For Quick Alerts
ALLOW NOTIFICATIONS  
For Daily Alerts

20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ

|

ಈಗಾಗಲೇ ಒಂದು ಕಡೆ ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ತೈಲ ಬೆಲೆಯು 20 ತಿಂಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ.

 

ಸೌದಿ ಅರೇಬಿಯಾದ ಇಂಧನ ದೈತ್ಯ ಅರಾಮ್ಕೊ ಒಡೆತನದ ಸಂಸ್ಕರಣಾ ಕೇಂದ್ರದ ಮೇಲೆ ಕ್ಷಿಪಣಿ ದಾಳಿಯ ನಂತರ ಹಾಗೂ ಕೋವಿಡ್‌-19 ಸಾಂಕ್ರಾಮಿಕಕ್ಕೂ ಮೊದಲು ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ ಬೆಲೆ ತಲುಪಿದೆ.

 
20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ

ಜಾಗತಿಕ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದ್ದಂತೆ ಬೇಡಿಕೆಯ ದೃಷ್ಟಿಕೋನದ ಬಗ್ಗೆ ಆಶಾವಾದದ ನಂತರ ಬ್ರೆಂಟ್ ಕಚ್ಚಾ ತೈಲವು ಸೋಮವಾರ ಎರಡು ಪ್ರತಿಶತಕ್ಕಿಂತ ಹೆಚ್ಚಾಗಿದೆ. ಬ್ಯಾರೆಲ್‌ಗೆ ಶೇಕಡಾ 2.11ರಷ್ಟು ಜಿಗಿದು 70.82 ಅಮೆರಿಕಾ ಡಾಲರ್‌ಗೆ ತಲುಪಿದ್ದು, ಇದು 2019 ರ ಮೇ ನಂತರದ ಗರಿಷ್ಠ ಮೊತ್ತವಾಗಿದೆ.

ಮಾರ್ಚ್‌ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರಮಾರ್ಚ್‌ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ

ಕ್ಷಿಪಣಿ ಮತ್ತು ಡ್ರೋನ್ ದಾಳಿ ಮೂಲಕ ಸೌದಿ ಅರೇಬಿಯಾದ ಪ್ರಮುಖ ತೈಲ ಉದ್ಯಮ ಘಟಕದ ಮೇಲೆ ಬಂಡುಕೋರರ ಡ್ರೋನ್‌ ದಾಳಿ ಹಿನ್ನೆಲೆಯಲ್ಲಿ ಅಮೆರಿಕಾ ಹಾಗೂ ಇರಾನ್ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ವಿಶ್ವದಾದ್ಯಂತ ತೈಲ ಬೆಲೆ ಮೇಲೆ ಭಾರೀ ಪರಿಣಾಮ ಬೀರಿತ್ತು. ದಿನವೊಂದಕ್ಕೆ 70 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲ ಸಂಸ್ಕರಿಸಿ ರಫ್ತು ಮಾಡುವ ಸಾಮರ್ಥ್ಯ ಹೊಂದಿರುವ ಅರಾಮ್ಕೊ ಘಟಕದ ಮೇಲಿನ ದಾಳಿಯಿಂದ ತೈಲ ಮಾರುಕಟ್ಟೆ ತಲ್ಲಣವಾಗಿತ್ತು.

English summary

Crude Oil Prices Rise To 20 Month High After Missile Attack At Saudi

Brent Crude oil surged more than two percent Monday following a missile attack on facilities owned by energy giant Aramco in Saudi Arabia
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X