For Quick Alerts
ALLOW NOTIFICATIONS  
For Daily Alerts

ಡಿಎ ಶೇಕಡ 4ರಷ್ಟು ಹೆಚ್ಚಳ ಮಾಡಲಾಗಿದೆಯೇ?

|

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) 34 ರಿಂದ 38 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಸರ್ಕಾರ ಸ್ಪಷ್ಟಣೆಯನ್ನು ನೀಡಿದೆ. ಈ ಬಗ್ಗೆ ಫಾಕ್ಟ್ ಚೆಕ್ ಮಾಡಲಾಗಿದ್ದು ಸುದ್ದಿ ಸುಳ್ಳು ಎಂಬುವುದು ತಿಳಿದು ಬಂದಿದೆ.

ಕೇಂದ್ರದ ನೋಡಲ್ ಏಜೆನ್ಸಿಯಾದ ಸಾರ್ವಜನಿಕ ಮಾಹಿತಿ ಬ್ಯೂರೋದ (ಪಿಐಬಿ) ಸತ್ಯ ಪರಿಶೀಲನಾ ವಿಭಾಗವು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) 34 ರಿಂದ 38 ರಷ್ಟು ಹೆಚ್ಚಳ ಮಾಡಲಾಗಿದೆ ಎಂಬ ಪತ್ರದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಪತ್ರವನ್ನು ವಾಟ್ಸಾಪ್‌ನಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಕೂಡಾ ಪಿಬಿಐ ಹೇಳಿದೆ.

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆ

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ಪಷ್ಟಣೆ ನೀಡಲಾಗಿದೆ. ಟ್ವಿಟರ್‌ನಲ್ಲಿ "ನಕಲಿ ಆದೇಶ" ದ ಚಿತ್ರವನ್ನು ಹಂಚಿಕೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಈ ಬಗ್ಗೆ ಮಾಹಿತಿ ನೀಡಿದೆ. ವಾಟ್ಸಾಪ್‌ನಲ್ಲಿ ಹರಡುತ್ತಿರುವ ನಕಲಿ ಆದೇಶದಲ್ಲಿ ಜುಲೈ 1, 2022 ರಿಂದ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

ಡಿಎ ಶೇಕಡ 4ರಷ್ಟು ಹೆಚ್ಚಳ ಮಾಡಲಾಗಿದೆಯೇ?

ನಕಲಿ ಪತ್ರದಲ್ಲಿ ಏನು ಬರೆಯಲಾಗಿದೆ?

ಇಲಾಖೆಯು ಈ ರೀತಿ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಈ ಚಿತ್ರವು ನಕಲಿ. ಇಂತಹ ಪತ್ರವನ್ನು ಹಣಕಾಸು ಸಚಿವಾಲಯವು ನೀಡಿಲ್ಲ ಎಂದು ಬರೆಯಲಾಗಿದೆ. "ನಕಲಿ ಸುತ್ತೋಲೆ"ಯಲ್ಲಿ "ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅನುದಾನ- ಪರಿಷ್ಕೃತ ದರಗಳು 01.07.2022 ರಿಂದ ಜಾರಿಗೆ ಬರುತ್ತವೆ," ಎಂದು ಉಲ್ಲೇಖಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?

"ಕೇಂದ್ರ ಸರ್ಕಾರಿ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯು ಜುಲೈ 1 2022 ರಿಂದ ಜಾರಿಗೆ ಬರುತ್ತದೆ. ವೇತನವು ಶೇಕಡ 34ರಿಂದ ಶೇಕಡ 38ಕ್ಕೆ ಹೆಚ್ಚಳ ಮಾಡಲು ನಿರ್ಧರಿಸುವ ವಿಚಾರದಲ್ಲಿ ರಾಷ್ಟ್ರಪತಿಗಳು ಸಂತಸಪಟ್ಟಿದ್ದಾರೆ," ಎಂದು ಕೂಡಾ ಬರೆಯಲಾಗಿದೆ. ಇನ್ನು ಇದು ಅಧಿಕೃತ ಎಂದು ತೋರಿಸುವ ನಿಟ್ಟಿನಲ್ಲಿ ಮೆಮೊರಾಂಡಮ್ ಸಂಖ್ಯೆಯನ್ನು ಸಹ ಹಾಕಲಾಗಿದೆ. ಪತ್ರದಲ್ಲಿ ಭಾರತ ಸರ್ಕಾರದ ಉಪ ಕಾರ್ಯದರ್ಶಿ ನಿರ್ಮಲಾ ದೇವ್ ಅವರ ಸಹಿಯನ್ನು ಸಹ ಹೊಂದಿದೆ.

ಯಾವಾಗ ತುಟ್ಟಿಭತ್ಯೆ ಹೆಚ್ಚಳವಾಗುತ್ತದೆ?

ಸಾಮಾನ್ಯವಾಗಿ ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆಯನ್ನು ಪರಿಷ್ಕರಿಸುತ್ತದೆ. ಜನವರಿ ಹಾಗೂ ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಜನವರಿ 2022 ರಲ್ಲಿ, ಕೇಂದ್ರ ಸರ್ಕಾರವು ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸುವ ನಿರ್ಧಾರ ಮಾಡಿದೆ. ಇದರಿಂದಾಗಿ ತುಟ್ಟಿಭತ್ಯೆಯು ಶೇಕಡ 34ಕ್ಕೆ ಏರಿದೆ. ಮುಂದಿನ ಕಂತಿನ ಘೋಷಣೆ ಬಾಕಿಯಿದ್ದು, ಸದ್ಯಕ್ಕೆ ಸುಮಾರು 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ತುಟ್ಟಿಭತ್ಯೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

English summary

Dearness Allowance Increased By 4 percent?, Government Gives Clarification

The fact-checking wing of the Public Information Bureau (PIB) has issued a clarification related to a Dearness Allowance Increased By 4 percent news.
Story first published: Friday, August 26, 2022, 15:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X