For Quick Alerts
ALLOW NOTIFICATIONS  
For Daily Alerts

ವೇತನ ಕೊಡಲು ಹಣವಿಲ್ಲ: ಕೇಂದ್ರದಿಂದ 5,000 ಕೋಟಿ ರು. ಕೊಡಿ ಎಂದ ದೆಹಲಿ ಸರ್ಕಾರ

|

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಇದು ರಾಜ್ಯಗಳ ಸರ್ಕಾರಗಳ ಆದಾಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಏತನ್ಮಧ್ಯೆ, ಕೊರೊನಾ ಬಿಕ್ಕಟ್ಟಿನಿಂದ ಹೊರಬರಲು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರದಿಂದ ಐದು ಸಾವಿರ ಕೋಟಿ ರೂಪಾಯಿಗಳ ನೆರವು ಕೋರಿದ್ದಾರೆ.

ದೆಹಲಿ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ. ದೆಹಲಿ ಸರ್ಕಾರಕ್ಕೆ ತನ್ನ ನೌಕರರ ವೇತನ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ಪ್ರತಿ ತಿಂಗಳು 3,500 ಕೋಟಿ ರುಪಾಯಿ ಬೇಕಾಗುತ್ತದೆ ಎಂದಿದ್ದಾರೆ. ಹೀಗಾಗಿ 5,000 ಕೋಟಿ ರುಪಾಯಿಗಳನ್ನು ಕೊಡುವಂತೆ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ವೇತನ ಕೊಡಲು ಹಣವಿಲ್ಲ: ಕೇಂದ್ರದಿಂದ 5,000 ಕೋಟಿ ರು. ಕೊಡಿ ಎಂದ ದೆಹಲಿ

"ನಮಗೆ ಸಂಬಳ ಪಾವತಿಸಲು ಎರಡು ತಿಂಗಳವರೆಗೆ 7,000 ಕೋಟಿ ರುಪಾಯಿ ಬೇಕಾಗುತ್ತದೆ. ಸದ್ಯ ಸರ್ಕಾರಕ್ಕೆ 5,000 ಕೋಟಿ ರುಪಾಯಿಗಳನ್ನು ಮಂಜೂರು ಮಾಡುವಂತೆ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆ ಮೂಲಕ ನಾವು ಸಂಬಳವನ್ನು ಪಾವತಿಸಬಹುದು ಮತ್ತು ಇತರ ತುರ್ತು ವಿಚಾರಗಳನ್ನು ನೋಡಿಕೊಳ್ಳಬಹುದು "ಎಂದು ಆನ್‌ಲೈನ್‌ನಲ್ಲಿ ಪ್ರಸಾರವಾದ ಪತ್ರಿಕಾಗೋಷ್ಠಿಯಲ್ಲಿ ಸಿಸೋಡಿಯಾ ಹೇಳಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ನೇತೃತ್ವದ ದೆಹಲಿ ಸರ್ಕಾರವು ಮಾರ್ಚ್‌ನಲ್ಲಿ ಲಾಕ್‌ಡೌನ್ ಹೇರಿದಾಗಿನಿಂದ ಸ್ಥಗಿತಗೊಂಡಿದ್ದ ಆರ್ಥಿಕತೆಯನ್ನು ತೆರೆಯಲು ನಿರ್ಬಂಧಗಳನ್ನು ಸಡಿಲಿಸಲು ಪ್ರಯತ್ನಿಸುತ್ತಿದ್ದು, ಆದಾಯ ಕುಸಿದು ಹೋಗಿದೆ.

"ಕೊರೊನಾವೈರಸ್ ಪರಿಣಾಮ ದೆಹಲಿ ಸರ್ಕಾರ ಸೇರಿದಂತೆ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿದೆ. ಇದು ದೆಹಲಿಯ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ನಾವು ಸರ್ಕಾರದ ಹಣಕಾಸು ಮತ್ತು ಕನಿಷ್ಠ ವೆಚ್ಚಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ಕೇವಲ ಸಂಬಳ ಮತ್ತು ಅಗತ್ಯ ವೆಚ್ಚಗಳಿಗಾಗಿ ಸರ್ಕಾರಕ್ಕೆ 3,500 ಕೋಟಿ ರುಪಾಯಿ ಬೇಕಾಗಿದೆ. ಕಳೆದ ಎರಡು ತಿಂಗಳಿನಿಂದ ಜಿಎಸ್‌ಟಿ ಸಂಗ್ರಹ ತಲಾ ₹ 500 ಕೋಟಿ. ಎಲ್ಲಾ ಮೂಲಗಳು ಸೇರಿ ಎರಡು ತಿಂಗಳಲ್ಲಿ ಸರಿಸುಮಾರು 1,700 ಕೋಟಿ ರೂ. ಪಡೆದಿವೆ "ಎಂದು ಡಿಜಿಟಲ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿಸೋಡಿಯಾ ಹೇಳಿದರು.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಸರ್ಕಾರ ಕಳುಹಿಸಿದ ಎರಡನೇ ಪತ್ರ ಇದು. ಏಪ್ರಿಲ್‌ನಲ್ಲಿ, ಸಿಸೋಡಿಯಾ ದೆಹಲಿಯಲ್ಲಿ ಏಕಾಏಕಿ ಕೊರೊನಾ ವಿರುದ್ಧ ಹೋರಾಡಲು ಕೇಂದ್ರದಿಂದ ವಿಪತ್ತು ನಿಧಿಯನ್ನು ಕೇಳಿದರು. ಸೀತಾರಾಮನ್‌ಗೆ ಬರೆದ ಪತ್ರದಲ್ಲಿ ಸಿಸೋಡಿಯಾ, ಕೇಂದ್ರವು ತನ್ನ ವಿಪತ್ತು ನಿಧಿಯಿಂದ 17,000 ಕೋಟಿ ರುಪಾಯಿಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದರೂ, ದೆಹಲಿಗೆ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ.

English summary

Delhi Govt Writes Centre For Rs 5000 Crore For To Pay Salaries

Delhi Govt has written to the central government to secure Rs5,000 crores to pay salaries for government employees.
Story first published: Sunday, May 31, 2020, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X