For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ

|

ಜಾರಿ ನಿರ್ದೇಶನಾಲಯ (ಇಡಿ) ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಸಂಬಂಧಿತ 370 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿಕೊಂಡಿದೆ. ಅಕ್ರಮ ಸಾಲದ ಆಪ್‌ಗಳ ಹೆಸರಲ್ಲಿ ಮನಿ ಲಾಂಡರಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಯಾರ ಹೆಸರನ್ನು ಕೂಡಾ ಬಹಿರಂಗಪಡಿಸಿಲ್ಲ.

ಕ್ರಿಪ್ಟೋ ವಹಿವಾಟಿಗೆ ಸಂದಂಧಿಸಿದ ಬ್ಯಾಂಕ್ ಖಾತೆಯನ್ನು ಈ ತಿಂಗಳಲ್ಲಿ ಎರಡನೇ ಬಾರಿಗೆ ಇಡಿ ಜಪ್ತಿ ಮಾಡಿದೆ. ಕಳೆದ ವಾರ ಈ ಬಗ್ಗೆ ಇಡಿ ಪತ್ರಿಕಾ ಹೇಳಿಕೆಯನ್ನು ನೀಡಿತ್ತು. ಖ್ಯಾತ ಕ್ರಿಪ್ಟೋ ಎಕ್ಸ್‌ಚೇಂಜ್ WazirX ನ ಮಾಲೀಕತ್ವ ಹೊಂದಿರುವ ಝಾನ್‌ಮೈ ಲಾಬ್ಸ್ ನಿರ್ದೇಶಕರ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಿತ್ತು. 64.67 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ ಎಂದು ಕೂಡಾ ಮಾಹಿತಿ ನೀಡಿತ್ತು.

ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟುಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು

ಸಾಲ ನೀಡುವ ಆಪ್‌ಗಳ ಮೂಲಕ ಕ್ರಿಪ್ಟೊ ವಹಿವಾಟು ನಡೆಸುತ್ತಿರುವ ಆರೋಪವಿದೆ. ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಲಾಂಡರಿಂಗ್ ನಡೆದಿದೆ ಎಂಬ ಆರೋಪವಿದೆ. 100 ಕೋಟಿ ರೂಪಾಯಿಗಿಂತ ಅಧಿಕ ಮೊತ್ತಕ್ಕೆ ಕ್ರಿಪ್ಟೋ ಖರೀದಿ ಮಾಡಲು ಸಂಸ್ಥೆಯು ಸಂಪರ್ಕ ಮಾಡುತ್ತಿದೆ ಎಂದು ದೂರಲಾಗಿದೆ. ಇನ್ನು ಈ ಕಾಯಿನ್‌ಗಳನ್ನು ಅಂತಾರಾಷ್ಟ್ರೀಯ ವಾಲೆಟ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕ್ರಿಪ್ಟೋ ವಹಿವಾಟು:  370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ

WazirX ಹೇಳುವುದು ಏನು?

ಈ ನಡುವೆ WazirX ಇದು ಕೆವೈಸಿ ನಿಯಮ ಸಂಬಂಧಿತ ದೂರು ಹೊಂದಿದೆ. ಆದರೆ ಯಾವುದೇ ಅಕ್ರಮ ಚಟುವಟಿಕೆಯನ್ನು ನಾವು ಸಹಿಸುವುದಿಲ್ಲ ಎಂದು WazirX ವಕ್ತಾರರು ಹೇಳಿದ್ದಾರೆ.

ಈ ನಡುವೆ ಆಪ್‌ ಮೂಲಕ ಸಾಲ ನೀಡುವ ಸಂಸ್ಥೆಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ಸುಮಾರು ಶೇಕಡ 50ರಷ್ಟು ಇಂತಹ ಪ್ರಕರಣಗಳಲ್ಲಿ ದಿಡೀರ್ ಆಗಿ ಮಾಲೀಕತ್ವವನ್ನು ಭಾರತೀಯರಿಗೆ ಚೀನಾದವರಿಗೆ ಹಸ್ತಾಂತರ ಮಾಡಲಾಗಿದೆ. ಅಥವಾ ಚೀನಾದ ಸಂಸ್ಥೆಯಿಂದ ಫಂಡಿಂಗ್ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2021ರಲ್ಲಿ ಶೇಕಡ 7ರಷ್ಟು ಭಾರತೀಯರಲ್ಲಿತ್ತು ಕ್ರಿಪ್ಟೋಕರೆನ್ಸಿ

2021ರಲ್ಲಿ ಶೇಕಡ 7ರಷ್ಟು ಭಾರತೀಯರಲ್ಲಿ ಕ್ರಿಪ್ಟೋಕರೆನ್ಸಿ ಇತ್ತು ಎಂದು ಯುಎನ್‌ ಹೇಳಿದೆ. ಟಾಪ್ 20 ದೇಶಗಳ ಪೈಕಿ ಉಕ್ರೇನ್ ಮೊದಲ ಸ್ಥಾನದಲ್ಲಿ ಇದೆ. ಉಕ್ರೇನ್‌ನಲ್ಲಿ ಶೇಕಡ 12.7ರಷ್ಟು ಜನರು ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ. ಉಕ್ರೇನ್‌ನ ನಂತರದ ಸ್ಥಾನದಲ್ಲಿ ರಷ್ಯಾ ಇದ್ದು, ಇಲ್ಲಿ ಶೇಕಡ 11.9 ಮಂದಿ ಕ್ರಿಪ್ಟೋಕರೆನ್ಸಿಯನ್ನು ಹೊಂದಿದ್ದಾರೆ.
ಆರನೇ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಇದ್ದರೆ, ಭಾರತ ಏಳನೇ ಸ್ಥಾನದಲ್ಲಿದೆ. ಭಾರತದ ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾ ಇದೆ. ಪಾಕಿಸ್ತಾನದಲ್ಲಿ ಶೇಕಡ 4.1 ಮಂದಿ ಕ್ರಿಪ್ಟೋ ಬಳಕೆ ಮಾಡುತ್ತಿದ್ದಾರೆ.

English summary

Crypto Exchange: ED Freezes Rs 370 Crore in Bank Accounts

The Enforcement Directorate (ED) has frozen ₹370 crore in the bank accounts of a cryptocurrency exchange.
Story first published: Friday, August 12, 2022, 18:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X