For Quick Alerts
ALLOW NOTIFICATIONS  
For Daily Alerts

ಕೊರೊನಾಯಿಂದ ವಿಶ್ವದ ಆರ್ಥಿಕತೆಗೆ ಗಂಡಾಂತರ ಕಾದಿದೆ : ಆರ್‌ಬಿಐ

|

ಕೊರೊನಾವೈರಸ್‌ ಭಾರತವಷ್ಟೇ ಅಲ್ಲದೆ ವಿಶ್ವದ ಆರ್ಥಿಕತೆ ಭಾರೀ ಪರಿಣಾಮ ಬೀರಲಿದ್ದು, ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ತನ್ನ ಇತ್ತೀಚಿನ ಹಣಕಾಸು ನೀತಿ ವರದಿಯಲ್ಲಿ ಹೇಳಿದೆ. ಕೊರೊನಾವೈರಸ್‌ನಿಂದಾಗಿ ಭವಿಷ್ಯದಲ್ಲಿ ವಿಶ್ವದ ಆರ್ಥಿಕತೆ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ಚಟುವಟಿಕೆ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಆರ್‌ಬಿಐ ಹೇಳಿದೆ.

2019-20ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರ 5.0 ಪರ್ಸೆಂಟ್‌ರಷ್ಟು ಇರುತ್ತದೆ ಎಂದು ಆರ್‌ಬಿಐ ಅಂದಾಜು ಮಾಡಿತ್ತು. ಆದರೆ 2020-21ರ ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ದರ 5.5 ಪರ್ಸೆಂಟ್‌ರಷ್ಟು ಇರುತ್ತದೆ ಎಂಬ ಅಂದಾಜನ್ನು ಆರ್‌ಬಿಐ ಮಾಡಿದೆ.

ಕೊರೊನಾಯಿಂದ ವಿಶ್ವದ ಆರ್ಥಿಕತೆಗೆ ಗಂಡಾಂತರ ಕಾದಿದೆ : ಆರ್‌ಬಿಐ

ಕೊರೊನಾ ವೈರಸ್‌ನಿಂದ ಏಕಾಏಕಿ ದೇಶದ ಆರ್ಥಿಕ ಸ್ಥಿತಿಯ ಚಿತ್ರಣವನ್ನೇ ಬದಲಾಯಿಸಿದೆ. ವೈರಸ್ ಹರಡುವುದಕ್ಕಿಂತ ಮೊದಲು 2020-21ರ ಆರ್ಥಿಕ ಬೆಳವಣಿಗೆಯ ದೃಷ್ಟಿಕೋನ ಅಭಿವೃದ್ಧಿಯ ಕಡೆ ಹೆಜ್ಜೆ ಹಾಕುತ್ತಿತ್ತು. ಆದರೆ, ಕೊರೊನಾ ಈ ಆರ್ಥಿಕ ದೃಷ್ಟಿಕೋನವನ್ನು ತೀವ್ರ ಬದಲಿಸಿದ್ದು, ಕುಸಿತದ ಹಾದಿಯನ್ನು ತೋರಿಸಿದೆ. ಲಾಕ್‌ಡೌನ್‌ ಪರಿಣಾಮ ಜಾಗತಿಕ ಪೂರೈಕೆ ಸರಪಳಿಗಳು, ಪ್ರಯಾಣ ಮತ್ತು ಪ್ರವಾಸೋದ್ಯಮ ಹಾಗೂ ಅನೇಕ ಕ್ಷೇತ್ರಗಳ ಮೇಲೆ ಆಗುತ್ತಿದೆ. ಇದರಿಂದ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ರಿಸರ್ವ್‌ ಬ್ಯಾಂಕ್‌ ವರದಿಯಲ್ಲಿ ವಿವರಿಸಿದೆ.

ಮಾರ್ಚ್ 25ರಿಂದ ಭಾರತ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಲ್ಲಿದ್ದು, ಲಾಕ್‌ಡೌನ್‌ ವಿಸ್ತರಣೆಯಾಗುವ ಸಾಧ್ಯತೆ ಬಹಳಷ್ಟಿದೆ. ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿರುವುದರಿಂದ ನೇರವಾಗಿ ಭಾರತದ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಲಾಕ್‌ಡೌನ್‌ನಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟಾರೆ ಬೇಡಿಕೆ ಕಡಿಮೆಯಾಗುತ್ತದೆ ಎಂದು ಆರ್‌ಬಿಐ ವರದಿ ಹೇಳಿದೆ.

English summary

Coronavirus Hangs Over Future Like Spectre Says RBI

The macroeconomic risks held forth by the Covid-19 outbreak would be severe for India, the RBI said
Story first published: Thursday, April 9, 2020, 19:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X