For Quick Alerts
ALLOW NOTIFICATIONS  
For Daily Alerts

ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ

|

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಸಿರಿವಂತರ ಸಂಖ್ಯೆ ಇನ್ನಷ್ಟು ವೇಗವಾಗಿ ಬೆಳೆಯುತ್ತಿದೆ. ವಿಶ್ವದ ಅತಿ ಶ್ರೀಮಂತ 10 ವ್ಯಕ್ತಿಗಳಲ್ಲಿ ಭಾರತೀಯರು ಕನಿಷ್ಠ ಒಬ್ಬಿಬ್ಬರಾದೂ ಇರುವಂಥ ಸ್ಥಿತಿ ಇದೆ. ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಲೆಕ್ಕಕ್ಕೇ ಸಿಗದಷ್ಟು ಹೆಚ್ಚಾಗಿ ಹೋಗಿದೆ. ಇದೇ ವೇಳೆ, ನೂರಾರು ಕೋಟಿಗಳ ಒಡೆಯರಾದ ಅತಿ ಶ್ರೀಮಂತರ ಸಂಖ್ಯೆಯಲ್ಲೂ ಭಾರತ ನಾಗಾಲೋಟದಲ್ಲಿದೆ.

ಒಂದು ವರದಿ ಪ್ರಕಾರ, ವಿಶ್ವದ ಸೆಂಟಿ-ಮಿಲಿಯನೈರ್‌ಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಸೆಂಟಿ ಮಿಲಿಯನೇರ್‌ಗಳೆಂದರೆ 10 ಕೋಟಿ ಡಾಲರ್‌ಗೂ ಹೆಚ್ಚು ಹಣ ಹೊಂದಿರುವ ಸಿರಿವಂತರು. ಅಂದರೆ, 800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿವಂತರು. ಹೆಚ್ಚೂಕಡಿಮೆ ಶತ ಅಥವಾ ಸಹಸ್ರ ಕೋಟ್ಯಾಧಿಪತಿಗಳು.

ಅಕ್ಟೋಬರ್‌ನಲ್ಲಿ ಭಾರತದಿಂದ 6 ಸಾವಿರ ಕೋಟಿ ಹಿಂಪಡೆದ ವಿದೇಶೀ ಹೂಡಿಕೆದಾರರು; ಈ ವರ್ಷ ಹೊರಹೋದ ಹಣವೆಷ್ಟು?ಅಕ್ಟೋಬರ್‌ನಲ್ಲಿ ಭಾರತದಿಂದ 6 ಸಾವಿರ ಕೋಟಿ ಹಿಂಪಡೆದ ವಿದೇಶೀ ಹೂಡಿಕೆದಾರರು; ಈ ವರ್ಷ ಹೊರಹೋದ ಹಣವೆಷ್ಟು?

ಸದ್ಯ ವಿಶ್ವದಲ್ಲಿ ಸೆಂಟಿ ಮಿಲಿಯನೇರ್‌ಗಳ ಸಂಖ್ಯೆ 25,490 ಇದೆ. ಇಂಥ 1232 ಅತಿಶ್ರೀಮಂತರು ಭಾರತದಲ್ಲಿದ್ದಾರೆ. ಭಾರತೀಯ ನಗರಗಳ ಪೈಕಿ ಮುಂಬೈನಲ್ಲಿ ಅತಿ ಹೆಚ್ಚು ಸೆಂಟಿ ಮಿಲಿಯನೇರ್‌ಗಳಿದ್ದಾರೆ. ಭಾರತದ ವಾಣಿಜ್ಯನಗರಿಯಲ್ಲಿ ಇವರ ಸಂಖ್ಯೆ 253 ಇದೆ. ಬೆಂಗಳೂರು ಕೂಡ ಮುಂಬೈಗೆ ಸಮೀಪದಲ್ಲೇ ಇದೆ. ಶತಕೋಟ್ಯಾಧಿಪತಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ನಗರಗಳ ಪಟ್ಟಿಯಲ್ಲಿ ಮುಂಬೈ 15ನೇ ಸ್ಥಾನದಲ್ಲಿದ್ದರೆ ಬೆಂಗಳೂರು 25ನೇ ಸ್ಥಾನದಲ್ಲಿದೆ.

ವಿಶ್ವದ ಅತೀ ಶ್ರೀಮಂತರು ಹೆಚ್ಚು ಇರುವುದು ಅಮೆರಿಕದಲ್ಲಿ. 9730 ಸೆಂಟಿ ಮಿಲಿಯನೇರ್‌ಗಳು ಅಮೆರಿಕದಲ್ಲಿದ್ದಾರೆ. ಚೀನಾದಲ್ಲಿ 2021 ಮಂದಿ ಇದ್ದಾರೆ. ಭಾರತದ್ದು ಮೂರನೇ ಸ್ಥಾನ. ಬ್ರಿಟನ್, ಜರ್ಮನಿ, ಜಪಾನ್ ಮೊದಲಾದ ದೇಶಗಳಿಗಿಂತ ಭಾರತದಲ್ಲೇ ಸೆಂಟಿ ಮಿಲಿಯನೇರ್‌ಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಸೆಂಟಿ ಮಿಲಿಯನೇರ್‌ಗಳು

