For Quick Alerts
ALLOW NOTIFICATIONS  
For Daily Alerts

ಕುಸಿದಿದ್ದ ಕ್ರಿಪ್ಟೋಕರೆನ್ಸಿಗಳ ಬೆಲೆ ಜಿಗಿತ: ಸೆ. 23ರ ಬೆಲೆ ಹೀಗಿದೆ

|

ಬಿಟ್‌ಕಾಯಿನ್ ಸೇರಿದಂತೆ ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಸತತ ಕುಸಿತದ ಬಳಿಕ ಗುರುವಾರ ಚೇತರಿಕೆ ಕಂಡಿದೆ. ಸೆಪ್ಟೆಂಬರ್ 23ರಂದು ಬಿಟ್‌ಕಾಯಿನ್ ಶೇಕಡಾ 4.45ರಷ್ಟು ಏರಿಕೆಗೊಂಡು 44,041.40 ಅಮೆರಿಕನ್ ಡಾಲರ್ ತಲುಪಿದೆ.

ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗಳ ನಿಯಂತ್ರಣ ಹೇರಿದ್ದರೂ ಸಹ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆ ಏರುತ್ತಲೇ ಸಾಗಿದೆ. ಭಾರತದಲ್ಲಿಯೂ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಹೆಚ್ಚಾಗಿದೆ.

ಹಾಗಿದ್ದರೆ ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಡೋಜ್‌ಕಾಯಿನ್ ಕ್ರಿಪ್ಟೋ ಕರೆನ್ಸಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಮತ್ತು ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಇತ್ತೀಚಿನ ದರ ಎಷ್ಟಿದೆ ಎಂಬುದರ ಮಾಹಿತಿ ತಿಳಿಯಲು ಈ ಕೆಳಗೆ ಓದಿ.

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ

ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಪ್ರಸ್ತುತ 44,041.40 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಶೇಕಡಾ 4.45ರಷ್ಟು ಏರಿಕೆಗೊಂಡಿದ್ದು, ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 798.16 ಬಿಲಿಯನ್ ಡಾಲರ್‌ನಷ್ಟಿದೆ.

ಕಳೆದ 24 ಗಂಟೆಗಳಲ್ಲಿ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 44,176.50 ಡಾಲರ್ ಮತ್ತು ಕಡಿಮೆ ಬೆಲೆ 41,837.47 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 50.74 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 64,888.99 ಡಾಲರ್ ಆಗಿದೆ.

 

ಏನಿದು ಬಿಟ್‌ಕಾಯಿನ್‌?

ಏನಿದು ಬಿಟ್‌ಕಾಯಿನ್‌?

ಬಿಟ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ

ಎಥೆರಿಯಮ್ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 3,113.19 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 8.45ರಷ್ಟು ಹೆಚ್ಚಾಗಿದ್ದು, ಈ ಮೂಲಕ ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 365.10 ಬಿಲಿಯನ್ ಡಾಲರ್ ಆಗಿದೆ.

ಕಳೆದ 24 ಗಂಟೆಗಳಲ್ಲಿ, ಎಥೆರಿಯಮ್ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 3,124.76 ಡಾಲರ್ ಮತ್ತು ಕಡಿಮೆ ಬೆಲೆ 2,835.49 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಎಥೆರಿಯಮ್ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 316.72 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಥೆರಿಯಮ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 4,379.11 ಡಾಲರ್‌ನಷ್ಟಿದೆ.

 

ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ

ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ

ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 1.01 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 9.86ರಷ್ಟು ಏರಿಕೆಗೊಂಡಿದ್ದು, ಈ ಮೂಲಕ ಎಕ್ಸ್‌ಆರ್‌ಪಿ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 100.81 ಬಿಲಿಯನ್ ಡಾಲರ್‌ ಆಗಿದೆ.

ಕಳೆದ 24 ಗಂಟೆಗಳಲ್ಲಿ, ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಗರಿಷ್ಠ ಬೆಲೆ 1.02 ಡಾಲರ್ ಮತ್ತು ಕನಿಷ್ಠ ಬೆಲೆ 0.96 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, XRP ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 350.36 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಎಕ್ಸ್‌ಆರ್‌ಪಿ ಕ್ರಿಪ್ಟೋ ಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.40 ಡಾಲರ್‌ನಷ್ಟಿದೆ.

