For Quick Alerts
ALLOW NOTIFICATIONS  
For Daily Alerts

ಎಸ್ ಬಿಐ ಆನ್ ಲೈನ್ ವ್ಯವಹಾರದ ಸಮಸ್ಯೆ ಬಗ್ಗೆ ಗ್ರಾಹಕರಿಂದ ದೂರು

|

ಆನ್ ಲೈನ್ ವ್ಯವಹಾರಗಳು ವಿಫಲವಾಗುತ್ತಿವೆ ಎಂದು ಸಾರ್ವಜನಿಕ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಬುಧವಾರ ದೂರು ನೀಡಿದ್ದಾರೆ. ಕೆಲವು ಗ್ರಾಹಕರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಎಸ್ ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ. ಇದರಲ್ಲಿ "ಏನೋ ತಪ್ಪಾಗಿದೆ" ಎಂಬ ಸಂದೇಶ ಬರುತ್ತಿದೆ ಎಂದು ತಿಳಿಸಿದ್ದಾರೆ.

ಮಂಗಳವಾರದಿಂದಲೇ ಬ್ಯಾಂಕ್ ನ ಗ್ರಾಹಕರು ಈ ತಾಂತ್ರಿಕ ಸಮಸ್ಯೆ ಬಗ್ಗೆ ದೂರು ನೀಡುತ್ತಾ ಬಂದಿದ್ದರು. ಆದರೆ ಈಗಲೂ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕರಿಂದ ಐದು ಬಾರಿ ಪ್ರಯತ್ನ ಮಾಡಿದರೂ ಆನ್ ಲೈನ್ ಮೂಲಕ ಹಣ ಕಳುಹಿಸುವುದಕ್ಕೆ ಸಾಧ್ಯ ಆಗುತ್ತಿಲ್ಲ ಎಂದು ಗ್ರಾಹಕರೊಬ್ಬರು ದೂರು ಹೇಳಿಕೊಂಡಿದ್ದಾರೆ.

SBI ಲಾಕರ್ ಬಾಡಿಗೆ ಶುಲ್ಕ ಮತ್ತಿತರ ಮಾಹಿತಿSBI ಲಾಕರ್ ಬಾಡಿಗೆ ಶುಲ್ಕ ಮತ್ತಿತರ ಮಾಹಿತಿ

ಅದೇ ರೀತಿ ಇತರ ಬ್ಯಾಂಕ್ ಗಳ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹಣವನ್ನು ಆನ್ ಲೈನ್ ಮೂಲಕ ಕಳುಹಿಸುವುದು ಸಾಧ್ಯವಾಗುತ್ತಿಲ್ಲ. ಆನ್ ಲೈನ್ ಸೇವೆಯಲ್ಲಿ ಏನಾದರೂ ಸಮಸ್ಯೆ ಆಗಿದೆಯಾ ಎಂಬ ಬಗ್ಗೆ ಎಸ್ ಬಿಐನಿಂದಲೇ ಸ್ಪಷ್ಟತೆ ನೀಡಬೇಕಿದೆ.

ಎಸ್ ಬಿಐ ಆನ್ ಲೈನ್ ವ್ಯವಹಾರದ ಸಮಸ್ಯೆ ಬಗ್ಗೆ ಗ್ರಾಹಕರಿಂದ ದೂರು

ಎಸ್ ಬಿಐನ ಹಲವು ಗ್ರಾಹಕರು ಹೇಳುವ ಪ್ರಕಾರ, ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಯೋನೋದಲ್ಲಿ "M005" ಎಂಬ ಸಂದೇಶ ಬರುತ್ತಿದ್ದು, ಆನ್ ಲೈನ್ ವ್ಯವಹಾರ ಮಾಡಲು ಕಷ್ಟವಾಗುತ್ತಿದೆ. ಗ್ರಾಹಕರೊಬ್ಬರು, ನಾನು ನೋಡಿದ್ದರಲ್ಲೇ ಯೋನೋ ಅತ್ಯಂತ ಕೆಟ್ಟ ಅಪ್ಲಿಕೇಷನ್. ನೀವೇಕೆ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಪ್ರಶ್ನೆ ಮಾಡಿದ್ದಾರೆ.

ಒಂದು ವಾರದ ಹಿಂದೆ, ನವೆಂಬರ್ 22ರಂದು ಬ್ಯಾಂಕ್ ತಾಂತ್ರಿಕ ಸಮಸ್ಯೆ ಎದುರಿಸಿ, ಆನ್ ಲೈನ್ ವ್ಯವಹಾರಕ್ಕೆ ತೊಂದರೆ ಆಗಿತ್ತು. "ಅಡಚಣೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಸರ್ವರ್ ಸಮಸ್ಯೆಯಿಂದ ಹೀಗಾಗಿದೆ. ದಯವಿಟ್ಟು ನಮ್ಮ ಜತೆ ಸಹಕರಿಸಿ. ನಮ್ಮ ತಂಡವು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವ ಕೆಲಸದಲ್ಲಿದೆ. ಈ ಮಧ್ಯೆ, ನಮ್ಮ ಇತರ ಡಿಜಿಟಲ್ ಚಾನೆಲ್ ಗಳನ್ನು ಬಳಸುವಂತೆ ಸಲಹೆ ಮಾಡುತ್ತೇವೆ," ಎಂದು ಎಸ್ ಬಿಐ ಹೇಳಿದೆ.

English summary

Customers complain after SBI online transactions fail, Yono app shows error

India's largest bank State Bank Of India's customers complain about online transaction issue and YONO app error message.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X