For Quick Alerts
ALLOW NOTIFICATIONS  
For Daily Alerts

ಮುಂದಿನ ವಾರಗಳಲ್ಲಿ ಕಚ್ಚಾ ತೈಲ ಬೆಲೆ ಮತ್ತಷ್ಟು ಕುಸಿತ: ಶೇಖರಣೆಗೆ ಜಾಗವೇ ಸಿಗ್ತಿಲ್ಲ!

|

ಕೊರೊನಾವೈರಸ್ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಗಳಲ್ಲಿ ಸಾವಿರಾರು ಸಂಖ್ಯೆಗಳನ್ನು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಬಹುತೇಕ ಎಲ್ಲಾ ಅಭಿವೃದ್ಧಿ ರಾಷ್ಟ್ರಗಳು ದಿಕ್ಕೇ ತೋಚದೆ ಕಂಗಾಲಾಗಿದ್ದು ಲಾಕ್‌ಡೌನ್ ಆಗಿವೆ. ಅಗತ್ಯ ವಾಹನಗಳ ಸಂಚಾರಕ್ಕಷ್ಟೇ ಪೆಟ್ರೋಲ್, ಡೀಸೆಲ್ ಬಳಿಕೆಯಾಗ್ತಿದ್ದು, ಇನ್ನುಳಿದಂತೆ ತೈಲವನ್ನು ಕೇಳುವವರೇ ಇಲ್ಲದಂತಾಗಿದೆ.

 

ಈಗಾಗಲೇ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಕುಸಿದಿರುವುದರಿಂದ ತೈಲ ಕಂಪನಿಗಳು ಉತ್ಪಾದನೆಯನ್ನು ತಗ್ಗಿಸಲು ಸಹ ಮುಂದಾಗಿವೆ. ಆದರೆ ಉತ್ಪಾದನೆಯನ್ನು ತಗ್ಗಿಸಿದರೂ ಮುಂದಿನ ವಾರಗಳಲ್ಲಿ ತೈಲ ಬೆಲೆ ಮತ್ತಷ್ಟು ಇಳಿಯುತ್ತದೆ ಎಂದು ಗೋಲ್ಡ್ಮನ್ ಸ್ಯಾಚ್ಸ್ ಭಾನುವಾರ ಹೇಳಿದೆ.

ಉತ್ಪಾದನೆ ತಗ್ಗಿಸಲು ಒಪ್ಪಿಕೊಂಡಿರುವ ರಾಷ್ಟ್ರಗಳು

ಉತ್ಪಾದನೆ ತಗ್ಗಿಸಲು ಒಪ್ಪಿಕೊಂಡಿರುವ ರಾಷ್ಟ್ರಗಳು

ಜಗತ್ತಿನಲ್ಲಿ ತೈಲ ಬೇಡಿಕೆ ಪ್ರಮಾಣವು ಗಮನಾರ್ಹ ಕುಸಿದಿರುವುದರಿಂದ ಈ ಹಿಂದೆ ಒಪೆಕ್ ಹಾಗೂ ರಷ್ಯಾ ತೈಲ ಉತ್ಪಾದನೆ ಕಡಿತಕ್ಕೆ ಮಾತುಕತೆ ನಡೆಸಿ ವಿಫಲವಾಗಿತ್ತು. ಆದರೆ ಇತ್ತೀಚೆಗಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಸ್ಥೆ (ಒಪೆಕ್) ಮತ್ತು ಅದರ ಮಿತ್ರರಾಷ್ಟ್ರಗಳಾದ ಒಪೆಕ್ + ಎಂದು ಕರೆಯಲ್ಪಡುವ ರಾಷ್ಟ್ರಗಳು ರಷ್ಯಾದೊಂದಿಗೆ ಮಾತುಕತೆ ನಡೆಸಿದವು.

ಮೇಲ್ನೋಟಕ್ಕೆ ರಷ್ಯಾ ಕೂಡ ಈ ಮಾತುಕತೆ ಬಳಿಕ ತೈಲ ಉತ್ಪಾದನೆ ತಗ್ಗಿಸುವುದಾಗಿ ಹೇಳಿದೆ. ಬೆಲೆ ಕುಸಿತವನ್ನು ತಡೆಯಲು ಮೇ ಮತ್ತು ಜೂನ್ ತಿಂಗಳಲ್ಲಿ ಉತ್ಪಾದನೆಯನ್ನು ದಿನಕ್ಕೆ 9.7 ಮಿಲಿಯನ್ ಬ್ಯಾರೆಲ್‌ಗಳಷ್ಟು (ಬಿಪಿಡಿ) ಕಡಿಮೆ ಮಾಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದೆ.

