For Quick Alerts
ALLOW NOTIFICATIONS  
For Daily Alerts

ಸಿಎಸ್ ಬಿ ಬ್ಯಾಂಕ್ ಐಪಿಒಗೆ 86.92 ಪಟ್ಟು ಹೆಚ್ಚು ಬೇಡಿಕೆ

|

ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ (ಸಿಎಸ್ ಬಿ) ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ)ಗೆ ಅದ್ಭುತವಾದ ಸ್ಪಂದನೆ ಸಿಕ್ಕಿದೆ. ಐಪಿಒ ಕೊನೆಯಾದ ಮಂಗಳವಾರಕ್ಕೆ ಎಲ್ಲ ವರ್ಗದ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, 86.92 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ರೀಟೇಲ್ ಹೂಡಿಕೆದಾರರಿಂದ 43 ಪಟ್ಟು ಹೆಚ್ಚು ಬೇಡಿಕೆ ಬಂದಿದೆ.

ಅಂದ ಹಾಗೆ, ರೀಟೇಲ್ ಹೂಡಿಕೆದಾರರಿಂದ 9,27,59,250 ಷೇರುಗಳಿಗೆ ಬೇಡಿಕೆ ಬಂದಿದ್ದು, ಮೀಸಲಿಟ್ಟಿರುವ ಷೇರಿನ ಪ್ರಮಾಣ 21,00,906 ಮಾತ್ರ. ಸಾಂಸ್ಥಿಕೇತರ ಹೂಡಿಕೆದಾರರಿಂದ 164.68 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. ಆ ವರ್ಗಕ್ಕೆ ಮೀಸಲಿರಿಸಿದ್ದು 31,51,360 ಷೇರುಗಳು ಮಾತ್ರ. ಆದರೆ ಬೇಡಿಕೆ ಬಂದಿರುವುದು 51,89,72,475 ಷೇರುಗಳಿಗೆ.

ಈ ಮಧ್ಯೆ ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ (ಕ್ಯೂಐಬಿ) 62.18 ಪಟ್ಟು ಹೆಚ್ಚು ಷೇರುಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಆ ವರ್ಗಕ್ಕೆ 1,15,54,987 ಷೇರುಗಳನ್ನು ಮೀಸಲಿರಿಸಿದ್ದರೆ, 100,43,98,500 ಷೇರುಗಳಿಗೆ ಬೇಡಿಕೆ ಬಂದಿದೆ.

ಸಿಎಸ್ ಬಿ ಬ್ಯಾಂಕ್ ಐಪಿಒಗೆ 86.92 ಪಟ್ಟು ಹೆಚ್ಚು ಬೇಡಿಕೆ

ಸಿಎಸ್ ಬಿ ಬ್ಯಾಂಕ್ ಕೇಂದ್ರ ಕಚೇರಿ ಕೇರಳದಲ್ಲಿದೆ. ಇದು ಭಾರತದ ಹಳೆಯ ಬ್ಯಾಂಕ್ ಗಳಲ್ಲಿ ಒಂದು. 193ರಿಂದ 195 ರುಪಾಯಿ ದರವನ್ನು ಷೇರಿಗೆ ನಿಗದಿ ಮಾಡಲಾಗಿತ್ತು. ಅಂದ ಹಾಗೆ ಸಿಎಸ್ ಬಿ ಬ್ಯಾಂಕ್ ಗೆ 16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ 412 ಶಾಖೆಗಳಿವೆ. 3001 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ ಸಿಎಸ್ ಬಿ ಬ್ಯಾಂಕ್ ಶಾಖೆಗಳಿವೆ.

English summary

CSB Bank IPO Subscribed 86 Times

Kerala based CSB Bank subscribed 86.92 times on Tuesday. Here is the complete details of the story.
Story first published: Wednesday, November 27, 2019, 17:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X