For Quick Alerts
ALLOW NOTIFICATIONS  
For Daily Alerts

UK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆ

|

2020ನೇ ಇಸವಿಯ ಏಪ್ರಿಲ್ ಹಾಗೂ ಜೂನ್ ತ್ರೈಮಾಸಿಕದ ಅರ್ಥ ವ್ಯವಸ್ಥೆಯನ್ನು ಕೊರೊನಾ ನುಂಗಿಹಾಕಿದೆ. ಇಡೀ ವಿಶ್ವದಲ್ಲೇ ಕೊರೊನಾ ಬೀರಿದ ಪ್ರಭಾವದ ಫಲಿತಾಂಶ ಬರುತ್ತಿದೆ. ಇದೀಗ ಯುನೈಟೆಡ್ ಕಿಂಗ್ ಡಮ್ ನಿಂದ ಬಂದಿರುವ ಸುದ್ದಿ ಪ್ರಕಾರ, ಈ ಅವಧಿಯಲ್ಲಿ ಅಲ್ಲಿನ ಆರ್ಥಿಕ ಉತ್ಪಾದನೆ 20.4% ಕುಗ್ಗಿದೆ. ಈವರೆಗೆ ಯಾವುದೇ ಪ್ರಮುಖ ದೇಶ ಬಿಡುಗಡೆ ಮಾಡಿರುವ ಜಿಡಿಪಿ ಅಂಕಿ- ಅಂಶದಲ್ಲೇ ಅತ್ಯಂತ ಹೆಚ್ಚಿನ ಕುಸಿತ ಇದು.

ವಿಶ್ವದಲ್ಲೇ ಆರನೇ ಪ್ರಮುಖ ಆರ್ಥಿಕತೆ ಹೊಂದಿದ ದೇಶ ಯು.ಕೆ. ಈ ಹಿಂದಿನ ತ್ರೈಮಾಸಿಕದಲ್ಲೂ ಜಿಡಿಪಿ ಪ್ರಮಾಣ ಕುಗ್ಗಿತ್ತು. ಇದೀಗ ಸತತವಾಗಿ ಎರಡನೇ ತ್ರೈಮಾಸಿಕವೂ ಕುಸಿತ ಕಂಡಿರುವುದರಿಂದ ಆರ್ಥಿಕ ಕುಸಿತದ (ರಿಸೆಷನ್) ವಲಯದೊಳಗೆ ಅಧಿಕೃತವಾಗಿ ಪ್ರವೇಶಿಸಿದಂತಾಗಿದೆ.

ಯುನೈಟೆಡ್ ಕಿಂಗ್ ಡಮ್ ಗೆ ಶತಮಾನದ ಆರ್ಥಿಕ ಕುಸಿತ ತಂದ ಕೊರೊನಾಯುನೈಟೆಡ್ ಕಿಂಗ್ ಡಮ್ ಗೆ ಶತಮಾನದ ಆರ್ಥಿಕ ಕುಸಿತ ತಂದ ಕೊರೊನಾ

ಜೂನ್ ತ್ರೈಮಾಸಿಕದಲ್ಲಿ ಮೇ ತಿಂಗಳಿಗಿಂತ ಸ್ವಲ್ಪ ಮಟ್ಟಿಗೆ, ಅಂದರೆ 8.7% ಜಿಡಿಪಿ ಚೇತರಿಸಿಕೊಂಡಿದೆ. ಇನ್ನು ಈ ಬಾರಿ ಜೂನ್ ಉತ್ಪಾದನೆಯು 16.8% ಇದ್ದು, ಕಳೆದ ವರ್ಷದ ಜೂನ್ ಗೆ ಹೋಲಿಸಿದಲ್ಲಿ ಕಡಿಮೆ ಇದೆ. ಅದೇ ರೀತಿ ಮೇ ತಿಂಗಳಲ್ಲಿ 23.3% ಕಡಿಮೆ ಆಗಿತ್ತು.

UK ಈಗ ಆರ್ಥಿಕ ಕುಸಿತದ ಸುಳಿಯಲ್ಲಿ; 'ಸೂರ್ಯ ಮುಳುಗದ ನಾಡಲ್ಲಿ' ಕತ್ತಲೆ

ಈಗಿನ ಆರ್ಥಿಕ ಕುಸಿತವು ಕೊರೊನಾದಿಂದ ಆಗಿರುವ ಜಿಡಿಪಿ ಕುಸಿತದ ಪರಿಣಾಮ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ ನಲ್ಲಿ ಆರ್ಥಿಕತೆ ಪುಟಿದೇಳಲು ಆರಂಭವಾಯಿತು. ಆದರೂ ಜೂನ್ ತಿಂಗಳ ಜಿಡಿಪಿಯು ಕೊರೊನಾ ವ್ಯಾಪಿಸುವ ಮುಂಚಿನ, ಅಂದರೆ ಫೆಬ್ರವರಿ ಮಟ್ಟಕ್ಕಿಂತ ಕಡಿಮೆ ಇದೆ.

ಭಾರತಕ್ಕೆ ರಿಸರ್ವ್ ಬ್ಯಾಂಕ್ ಹೇಗೋ ಅದೇ ರೀತಿ ಯುಕೆ ಪಾಲಿಗೆ ಬ್ಯಾಂಕ್ ಆಫ್ ಇಂಗ್ಲೆಂಡ್. ಅಲ್ಲಿನ ಕೇಂದ್ರ ಬ್ಯಾಂಕ್ ಪ್ರಕಾರ, ಯು.ಕೆ. ಆರ್ಥಿಕತೆ ಮೊದಲಿನ ಪ್ರಮಾಣಕ್ಕೆ ಬರಬೇಕಿದ್ದಲ್ಲಿ 2021ರ ಕೊನೆ ತ್ರೈಮಾಸಿಕ ಆಗಬಹುದು. ಇದರ ಜತೆಗೆ ನಿರುದ್ಯೋಗ ಪ್ರಮಾಣ ವಿಪರೀತ ಹೆಚ್ಚಾಗಲಿದೆ ಎಂದು ಕೂಡ ಎಚ್ಚರಿಸಲಾಗಿದೆ.

ಈ ಸಂಖ್ಯೆಗಳು ಬಹಳ ಕಷ್ಟದ ಸಮಯ ಎಂಬುದನ್ನು ಖಾತ್ರಿ ಮಾಡುತ್ತಿವೆ ಎಂದು ಹಣಕಾಸು ಸಚಿವ ರಿಷಿ ಸುನಕ್ ಹೇಳಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತು ದುಃಖದ ಸಂಗತಿ ಅಂದರೆ, ಮುಂಬರುವ ತಿಂಗಳಲ್ಲಿ ಇನ್ನೂ ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ.

English summary

Corona Virus Economic Impact: UK Officially Enters Recession

Due to Corona virus impact UK output for June quarter contracted by 20%. By this UK entered recession officially.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X