 

ಡೋಜ್‌ಕಾಯಿನ್‌

ಡೋಜ್‌ಕಾಯಿನ್‌

ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ಪ್ರಸ್ತುತ 0.224366 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 10.09ರಷ್ಟು ಏರಿಕೆಗೊಂಡಿದ್ದು, ಈ ಮೂಲಕ ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 29.46 ಬಿಲಿಯನ್ ಡಾಲರ್ ಆಗಿದೆ.

ಕಳೆದ 24 ಗಂಟೆಗಳಲ್ಲಿ, ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 0.23ಡಾಲರ್ ಮತ್ತು ಕಡಿಮೆ ಬೆಲೆ 0.20 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 4,627.82 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಡೋಜ್‌ಕಾಯಿನ್‌ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 0.740796 ಡಾಲರ್‌ನಷ್ಟಿದೆ.

 

ಕಾರ್ಡಾನೊ

ಕಾರ್ಡಾನೊ

ಕಾರ್ಡಾನೊ ಕ್ರಿಪ್ಟೋಕರೆನ್ಸಿ ಪ್ರಸ್ತುತ 2.28 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 0.56 ರಷ್ಟು ಇಳಿಕೆಗೊಂಡಿದ್ದು, ಈ ಮೂಲಕ ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 67.80 ಬಿಲಿಯನ್ ಡಾಲರ್ ಆಗಿದೆ.

ಕಳೆದ 24 ಗಂಟೆಗಳಲ್ಲಿ, ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಗರಿಷ್ಠ ಬೆಲೆ 2.29 ಡಾಲರ್ ಮತ್ತು ಕಡಿಮೆ ಬೆಲೆ 2.02 ಡಾಲರ್ ಆಗಿತ್ತು. ಆದಾಯಕ್ಕೆ ಸಂಬಂಧಿಸಿದಂತೆ, ಕಾರ್ಡಾನೊ ಕ್ರಿಪ್ಟೋಕರೆನ್ಸಿ ಕಳೆದ ಒಂದು ವರ್ಷದಲ್ಲಿ 1231.85 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಕಾರ್ಡಾನೊ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 3.10 ಡಾಲರ್ ಆಗಿದೆ.

 

ಸ್ಟೆಲ್ಲರ್ XLM

ಸ್ಟೆಲ್ಲರ್ XLM

ಸ್ಟೆಲ್ಲರ್ ‍XLM ಪ್ರಸ್ತುತ 0.294318 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 8.59ರಷ್ಟು ಇಳಿಕೆಗೊಂಡಿದ್ದು, ಈ ಮೂಲಕ ಸ್ಟೆಲ್ಲರ್ XLM ಮಾರುಕಟ್ಟೆ ಕ್ಯಾಪ್ 31.03 ಬಿಲಿಯನ್ ಡಾಲರ್‌ನಷ್ಟು ಆಗಿದೆ.

ಕಳೆದ 24 ಗಂಟೆಗಳಲ್ಲಿ, ಸ್ಟೆಲ್ಲರ್ XLM ಗರಿಷ್ಠ ಬೆಲೆ 0.30 ಡಾಲರ್ ಆಗಿದ್ದು, ಕಡಿಮೆ ಬೆಲೆ 0.27 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಸ್ಟೆಲ್ಲರ್ XLM ಕಳೆದ ಒಂದು ವರ್ಷದಲ್ಲಿ ಶೇಕಡಾ 130.19 ರಷ್ಟು ರಿಟರ್ನ್‌ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 0.797482 ಆಗಿದೆ.

 

ಲೈಟ್‌ಕಾಯಿನ್ LTC

ಲೈಟ್‌ಕಾಯಿನ್ LTC

ಲೈಟ್‌ಕಾಯಿನ್ LTC ಪ್ರಸ್ತುತ 160.76 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 6.02 ರಷ್ಟು ಇಳಿಕೆಗೊಂಡಿದ್ದು, ಈ ಮೂಲಕ ಲೈಟ್‌ಕಾಯಿನ್ LTC ಮಾರುಕಟ್ಟೆ ಕ್ಯಾಪ್‌ 11.03 ಬಿಲಿಯನ್ ಡಾಲರ್‌ನಷ್ಟಿದೆ.

