For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಪೈಸಾಬಜಾರ್ ನಿಂದ 1500 ಉದ್ಯೋಗಕ್ಕೆ ಕತ್ತರಿ

|

ಪಾಲಿಸಿಬಜಾರ್ ನ ಸಹವರ್ತಿ ಸಂಸ್ಥೆಯಾದ ಪೈಸಾಬಜಾರ್ ನಿಂದ 1500 ಉದ್ಯೋಗಿಗಳು ಹೊರಬಿದ್ದಿದ್ದಾರೆ. ಅಂದರೆ ಅಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಅಂದಹಾಗೆ, ಪೈಸಾಬಜಾರ್ ನಲ್ಲಿ ಇರುವ ಉದ್ಯೋಗಿಗಳ ಸಂಖ್ಯೆಯೇ 3,000. ಅದರಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಯನ್ನು ತೆಗೆದಂತಾಗಿದೆ.

 

ಕಾರ್ಯ ಚಟುವಟಿಕೆ ಹಾಗೂ ವ್ಯವಹಾರ ತರುವ ವಿಭಾಗದಲ್ಲಿ ಇದ್ದವರ ಪೈಕಿಯೇ ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಏಕೆಂದರೆ ಕೆಲವು ಸೆಗ್ಮೆಂಟ್ ಗಳಲ್ಲಿ ಹೊಸದಾಗಿ ಸಾಲ ಪಡೆಯುವವರ ಪ್ರಮಾಣವೇ ಶೇಕಡಾ 90ರಷ್ಟು ಕುಸಿದಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲವರು ಮಾಹಿತಿ ನೀಡಿದ್ದಾರೆ.

ಉದ್ಯೋಗದಿಂದ ತೆಗೆದವರಿಗೆ ಒಂದು ತಿಂಗಳು ನೋಟಿಸ್

ಉದ್ಯೋಗದಿಂದ ತೆಗೆದವರಿಗೆ ಒಂದು ತಿಂಗಳು ನೋಟಿಸ್

ಉದ್ಯೋಗದಿಂದ ತೆಗೆಯಲಾದವರನ್ನು ಒಂದು ತಿಂಗಳು ನೋಟಿಸ್ ಅವಧಿಯಲ್ಲಿ ಕೆಲಸ ಮಾಡಲು ಸೂಚಿಸಿದ್ದು, ಜೂನ್ 30, 2020ಕ್ಕೆ ಕೊನೆಯಾಗುತ್ತದೆ. ಇನ್ನು ಮೇಲ್ ಸ್ತರದ ಅಧಿಕಾರಿಗಳು ನೂರು ಮಂದಿಯನ್ನು ಪೈಸಾಬಜಾರ್ ನಿಂದ ಪಾಲಿಸಿಬಜಾರ್ ಗೆ ನೇಮಿಸಿಕೊಳ್ಳಲಾಗಿದೆ. ಆದರೆ ಈ ಯಾವುದರ ಬಗ್ಗೆಯೂ ಪೈಸಾಬಜಾರ್ ನಿಂದ ಪ್ರತಿಕ್ರಿಯೆ ದೊರೆತಿಲ್ಲ.

ಹಣದ ಹರಿವು ನಿಂತಿದ್ದರಿಂದ ಬಡ್ಡಿ ದರ ಹೆಚ್ಚಳ

ಹಣದ ಹರಿವು ನಿಂತಿದ್ದರಿಂದ ಬಡ್ಡಿ ದರ ಹೆಚ್ಚಳ

ಕೊರೊನಾದ ಕಾರಣಕ್ಕೆ ಕಳೆದ ಎರಡು ತಿಂಗಳಿಂದಲೂ ಡಿಜಿಟಲ್ ಮೂಲಕ ಸಾಲ ನೀಡುವ ವಲಯ ಸಂಕಷ್ಟದಲ್ಲಿತ್ತು. ಇನ್ನು ಡಿಜಿಟಲ್ ಮೂಲಕ ಸಾಲ ನೀಡುವವರಿಗೆ ಬ್ಯಾಂಕ್, ಎನ್ ಬಿಎಫ್ ಸಿಗಳಿಂದ ಹೊಸದಾಗಿ ಹಣ ಸಂಗ್ರಹಿಸುವುದು ಸಹ ಕಷ್ಟವಾಗಿತ್ತು. ಏಕೆಂದರೆ, ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಹಣವನ್ನೇ ಸಾಲವಾಗಿ ಇವುಗಳು ನೀಡುತ್ತಿದ್ದವು. ಹೀಗೆ ಹಣದ ಹರಿವು ನಿಂತುಹೋಗಿದ್ದರಿಂದ ಸಾಲದ ಬಡ್ಡಿ ದರದಲ್ಲಿ ಹೆಚ್ಚಳವಾಗಿತ್ತು.

ಇಎಂಐ ವಿನಾಯಿತಿ ನೀಡಿದ್ದರಿಂದ ವಸೂಲಿ ಕಷ್ಟ
 

ಇಎಂಐ ವಿನಾಯಿತಿ ನೀಡಿದ್ದರಿಂದ ವಸೂಲಿ ಕಷ್ಟ

ಇದರ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಾಲದ ಮೇಲಿನ ಇಎಂಐಗೆ ವಿನಾಯಿತಿ ಘೋಷಿಸಿದ್ದರಿಂದ ಸಾಲ ನೀಡುವ ಸಂಸ್ಥೆಗಳಿಗೆ ಸಾಲಗಾರರಿಂದ ಹಣ ವಸೂಲಿ ಮಾಡುವುದೇ ಕಷ್ಟವಾಯಿತು. ಇದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಹೇಳುವ ಪ್ರಕಾರ, ಹೊಸದಾಗಿ ಸಾಲ ಪಡೆಯುವವರ ಪ್ರಮಾಣ 10ರಿಂದ 25 ಪರ್ಸೆಂಟ್ ಕಡಿಮೆ ಆಗಿದೆ.

ಲಾಕ್ ಡೌನ್ ನಂತರದ ಪರಿಣಾಮ

ಲಾಕ್ ಡೌನ್ ನಂತರದ ಪರಿಣಾಮ

ಅತಿ ದೊಡ್ಡ ಮಟ್ಟದಲ್ಲಿ ಪರಿಣಾಮ ಶುರುವಾಗಿದ್ದು ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾದ ಮೇಲೆ. ಈ ಹಿಂದೆ ಯಾವಾಗಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳೂ ಒಳಗೊಂಡಂತೆ ಡಿಜಿಟಲ್ ಸಾಲ ನೀಡುವ ಸಂಸ್ಥೆಗಳು ಇಂಥ ಸನ್ನಿವೇಶಕ್ಕೆ ಸಿದ್ಧವಿರಲಿಲ್ಲ. ಈ ಬಿಕ್ಕಟ್ಟಿನ ಸಂದರ್ಭದಲ್ಲೇ ಪೈಸಾಬಜಾರ್ ಪಾಲಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಶೇಕಡಾ 80ರಷ್ಟು ಕಡಿಮೆ ಆಗಿದೆ.

English summary

Coronavirus Economic Impact: 1500 Job Cut From Paisabazaar

Due to Coronavirus economic impact, 1500 job cut from digital lending platform Paisabazaar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X