕೇಳೋರ್ಯಾರು?ಕೊರೊನಾ ಲಾಕ್ ಡೌನ್; ಸಂಬಳ ಇಲ್ಲದೆ ಪರದಾಟ, ಕಷ್ಟ ಕೇಳೋರ್ಯಾರು?

ಇನ್ನು ಮುಂದೆ ಇನ್ನಷ್ಟು ನಗರಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಸದ್ಯಕ್ಕೆ ಇಂಗ್ಲಿಷ್ ನಲ್ಲಿ ಮಾಹಿತಿ ಸಿಗುತ್ತಿದೆ. ಆದರೆ ಶೀಘ್ರದಲ್ಲೇ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ದೊರೆಯುವಂತೆ ಮಾಡಲಾಗುವುದು ಎಂದು ಗೂಗಲ್ ತಿಳಿಸಿದೆ.

ಕೊರೊನಾ ಲಾಕ್ ಡೌನ್: ರಾತ್ರಿ ವಾಸ್ತವ್ಯ, ಊಟದ ಮಾಹಿತಿ ಗೂಗಲ್ ನಲ್ಲಿ

ಯಾವ ಸ್ಥಳದಲ್ಲಿ ಆಹಾರ ದೊರೆಯುತ್ತದೆ ಎಂಬುದು ಗೊತ್ತಾಗಬೇಕಾದರೆ ಬಳಕೆದಾರರು, Food shelters Night shelters ಟೈಪ್ ಮಾಡಬೇಕು. ಇದನ್ನೇ ಧ್ವನಿಯ ಮೂಲಕವೂ ನೀಡಬಹುದು. ವಲಸಿಗರಿಗೆ, ಮನೆಗಳಿಲ್ಲದವರಿಗೆ ಈ ಹೊಸ ಫೀಚರ್ ನಿಂದ ಹೆಚ್ಚು ಪ್ರಯೋಜನ ಆಗಬಹುದು ಎನ್ನಲಾಗಿದೆ.

English summary

Corona Lock Down: Google Will Provide Night Shelter, Food Shelter Details

Google collaborating with India government will provide night shelter and food shelter details through it's new feature.
Story first published: Tuesday, April 7, 2020, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X