ವಿಶ್ವದಲ್ಲಿ ಅತಿಹೆಚ್ಚು ಸೆಂಟಿ ಮಿಲಿಯನೇರ್‌ಗಳು

ಒಟ್ಟು ಸೆಂಟಿ ಮಿಲಿಯನೇರ್‌ಗಳು: 25,490
1) ಅಮೆರಿಕ: 9,730
2) ಚೀನಾ: 2,021
3) ಭಾರತ: 1,132
4) ಬ್ರಿಟನ್: 968
5) ಜರ್ಮನಿ: 966
6) ಸ್ವಿಟ್ಜರ್ಲ್ಯಾಂಡ್: 808
7) ಜಪಾನ್: 765
8) ಕೆನಡಾ: 514
9) ಆಸ್ಟ್ರೇಲಿಯಾ: 463
10) ರಷ್ಯಾ: 435

ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?

ಮುಂಬೈ 15ನೇ ಸ್ಥಾನ

ಮುಂಬೈ 15ನೇ ಸ್ಥಾನ

ಇನ್ನು, ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿರುವ ನಗರಗಳ ವಿಚಾರಕ್ಕೆ ಬಂದರೆ ಟಾಪ್-5 ನಗರಗಳಲ್ಲಿ ಅಮೆರಿಕ ಮೂರು ನಗರಗಳಿವೆ. ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಮೊದಲೆರಡು ಸ್ಥಾನ ಪಡೆದಿವೆ. ಲಾಸ್ ಏಂಜಲಿಸ್ ನಗರ 4ನೇ ಸ್ಥಾನದಲ್ಲಿದೆ. ಭಾರತದ ಮುಂಬೈ 15ನೇ ಸ್ಥಾನದಲ್ಲಿದೆ.

1) ನ್ಯೂಯಾರ್ಕ್ (ಅಮೆರಿಕ): 737
2) ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): 623
3) ಲಂಡನ್ (ಬ್ರಿಟನ್): 406
4) ಲಾಸ್ ಏಂಜಲಿಸ್ (ಅಮೆರಿಕ): 393
5) ಬೀಜಿಂಗ್ (ಚೀನಾ): 363
6) ಶಾಂಘೈ (ಚೀನಾ): 350
7) ಜಿನಿವಾ (ಸ್ವಿಟ್ಜರ್‌ಲ್ಯಾಂಡ್): 345
8) ಚಿಕಾಗೋ (ಅಮೆರಿಕ): 340
9) ಸಿಂಗಾಪುರ್: 336
10) ಹೂಸ್ಟನ್ (ಅಮೆರಿಕ): 314
11) ಹಾಂಕಾಂಗ್: 280
12) ಮಾಸ್ಕೋ (ರಷ್ಯಾ): 269
13) ಟೋಕಿಯೋ (ಜಪಾನ್): 263
14) ಜುರಿಚ್ (ಸ್ವಿಟ್ಜರ್ಲ್ಯಾಂಡ್): 258
15) ಮುಂಬೈ: 243

ಆಫ್ರಿಕನ್ ದೇಶಗಳಿಂದ ಪೈಪೋಟಿ

ಆಫ್ರಿಕನ್ ದೇಶಗಳಿಂದ ಪೈಪೋಟಿ

ಶತ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುವಂಥ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಅಮೆರಿಕ ಮೊದಲಾದ ದೇಶಗಳಿಗೆ ಪೈಪೋಟಿ ನೀಡಬಲ್ಲ ಹಲವು ದೇಶಗಳಿವೆ. ಒಂದು ವರದಿ ಪ್ರಕಾರ, ಮುಂದಿನ 10 ವರ್ಷದಲ್ಲಿ ಶತ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚಳ ಕಾಣಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಈ ಅವಧಿಯಲ್ಲಿ ಸೆಂಟಿ ಮಿಲಿಯನೇರ್‌ಗಳ ಸಂಖ್ಯೆ ಶೇ. 80ರಷ್ಟು ಹೆಚ್ಚಲಿದೆ. ವಿಯೆಟ್ನಾಂನಲ್ಲಿ ಶೇ. 95ರಷ್ಟು ಹೆಚ್ಚಾಗಲಿದ್ದಾರೆ.

ಹಲವು ಆಫ್ರಿಕನ್ ದೇಶಗಳಲ್ಲಿ ಸಿರಿವಂತರ ಸಂಖ್ಯೆ ಗಣನೀಯವಾಗಿ ಹೆಚ್ಚಲಿರುವ ಅಂದಾಜು ಇದೆ. ರುವಾಂಡ, ಉಗಾಂಡ, ಕೀನ್ಯಾ ದೇಶಗಳಲ್ಲಿ ಸೆಂಟಿ ಮಿಲಿಯನೇರ್ಸ್ ಸಂಖ್ಯೆ ಶೇ. 50ಕ್ಕಿಂತ ಹೆಚ್ಚಾಗಬಹುದು.

English summary

Countries With Most Number of Centi Millionaires, India 3rd

There are 25,490 centi-millionaires in the world. US tops the list, while India comes 3rd place in having most number of centi millionaires. Among Indian cities, Mumbai tops the list.
Story first published: Sunday, October 23, 2022, 15:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X