For Quick Alerts
ALLOW NOTIFICATIONS  
For Daily Alerts

ಬಾದ್‌ಶಾ ಮಸಾಲ ಖರೀದಿಸಲಿರುವ ಡಾಬರ್

|

ನವದೆಹಲಿ, ಅ. 7: ಡಾಬರ್ ಕಂಪನಿ ಈಗ ಬ್ರಾಂಡೆಡ್ ಮಸಾಲ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದೆ. ಬಾದ್‌ಶಾ ಮಸಾಲ ಕಂಪನಿಯ ಶೇ. 51ರಷ್ಟು ಷೇರುಗಳನ್ನು ತಾನು ಖರೀದಿಸುತ್ತಿರುವುದಾಗಿ ಡಾಬರ್ ಸಂಸ್ಥೆ ನಿನ್ನೆ ಬುಧವಾರ ತಿಳಿಸಿದೆ. 587.5 ಕೋಟಿ ರೂಪಾಯಿಗೆ ಈ ಡೀಲ್ ನಡೆಯಲಿದೆ. ಕಂಪನಿ ನಿನ್ನೆ ನೀಡಿದ ಹೇಳಿಕೆ ಪ್ರಕಾರ 2023 ಮಾರ್ಚ್ 31ರೊಳಗೆ ಈ ಖರೀದಿ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇನ್ನುಳಿದ ಷೇರುಗಳನ್ನು ಐದು ವರ್ಷಗಳ ನಂತರ ಡಾಬರ್ ಖರೀದಿಸಲಿದೆ.

"ಡಾಬರ್ ಇಂಡಿಯಾ ಸಂಸ್ಥೆ ಬಾದ್‌ಸಾ ಮಸಾಲ ಪ್ರೈ ಲಿ ಕಂಪನಿಯ ಶೇ. 51ರಷ್ಟು ಈಕ್ವಿಟಿ ಷೇರುಗಳನ್ನು ಖರೀದಿಸಲು ಆ ಕಂಪನಿಯ ಪ್ರೊಮೋಟರ್ಸ್ ಮತ್ತು ಷೇರುದಾರರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನುಳಿದ ಶೇ. 49ರಷ್ಟು ಷೇರುಗಳನ್ನು ಐದು ವರ್ಷದ ಅವಧಿ ಬಳಿಕ ಖರೀದಿಸಲಾಗುವುದು" ಎಂದು ಡಾಬರ್ ಕಂಪನಿ ಹೇಳಿಕೆ ನೀಡಿದೆ.

ಮೆಟಾವರ್ಸ್‌ಗೆ ಎಂಟ್ರಿ ನೀಡಿದ ಮುಕೇಶ್ ಅಂಬಾನಿ ಸಂಸ್ಥೆಮೆಟಾವರ್ಸ್‌ಗೆ ಎಂಟ್ರಿ ನೀಡಿದ ಮುಕೇಶ್ ಅಂಬಾನಿ ಸಂಸ್ಥೆ

70 ಸಾವಿರ ಕೋಟಿ ರೂ ಮಾರುಕಟ್ಟೆ

ಡಾಬರ್ ಕಂಪನಿ ಈಗಾಗಲೇ ಮಸಾಲ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಆದರೆ, ಬಾದ್‌ಶಾ ಮಸಲಾ ಖರೀದಿ ಮೂಲಕ ಬ್ರಾಂಡೆಡ್ ಮಸಾಲ ಕ್ಷೇತ್ರಕ್ಕೆ ಅಡಿ ಇಡಲು ಸಾಧ್ಯವಾಗುತ್ತದೆ. ಒಂದು ವರದಿ ಪ್ರಕಾರ ಭಾರತದಲ್ಲಿ ಮಸಾಲಾ ಪದಾರ್ಥಗಳ ಮಾರುಕಟ್ಟೆ 70 ಸಾವಿರ ಕೋಟಿ ರೂಪಾಯಿಯಷ್ಟಿದೆ. ಇದರಲ್ಲಿ ಬ್ರಾಂಡೆಡ್ ಮಸಾಲ ಪದಾರ್ಥಗಳ ಪಾಲು ಶೇ. 35ರಷ್ಟಿದೆ. ಅಂದರೆ ಸುಮಾರು 25 ಸಾವಿರ ಕೋಟಿ ರೂಪಾಯಿಯಷ್ಟಿರುವ ಈ ಬ್ರಾಂಡೆಡ್ ಸ್ಪೈಸಸ್‌ನ ಮಾರುಕಟ್ಟೆ 2025ರಷ್ಟರಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಅವೆಂಡಸ್ ಕ್ಯಾಪಿಟಲ್ ಎಂಬ ಹೂಡಿಕೆ ಸಂಸ್ಥೆ ಪ್ರಕಾರ 2030ರಷ್ಟರಲ್ಲಿ ಸ್ಪೈಸ್ ಮಾರುಕಟ್ಟೆ ಗಣನೀಯವಾಗಿ ವಿಸ್ತಾರವಾಗಲಿದೆ.