 

ಉತ್ಪಾದನೆ ತಗ್ಗಿಸಿದರೂ ಬೆಲೆ ಕುಸಿತ ತಡೆಯಲು ಸಾಧ್ಯವಿಲ್ಲ

ಉತ್ಪಾದನೆ ತಗ್ಗಿಸಿದರೂ ಬೆಲೆ ಕುಸಿತ ತಡೆಯಲು ಸಾಧ್ಯವಿಲ್ಲ

ಬೇಡಿಕೆ ಕಡಿಮೆಯಿಂದಾಗಿ ಉತ್ಪಾದನೆ ತಗ್ಗಿಸಲು ಮುಂದಾಗಿರುವ ತೈಲ ಉತ್ಪಾದಕರೂ ಮುಂದಿನ ವಾರಗಳಲ್ಲಿ ಮತ್ತಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು. ಇದಕ್ಕೆ ಕಾರಣ ಒಪೆಕ್ ಮತ್ತು ಒಪೆಕ್ ಪ್ಲಸ್ ರಾಷ್ಟ್ರಗಳ ರಫ್ತು ಪ್ರಮಾಣ ಕುಸಿಯುವ ಸಾಧ್ಯತೆಯಿದೆ ಮತ್ತು ಶೇಖರಣಾ ಸ್ಥಳಗಳೆಲ್ಲಾ ಭರ್ತಿಯಾಗಲಿವೆ. ಇದರಿಂದಾಗಿ ಬ್ರೆಂಟ್ ಕಚ್ಛಾ ತೈಲ ಪ್ರತಿ ಬ್ಯಾರೆಲ್
20 ಡಾಲರ್‌ಗಿಂತಲೂ ಕೆಳಗಿಳಿಯುವ ಸಾಧ್ಯತೆ ಇದೆ.

ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿತ
 

ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿತ

ವಿಶ್ವದೆಲ್ಲೆಡೆ ತೈಲ ಬೇಡಿಕೆ ಸಾಮಾನ್ಯವಾಗಿತ್ತು. ಆದರೆ ಕೊರೊನಾವೈರಸ್ ಹರಡುವಿಕೆ ಹೆಚ್ಚಾಗುತ್ತಾ ಹೋದಂತೆ ಒಂದೊಂದೇ ರಾಷ್ಟ್ರಗಳು ಲಾಕ್‌ಡೌನ್ ಆದ ಪರಿಸ್ಥಿತಿಗೆ ತಲುಪಿದವು. ಇದರಿಂದಾಗಿ ಅತಿ ಹೆಚ್ಚು ತೈಲ ಆಮದು ರಾಷ್ಟ್ರಗಳಲ್ಲಿ ಬೇಡಿಕೆ ಕುಸಿಯಿತು. ಕಳೆದ ವರ್ಷಕ್ಕಿಂತ ದಿನಕ್ಕೆ 20 ಮಿಲಿಯನ್ ಬ್ಯಾರೆಲ್‌ಗಳಷ್ಟು ಬೇಡಿಕೆ ಕುಸಿದಿದೆ.

ರಷ್ಯಾಗೂ ಕೂಡ ಶೇಖರಣಾ ಸಾಮರ್ಥ್ಯ ಮುಗಿಯುವ ಭೀತಿ

ರಷ್ಯಾಗೂ ಕೂಡ ಶೇಖರಣಾ ಸಾಮರ್ಥ್ಯ ಮುಗಿಯುವ ಭೀತಿ

ವಿಶ್ವದ ಮೂರು ಅತಿದೊಡ್ಡ ತೈಲ ಉತ್ಪಾದಕರಲ್ಲಿ ಒಂದಾದ ರಷ್ಯಾವು ಕೆಲವು ದಿನಗಳಲ್ಲಿ ಲಭ್ಯವಿರುವ ಶೇಖರಣಾ ಸಾಮರ್ಥ್ಯ ಕಡಿಮೆಯಾಗಲಿದೆ ಎಂದು ಐಹೆಚ್ಎಸ್ ಹೇಳಿದೆ. ಒಂದು ವೇಳೆ ರಫ್ತು ಪ್ರಮಾಣವೂ ಬತ್ತಿ ಹೋದರೆ ಈ ಅಂಕಿ ಅಂಶಗಳು ನಿಜವಾಗಬಹುದು. ಇನ್ನು ಸೌದಿ ಅರೇಬಿಯಾ, ಅಮೆರಿಕಾವು ಕೆಲವೇ ದಿನಗಳನ್ನು ಮಾತ್ರ ಹೊಂದಿದೆ ಎನ್ನಲಾಗುತ್ತಿದೆ.

