For Quick Alerts
ALLOW NOTIFICATIONS  
For Daily Alerts

ಮಾರ್ಚ್ ನಿಂದ ಈಚೆಗೆ ಇದೇ ಮೊದಲ ಬಾರಿಗೆ ಬ್ಯಾರಲ್ ಪೆಟ್ರೋಲ್ $ 50 ಆಚೆಗೆ

|

ತೈಲ ದರಗಳ ಅಂತರರಾಷ್ಟ್ರೀಯ ಸೂಚ್ಯಂಕವಾದ ಬ್ರೆಂಟ್ ಕಚ್ಚಾ ಸೂಚ್ಯಂಕ ಗುರುವಾರದಂದು $ 1.27 ಅಥವಾ 2.6% ಹೆಚ್ಚಳ ಕಂಡು, ಪ್ರತಿ ಬ್ಯಾರೆಲ್ ಗೆ 50.13ಕ್ಕೆ ಏರಿಕೆ ಕಂಡಿದೆ. ಈ ವರ್ಷದ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಸೂಚ್ಯಂಕವು ಬ್ಯಾರಲ್ ಗೆ $ 50 ದಾಟಿದೆ. ಕೋವಿಡ್ 19 ಲಸಿಕೆ ಬಿಡುಗಡೆಯಿಂದ ನಿರೀಕ್ಷೆಗಿಂತ ವೇಗವಾಗಿ ಬೇಡಿಕೆ ಚೇತರಿಸಿಕೊಳ್ಳಬಹುದು ಎಂಬ ಹಿನ್ನೆಲೆಯಲ್ಲಿ ಯುಎಸ್ ಕಚ್ಚಾ ತೈಲ ದಾಸ್ತಾನು ಭಾರೀ ಏರಿಕೆಯಾಗಿದೆ.

 

ಈಗಾಗಲೇ ಬ್ರಿಟನ್ ನಲ್ಲಿ ಸಾರ್ವಜನಿಕರಿಗೆ ಕೊರೊನಾ ಲಸಿಕೆ ಹಾಕುವುದಕ್ಕೆ ಆರಂಭಿಸಲಾಗಿದೆ. ಈ ವಾರಾಂತ್ಯದ ಹೊತ್ತಿಗೆ ಯುಎಸ್ ನಲ್ಲಿ ಶುರುವಾಗುತ್ತದೆ. ಕೊರೊನಾ ಲಸಿಕೆಯು ಆರ್ಥಿಕತೆಯಲ್ಲಿನ ಸಕಾರಾತ್ಮಕತೆಯನ್ನು ಹೆಚ್ಚಿಸಿದೆ. ಇನ್ನು ಇರಾಕ್ ನಲ್ಲಿನ ತೈಲ ನಿಕ್ಷೇಪಗಳ ಮೇಲೆ ಆಗಿರುವ ದಾಳಿಯಿಂದ ತೈಲ ದರಗಳಲ್ಲಿ ಏರಿಕೆಯಾಗಿದೆ.

 

ಇನ್ನು ಒಂದು ರುಪಾಯಿ ಬೆಲೆ ಏರಿದರೆ ಪೆಟ್ರೋಲ್- ಡೀಸೆಲ್ ಹೊಸ ದಾಖಲೆಇನ್ನು ಒಂದು ರುಪಾಯಿ ಬೆಲೆ ಏರಿದರೆ ಪೆಟ್ರೋಲ್- ಡೀಸೆಲ್ ಹೊಸ ದಾಖಲೆ

ಸಣ್ಣ ಸ್ಥಳದಲ್ಲಿದ್ದ ಎರಡು ತೈಲ ಬಾವಿಗಳು ಬುಧವಾರದಂದು ನಡೆದ ಸ್ಫೋಟದಂದು ಬೆಂಕಿ ಹೊತ್ತಿ ಉರಿದಿವೆ. ಆದರೆ ಒಟ್ಟಾರೆ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮಾರ್ಚ್ ನಿಂದ ಈಚೆಗೆ ಇದೇ ಮೊದಲ ಬಾರಿಗೆ ಬ್ಯಾರಲ್ ಪೆಟ್ರೋಲ್ $ 50 ಆಚೆ

ಕೊರೊನಾ ಪ್ರಕರಣಗಳು ಉತ್ತುಂಗದಲ್ಲಿದ್ದ್ ಈ ವರ್ಷದ ಏಪ್ರಿಲ್ ನಲ್ಲಿ ಬಹುತೇಕ ಪ್ರಮುಖ ಆರ್ಥಿಕತೆಗಳು ಲಾಕ್ ಡೌನ್ ಘೋಷಣೆ ಮಾಡಿದವು. ಆ ವೇಳೆ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿದ್ದ ಅಂತರರಾಷ್ಟ್ರೀಯ ತೈಲ ಬೆಲೆಗಳು ಚೇತರಿಕೆ ಕಂಡಿವೆ.

ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದಲ್ಲಿ ಭಾರತದಲ್ಲಿ ತೈಲ ಬೆಲೆಗಳು ನಿತ್ಯವು ಪರಿಷ್ಕೃತವಾಗುತ್ತವೆ. ಈಚಿನ ಏರಿಕೆಯಿಂದಾಗಿ ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಲೀಟರ್ ಗೆ 83ರಿಂದ 90 ರುಪಾಯಿ ತಲುಪಿದ್ದರೆ, ಡೀಸೆಲ್ 73ರಿಂದ 80 ರುಪಾಯಿ ಮುಟ್ಟಿದೆ.

ಅಂತರರಾಷ್ಟ್ರೀಯ ತೈಲ ದರದಲ್ಲಿ ಚೇತರಿಕೆ ಹೊರತುಪಡಿಸಿದರೂ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ ಪ್ರಮಾಣದಲ್ಲಿ ಭಾರೀ ಏರಿಕೆ ಮತ್ತು ಕೇಂದ್ರ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಿದೆ. ಇದೇ ಕಾರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠಕ್ಕೆ ಸಮೀಪದಲ್ಲಿದೆ.

English summary

Crude Oil Price Crosses 50 USD Mark First Time Since March 2020

International crude oil price crosses $ 50 per barrel first time since March, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X