ಕಳೆದ 24 ಗಂಟೆಗಳಲ್ಲಿ, ಲೈಟ್‌ಕಾಯಿನ್ LTC ಗರಿಷ್ಠ ಬೆಲೆ 162.17 ಡಾಲರ್ ಮತ್ತು ಕಡಿಮೆ ಬೆಲೆ 150.03 ಡಾಲರ್ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಲೈಟ್‌ಕಾಯಿನ್ ಕಳೆದ ಒಂದು ವರ್ಷದಲ್ಲಿ ಶೇಕಡಾ 28.38ರಷ್ಟು ರಿಟರ್ನ್ ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 413.47 ಡಾಲರ್ ಆಗಿದೆ.

 

ಬಿಟ್‌ಕಾಯಿನ್ ಕ್ಯಾಶ್

ಬಿಟ್‌ಕಾಯಿನ್ ಕ್ಯಾಶ್

ಬಿಟ್‌ಕಾಯಿನ್ ಕ್ಯಾಶ್ ಪ್ರಸ್ತುತ 546.40 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ ಶೇಕಡಾ 5.74 ರಷ್ಟು ಕುಸಿದಿದ್ದು, ಈ ಮೂಲಕ ಬಿಟ್‌ಕಾಯಿನ್ ಕ್ಯಾಶ್ ಮಾರುಕಟ್ಟೆ ಕ್ಯಾಪ್‌ 10.30 ಬಿಲಿಯನ್ ಡಾಲರ್‌ಗೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಬಿಟ್‌ಕಾಯಿನ್ ಕ್ಯಾಶ್‌ ಗರಿಷ್ಠ ಬೆಲೆ 549.38 ಡಾಲರ್ ಮತ್ತು ಕಡಿಮೆ ಬೆಲೆ 511.94 ಡಾಲರ್‌ ಆಗಿದೆ. ಆದಾಯಕ್ಕೆ ಸಂಬಂಧಿಸಿದಂತೆ ಬಿಟ್‌ಕಾಯಿನ್ ಕ್ಯಾಶ್ ಕಳೆದ ಒಂದು ವರ್ಷದಲ್ಲಿ 59.21 ರಷ್ಟು ಲಾಭವನ್ನು ನೀಡಿದ್ದು, ಇದರ ಸಾರ್ವಕಾಲಿಕ ಹೆಚ್ಚಿನ ಬೆಲೆ 1,836.63 ಡಾಲರ್ ಆಗಿದೆ.

 

ಚೈನ್‌ಲಿಂಕ್

ಚೈನ್‌ಲಿಂಕ್

ಚೈನ್‌ಲಿಂಕ್ ಪ್ರಸ್ತುತ 24.35 ಡಾಲರ್‌ನಷ್ಟು ವಹಿವಾಟು ನಡೆಸುತ್ತಿದ್ದು, ಶೇಕಡಾ 9.63 ಡಾಲರ್‌ನಷ್ಟು ಕುಸಿದಿದ್ದು, ಈ ಮೂಲಕ ಚೈನ್‌ಲಿಂಕ್ ಮಾರುಕಟ್ಟೆ ಕ್ಯಾಪ್ 24.35 ಬಿಲಿಯನ್ ಡಾಲರ್‌ನಷ್ಟಿದೆ.

ಕಳೆದ 24 ಗಂಟೆಗಳಲ್ಲಿ ಚೈನ್‌ಲಿಂಕ್ ಗರಿಷ್ಠ ಬೆಲೆ 24.67 ಬಿಲಿಯನ್ ಡಾಲರ್ ಮತ್ತು ಕಡಿಮೆ ಬೆಲೆ 21.92 ಡಾಲರ್ ಆಗಿದೆ. ಚೈನ್‌ಲಿಂಕ್ ಸಾರ್ವಕಾಲಿಕ ಹೆಚ್ಚಿನ ಬೆಲೆ 52.98 ಡಾಲರ್‌ ಆಗಿದೆ.

 

English summary

Cryptocurrency Prices Today (23 September 2021): Bitcoin, Dogecoin, XRP and Ethereum Latest Rate Here

Cryptocurrency Prices Today (23 September 2021): Check out the Bitcoin, Dogecoin, Xrp and Ethereum Latest Rate Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X