For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಭಾರತಕ್ಕೆ 11.40 ಲಕ್ಷ ಕೋಟಿ ನಷ್ಟ: ವಿಶ್ವ ಬ್ಯಾಂಕ್

|

2020ನೇ ಇಸವಿಯಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಜೀವ ಹಾನಿಯ ಜತೆಗೆ ಭಾರತಕ್ಕೆ $150 ಬಿಲಿಯನ್ ನಷ್ಟ ಆಗಿರಬಹುದು. ಏಪ್ರಿಲ್ ನಿಂದ ಜೂನ್ ಮಧ್ಯದ ಮೂರು ತಿಂಗಳಲ್ಲಿ ದೇಶದಾದ್ಯಂತ ಲಾಕ್ ಡೌನ್ ನಿಂದ ವ್ಯಾಪಾರ- ವ್ಯವಹಾರವೇ ನಿಂತುಹೋಗಿತ್ತು. ಮೇ ತಿಂಗಳ ಕೊನೆ ಹೊತ್ತಿಗೆ ಆರ್ಥಿಕತೆ 17 ಪರ್ಸೆಂಟ್ ಕುಗ್ಗಿದೆ ಎಂದು ವಿಶ್ವ ಬ್ಯಾಂಕ್ ಸಂಶೋಧನಾ ವರದಿ ಹೇಳಿದೆ.

ಈ ವರ್ಷದಲ್ಲಿ ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ) 5.1 ಪರ್ಸೆಂಟ್ ಗೆ ಕುಗ್ಗಬಹುದು ಎನ್ನಲಾಗಿದೆ. ಇನ್ನು ವಾಸ್ತವ ಬೆಳವಣಿಗೆ ಕೂಡ ಕೊರೊನಾದಿಂದ ಪರಿಸ್ಥಿತಿ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬನೆ ಆಗಿದೆ. ಈಗಿನ ಸಂಶೋಧನೆಯನ್ನು ನಿತ್ಯದ ವಿದ್ಯುಚ್ಛಕ್ತಿ ಬಳಕೆಯ ಆಧಾರದ ಮೇಲೆ ಮಾಡಲಾಗಿದೆ.

Unlock 2.0:ಗಣನೀಯ ಪ್ರಮಾಣದಲ್ಲಿ ಕುಸಿತಗೊಳ್ಳುತ್ತಿರುವ ನಿರುದ್ಯೋಗ ದರUnlock 2.0:ಗಣನೀಯ ಪ್ರಮಾಣದಲ್ಲಿ ಕುಸಿತಗೊಳ್ಳುತ್ತಿರುವ ನಿರುದ್ಯೋಗ ದರ

ಯಾವ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಲಾಗುತ್ತದೆ ಎಂಬುದರ ಆಧಾರದಲ್ಲಿ ಭಾರತದ ಆರ್ಥಿಕ ಚಟುವಟಿಕೆಯನ್ನು ಅಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ರಾಜ್ಯ, ಜಿಲ್ಲೆ ಹಾಗೂ ನಗರಗಳಲ್ಲಿ ಒಂದೇ ಬಗೆಯಲ್ಲಿ ಲಾಕ್ ಡೌನ್ ಪರಿಣಾಮ ಆಗಿಲ್ಲ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಗಿದೆ ಎಂದು ತಿಳಿಸಲಾಗಿದೆ.

ಕೊರೊನಾದಿಂದ ಭಾರತಕ್ಕೆ 11.40 ಲಕ್ಷ ಕೋಟಿ ನಷ್ಟ: ವಿಶ್ವ ಬ್ಯಾಂಕ್

ಆಯಾ ರಾಜ್ಯದಲ್ಲಿನ ವಲಸಿಗ ಕಾರ್ಮಿಕರ ಪ್ರಮಾಣ ಮತ್ತಿತರ ಅಂಶವೂ ಪರಿಣಾಮ ಬೀರಿದೆ. ಎಲ್ಲಿ ಕೊರೊನಾ ಸೋಂಕು ಹೆಚ್ಚಿದೆಯೋ ಅಂಥಲ್ಲಿ ರಾತ್ರಿ ವೇಳೆ ವಿದ್ಯುತ್ ಬಳಕೆ ಕಡಿಮೆ ಆಗಿದೆ. ಆದರೆ ಅದನ್ನು ಇಡೀ ರಾಜ್ಯದಲ್ಲಿ ಅಂತ ಗಣನೆಗೆ ತೆಗೆದುಕೊಳ್ಳಲು ಆಗಲ್ಲ. ಏಪ್ರಿಲ್ ತಿಂಗಳಲ್ಲಿ ಬಹುತೇಕ ಎಲ್ಲ ನಗರಗಳಲ್ಲೂ ವಿದ್ಯುತ್ ಬಳಕೆ ಕಡಿಮೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

English summary

Coronavirus Pandemic May Cost India 150 Billion USD In 2020: World Bank

According to World bank report, Coronavirus cost 150 billion USD to Inida.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X