For Quick Alerts
ALLOW NOTIFICATIONS  
For Daily Alerts

ಮಾರ್ಚ್‌ 1ರಿಂದ ಸಿಗಲ್ಲ 2,000 ರುಪಾಯಿ ನೋಟು

|

ಎದುರಾಗುತ್ತಿರುವ ಚಿಲ್ಲರೆ ಸಮಸ್ಯೆಯನ್ನು ತಗ್ಗಿಸಲು 2000 ರೂಪಾಯಿ ನೋಟುಗಳನ್ನು ಎಟಿಎಂ ಗಳಲ್ಲಿ ವಿತರಿಸುವುದನ್ನು ಮಾರ್ಚ್ 1 ರಿಂದ ಸ್ಥಗಿತಗೊಳಿಸುವುದಾಗಿ ಇಂಡಿಯನ್ ಬ್ಯಾಂಕ್ ಹೇಳಿದೆ.

ಎಟಿಎಂ ಗಳಲ್ಲಿ 2000 ನೋಟುಗಳನ್ನು ಪಡೆಯುವ ಗ್ರಾಹಕರು, ಚಿಲ್ಲರೆ ಪಡೆಯಲು ಬ್ಯಾಂಕ್ ಗೆ ಬರುತ್ತಾರೆ. ಇದನ್ನು ತಡೆಯುವುದಕ್ಕಾಗಿ ಎಟಿಎಂ ಗಳಲ್ಲಿ ಮಾರ್ಚ್ 1 ರಿಂದ 2000 ರೂಪಾಯಿ ನೋಟಿನ ಬದಲು 200 ರೂಪಾಯಿ ನೋಟುಗಳನ್ನು ಹೆಚ್ಚು ವಿತರಣೆ ಮಾಡಲಾಗುತ್ತದೆ ಎಂದು ಇಂಡಿಯನ್ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರ್ಚ್‌ 1ರಿಂದ ಸಿಗಲ್ಲ 2,000 ರುಪಾಯಿ ನೋಟು

ಇಂಡಿಯನ್ ಬ್ಯಾಂಕ್ ಜೊತೆ ಅಲ್ಲಾಹಾಬಾದ್ ಬ್ಯಾಂಕ್ ಸಹ ವಿಲೀನಗೊಳ್ಳಲಿದ್ದು, ಆ ಬ್ಯಾಂಕ್ ನ ಎಟಿಎಂ ನಲ್ಲಿಯೂ ಸಹ 2000 ರೂ ನೋಟು ವಿತರಣೆ ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬ್ಯಾಂಕ್ ಅಧಿಕಾರಿಗಳು ವಿಲೀನ ಪ್ರಕ್ರಿಯೆ ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಇಂಡಿಯನ್ ಬ್ಯಾಂಕ್ ನ ನಡೆಯನ್ನು ಬೇರೆ ಯಾವ ಸರ್ಕಾರಿ ಸ್ವಾಮ್ಯ ಅಥವಾ ಖಾಸಗಿ ಬ್ಯಾಂಕ್ ಗಳು ಪಾಲಿಸುತ್ತಿಲ್ಲ.

English summary

Customers Will Not Get Rs 2000 Notes From March 1

According to the Indian Bank the 2,000 currency notes left in ATMs after March 1 will be taken out.
Story first published: Sunday, February 23, 2020, 10:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X