For Quick Alerts
ALLOW NOTIFICATIONS  
For Daily Alerts

ದೆಹಲಿ ಸರ್ಕಾರದಿಂದ ಟೆಂಡರ್: 100 ಸ್ಥಳಗಳಲ್ಲಿ 500 ಇವಿ ಚಾರ್ಜಿಂಗ್ ಪಾಯಿಂಟ್‌

|

ದೆಹಲಿಯ 100 ಸ್ಥಳಗಳಲ್ಲಿ 500 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಟೆಂಡರ್ ರೂಪಿಸಿದೆ ಎಂದು ದೆಹಲಿ ವಿದ್ಯುತ್ ಸಚಿವ ಸತ್ಯೇಂದರ್ ಜೈನ್ ಶುಕ್ರವಾರ ಪ್ರಕಟಿಸಿದ್ದಾರೆ.

 

ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಬೇಡಿಕೆ ಹೆಚ್ಚುವುದರಿಂದ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ಸ್‌ಗಳ ಹೆಚ್ಚಳಕ್ಕೆ ದೆಹಲಿ ಸರ್ಕಾರ ಮುಂದಾಗಿದೆ.

 

"ದೆಹಲಿ ಸರ್ಕಾರವು ಇವಿ (ಎಲೆಕ್ಟ್ರಿಕ್ ವೆಹಿಕಲ್) ಚಾರ್ಜಿಂಗ್‌ಗಾಗಿ ರಾಷ್ಟ್ರದ ಅತಿದೊಡ್ಡ ಟೆಂಡರ್ ಅನ್ನು ಇಂದು ತೆರೆದಿದೆ. ದೆಹಲಿಯ 100 ಸ್ಥಳಗಳಲ್ಲಿ 500 ಚಾರ್ಜಿಂಗ್ ಪಾಯಿಂಟ್‌ಗಳಿಗೆ ಅವಕಾಶವಿದೆ" ಎಂದು ಜೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರುಗಳ 500 ಚಾರ್ಜಿಂಗ್ ಪಾಯಿಂಟ್‌

ಈ ಯೋಜನೆಯನ್ನು ಪೂರ್ಣಗೊಳಿಸಲು ಅಂದಾಜು ಸಮಯ ಒಂದು ವರ್ಷ ಬೇಕಾಗಬಹುದು ಎಂದು ಅವರು ಹೇಳಿದರು. ಇದು 10% ಕನಿಷ್ಠವಾಗಿದ್ದು, ವೇಗದ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಅದರ ದರಗಳನ್ನು ಅತ್ಯಲ್ಪವಾಗಿ ಇಡಲಾಗುತ್ತದೆ ಎಂದಿದ್ದಾರೆ.

ದೆಹಲಿ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಖರೀದಿಸಲು ಪ್ರೋತ್ಸಾಹ ಧನ ನೀಡಿದೆ. ಇನ್ನು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಸ್ವಯಂಪ್ರೇರಿತವಾಗಿ ವಾಹನವನ್ನು ಸ್ಕ್ರ್ಯಾಪ್ ಮಾಡಲು ಮುಂದೆ ಬರುವವರಿಗೆ ಪ್ರೋತ್ಸಾಹಧನ ನೀಡುವ ಸಾಧ್ಯತೆ ಇದೆ.

English summary

Delhi Govt Tender To Setup 500 EV Charging Points

Delhi Power Minister Satyendar Jain on Friday announced that the government has floated a tender to set up 500 EV charging points at 100 locations.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X