For Quick Alerts
ALLOW NOTIFICATIONS  
For Daily Alerts

ನಾಲ್ಕೇ ತಿಂಗಳಲ್ಲಿ 30000 ಕೋಟಿ ರುಪಾಯಿ ಇಪಿಎಫ್ ಹಿಂತೆಗೆತ

|

ಕರೋನವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಲ್ಲದೇ ವೇತನ ಕಡಿತವನ್ನು ಎದುರಿಸಿದ್ದಾರೆ.

ಈ ಸಮಯದಲ್ಲಿ ಇತರ ಖರ್ಚು ಏರಿಕೆಯನ್ನು ಕಂಡಿರುವುದರಿಂದ ಅನೇಕ ಜನರು ತಮ್ಮ ಉಳಿತಾಯವನ್ನು ಹಿಂತೆಗೆಯಲು ಆರಂಭಿಸಿದ್ದಾರೆ. ಈ ಹಲವಾರು ಅಂಶಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯಿಂದ ದೊಡ್ಡ ಪ್ರಮಾಣದಲ್ಲಿ ಉಳಿಯತಾಯ ಹಿಂಪಡೆಯಲು ಕಾರಣವಾಗಿವೆ.

ದಿ ಎಕನಾಮಿಕ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಾಂಕ್ರಾಮಿಕ ರೋಗದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ - ಏಪ್ರಿಲ್ ನಿಂದ ಜುಲೈ ವರೆಗೆ ಸುಮಾರು 8 ಮಿಲಿಯನ್ ಇಪಿಎಫ್ಒ ಚಂದಾದಾರರು 30,000 ಕೋಟಿ ರೂ ಹಿಂತೆಗೆದಿದ್ದಾರೆ.

ನಿಧಿಯ ಗಳಿಕೆಯ ಮೇಲೆ ತೀವ್ರ ಪರಿಣಾಮ

ನಿಧಿಯ ಗಳಿಕೆಯ ಮೇಲೆ ತೀವ್ರ ಪರಿಣಾಮ

ಕಳೆದ ನಾಲ್ಕು ತಿಂಗಳುಗಳಲ್ಲಿ ಭಾರಿ ಪ್ರಮಾಣದ ಉಳಿತಾಯ ಹೊರಹೋಗುವಿಕೆಯು ನಿಧಿಯ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗ ನಷ್ಟ, ಸಂಬಳ ಕಡಿತ ಮತ್ತು ಇತರ ವೆಚ್ಚಗಳಿಂದಾಗಿ ವಾಪಸಾತಿ ಪ್ರಮಾಣ ಹೆಚ್ಚಾಗಿದೆ.

ಕೋವಿಡ್ ವಿಂಡೋ ಅಡಿಯಲ್ಲಿ

ಕೋವಿಡ್ ವಿಂಡೋ ಅಡಿಯಲ್ಲಿ

ಕೋವಿಡ್ ವಿಂಡೋ ಅಡಿಯಲ್ಲಿ ಸುಮಾರು ಮೂರು ಮಿಲಿಯನ್ ಫಲಾನುಭವಿಗಳು 8,000 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಉಳಿದ 22,000 ಕೋಟಿ ರೂಗಳನ್ನು 5 ಮಿಲಿಯನ್ ಇಪಿಎಫ್ಒ ಚಂದಾದಾರರು ಸಾಮಾನ್ಯ ವಿಂಡೋ ಅಡಿಯಲ್ಲಿ ಹಿಂತೆಗೆದುಕೊಂಡಿದ್ದಾರೆ.

ನಿವೃತ್ತಿ ನಿಧಿ ಸಂಸ್ಥೆಗಳ ದಕ್ಷತೆಯ ಮೇಲೆ ತೀವ್ರ ಪರಿಣಾಮ

ನಿವೃತ್ತಿ ನಿಧಿ ಸಂಸ್ಥೆಗಳ ದಕ್ಷತೆಯ ಮೇಲೆ ತೀವ್ರ ಪರಿಣಾಮ

ಭಾರತದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದ ಕೂಡಲೇ ಹಣ ಹಿಂಪಡೆಯಲು ವಿಶೇಷ ಕೋವಿಡ್ ವಿಂಡೋವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆದಾಗ್ಯೂ, ನಿಧಿಯಿಂದ ಹೊರಹೋಗುವಿಕೆಯ ತೀವ್ರ ಏರಿಕೆ ನಿವೃತ್ತಿ ನಿಧಿ ಸಂಸ್ಥೆಗಳ ದಕ್ಷತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನಲಾಗಿದೆ.

ಹಿಂಪಡೆಯುವಿಕೆ ವೇಗವಾಗಿ ಹೆಚ್ಚುತ್ತಿದೆ.

ಹಿಂಪಡೆಯುವಿಕೆ ವೇಗವಾಗಿ ಹೆಚ್ಚುತ್ತಿದೆ.

ದೇಶದಲ್ಲಿ ಕರೋನವೈರಸ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುವುದರೊಂದಿಗೆ ಇಪಿಎಫ್‌ಒ ಹಿಂಪಡೆಯುವಿಕೆ ವೇಗವಾಗಿ ಹೆಚ್ಚುತ್ತಿದೆ. ಆರ್‌ಬಿಐ ನೀತಿ ದರಗಳನ್ನು ಕಡಿತಗೊಳಿಸುತ್ತಿರುವ ಸಮಯದಲ್ಲಿ ಇಪಿಎಫ್‌ಒ ದರಗಳು ಈ ವರ್ಷ ಮತ್ತಷ್ಟು ಇಳಿಯುವ ಸಾಧ್ಯತೆಯಿದೆ ಎಂದು ಹಲವಾರು ವರದಿಗಳು ತಿಳಿಸಿವೆ.

English summary

Coronavirus Effect: 30000 Crore Rupees EPF Withdrawal In Four Months

Coronavirus Effect: 30000 Crore Rupees EPF Withdrawal In Four Months
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X