ಆಫ್ರಿಕಾದ ಅತಿದೊಡ್ಡ ಉತ್ಪಾದಕ ನೈಜೀರಿಯಾ, ಐಎಚ್‌ಎಸ್ ಅಳೆಯುವ ಪ್ರದೇಶಗಳಲ್ಲಿ ಹೆಚ್ಚು ದುರ್ಬಲವಾಗಿದೆ. 2020 ರ ಮೊದಲ ತ್ರೈಮಾಸಿಕದಲ್ಲಿ ದಿನಕ್ಕೆ 1.9 ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯು ಇನ್ನೆರಡು ದಿನಗಳಲ್ಲಿ ಲಭ್ಯವಿರುವ ಸ್ಥಳೀಯ ಸಂಗ್ರಹಣೆಯನ್ನು ತುಂಬುತ್ತದೆ ಎಂದು ಹೇಳಲಾಗುತ್ತಿದೆ.

 

ಅಮೆರಿಕಾದಲ್ಲೂ ಸದ್ಯದಲ್ಲೇ ದಾಸ್ತಾನು ತುಂಬುವ ಸಾಧ್ಯತೆ

ಅಮೆರಿಕಾದಲ್ಲೂ ಸದ್ಯದಲ್ಲೇ ದಾಸ್ತಾನು ತುಂಬುವ ಸಾಧ್ಯತೆ

ಸದ್ಯ ಬೇಡಿಕೆ ಕುಸಿತ ಮತ್ತು ಪೂರೈಕೆ ಹೆಚ್ಚಳದಿಂದಾಗಿ ಶೇಖರಣಾ ಸ್ಥಳದ ಸಂಭಾವ್ಯ ಕೊರತೆಯು ಎದುರು ಕಾಣಸಿಗುತ್ತದೆ. ಅಮೆರಿಕಾದಲ್ಲಿ ಡಬ್ಲ್ಯೂಟಿಐ ಕ್ಯಾಶ್ ರೋಲ್ ಎಂದು ಕರೆಯಲ್ಪಡುವ ತೈಲ ದಾಸ್ತಾನು ಮುಂಬರುವ ವಾರಗಳು ಮತ್ತು ತಿಂಗಳಿನಲ್ಲಿ ಬಹುತೇಕ ತುಂಬುವ ಸಾಧ್ಯತೆ ಇದೆ. 2008ರ ಬಳಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ತೈಲ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದ ಮೋರ್ಗನ್ ಸ್ಟ್ಯಾನ್ಲಿ

ತೈಲ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದ ಮೋರ್ಗನ್ ಸ್ಟ್ಯಾನ್ಲಿ

ಮೋರ್ಗನ್ ಸ್ಟಾನ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಕಂಪನಿ ಪ್ರಕಾರ ತನ್ನ ಮೂರನೇ ತ್ರೈಮಾಸಿಕದಲ್ಲಿ ಬ್ರೆಂಟ್ ಮತ್ತು ಡಬ್ಲ್ಯುಟಿಐ ಬೆಲೆ ಮುನ್ಸೂಚನೆಗಳನ್ನು ಬ್ಯಾರೆಲ್‌ಗೆ ಕ್ರಮವಾಗಿ 22.50 ರಿಂದ 27.50 ಹಾಗೂ 30 ಡಾಲರ್‌ಗೆ ಏರಿಸಿದೆ. ಅದೇ ರೀತಿ ತನ್ನ ನಾಲ್ಕನೇ ತ್ರೈಮಾಸಿಕ ದೃಷ್ಟಿಕೋನವನ್ನು ಎರಡೂ ಕಚ್ಚಾ ಮಾನದಂಡಗಳಿಗೆ 5 ಡಾಲರ್ ಏರಿಕೆ ಮಾಡಿದ್ದು, ಬ್ರೆಂಟ್ ಬ್ಯಾರೆಲ್‌ಗೆ 35 ಡಾಲರ್ WTI 32.50 ಡಾಲರ್‌ಗೆ ಏರಿಸಿದೆ.

English summary

Crude Oil Prices To Continue To Fall In Coming Weeks

Goldman Sachs said on Sunday that oil prices would continue to fall in the coming weeks
Story first published: Monday, April 13, 2020, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X