ಬಾದ್‌ಶಾ ಮಸಾಲ ಖರೀದಿಸಲಿರುವ ಡಾಬರ್

ಎಫ್‌ಎಂಸಿಜಿಗಳ ಚಿತ್ತ

ಸ್ಪೈಸಸ್ ಅಥವಾ ಮಸಾಲ ಮಾರುಕಟ್ಟೆಗೆ ದೊಡ್ಡ ದೊಡ್ಡ ಕಂಪನಿಗಳು ಇದೂವರೆಗೆ ಹೆಚ್ಚು ಗಮನ ಹರಿಸಲು ಹೋಗಿಲ್ಲ. ಈ ಕ್ಷೇತ್ರದಲ್ಲಿ ವಿಭಿನ್ನವಾದ ಉತ್ಪನ್ನವನ್ನು ಕೊಟ್ಟು ತಮ್ಮದೇ ಬ್ರಾಂಡ್ ಅಭಿವೃದ್ಧಿಪಡಿಸುವ ಅವಕಾಶ ಕಡಿಮೆ ಇರುವುದರಿಂದ ಎಫ್‌ಎಂಸಿಜಿ ಕಂಪನಿಗಳು ಈ ಕ್ಷೇತ್ರದಿಂದ ತುಸು ದೂರವೇ ಉಳಿದಿವೆ. ಆದರೆ, ಇತ್ತೀಚೆಗೆ ಇಲ್ಲೂ ಸಂಚಲನಗಳಾಗುತ್ತಿವೆ.

ಏನಪ್ಪಾ ಇದು..! ಮಿಸ್ ಯೂನಿವರ್ಸ್ ಅನ್ನೇ ಖರೀದಿಸಿದ್ದಾಳೆ ಈ ಥಾಯ್ ಮಹಿಳೆಏನಪ್ಪಾ ಇದು..! ಮಿಸ್ ಯೂನಿವರ್ಸ್ ಅನ್ನೇ ಖರೀದಿಸಿದ್ದಾಳೆ ಈ ಥಾಯ್ ಮಹಿಳೆ

ಟಾಟಾ, ಐಟಿಸಿ ಕಂಪನಿಗಳು ಮಸಾಲ ಕ್ಷೇತ್ರಕ್ಕೆ ಕಾಲಿಟ್ಟಿವೆಯಾದರೂ ಹೆಚ್ಚಿನ ಗಮನ ವಹಿಸಿಲ್ಲ. ದೇಶದ ಪ್ರಮುಖ ಮಸಾಲ ಪದಾರ್ಥಗಳ ಬ್ರಾಂಡ್ ಕಂಪನಿ ಎನಿಸಿದ ಎಂಡಿಎಚ್ ಮಸಾಲಾವನ್ನು ಹಿಂದೂಸ್ತಾನ್ ಯೂನಿಲಿವರ್ ಖರೀದಿಸಲು ಮುಂದಾಗಿದೆ ಎಂಬಂತಹ ಸುದ್ದಿ ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಆದರೆ, ಈ ವಿಚಾರವನ್ನು ಎರಡೂ ಕಂಪನಿಗಳು ತಳ್ಳಿಹಾಕಿರುವುದು ಹೌದು.

ಎಂಡಿಎಚ್ ಜೊತೆ ಎವರೆಸ್ಟ್, ಶಕ್ತಿ ಮಸಾಲ, ಆಚಿ ಮಸಾಲ, ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಗಳು ಭಾರತೀಯ ಮಸಾಲ ಮಾರುಕಟ್ಟೆಯಲ್ಲಿ ಹಳೆಯ ಹುಲಿಗಳೆನಿಸಿವೆ. ಎಂಟಿಆರ್ ಕಂಪನಿಯ ಮಸಾಲ ಪದಾರ್ಥಗಳು ಕರ್ನಾಟಕದ ಮಾರುಕಟ್ಟೆಯಲ್ಲಿ ಜನಪ್ರಿಯ ಎನಿಸಿವೆ.

English summary

Dabur To Acquire Majority Stake in Badshah Masala

Dabur India has said it has made agreement to acquire 51% stake in Badshah Masala for Rs. 587.5 by 2023 March 31st. Other 49% shares will be bought after 5 years, it stated
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X