For Quick Alerts
ALLOW NOTIFICATIONS  
For Daily Alerts

ಪ್ರಧಾನಿ, ಪ್ರಭಾವಿಗಳ ನಿವಾಸದ ಲ್ಯುಟೆನ್ಸ್ ಬಂಗಲೋ ಝೋನ್ ರಿಯಲ್ ಎಸ್ಟೇಟ್ ಡಲ್

|

ಭಾರತದಲ್ಲೇ ಅತ್ಯಂತ ವಿಶಿಷ್ಟವಾದ ವಿಳಾಸ ಇದು. ಇಲ್ಲಿ ಜಾಗವೋ ಬಂಗಲೆಯೋ ಖರೀದಿ ಮಾಡಿದರೆ ಅಂಥವರು ಭಾರತದಲ್ಲೇ ಅತ್ಯಂತ ಶ್ರೀಮಂತರ ಸಾಲಿನಲ್ಲಿ ನಿಲ್ಲುವಂತವರಾಗಿರಬೇಕು. ಯಾವುದು ಆ ಪ್ರದೇಶ ಗೊತ್ತೆ? ನವದೆಹಲಿಯಲ್ಲಿ ಇರುವ ಲ್ಯುಟೆನ್ಸ್ ಬಂಗಲೋ ಝೋನ್ (LBZ). ಇಲ್ಲಿ ಕಳೆದ ಕೆಲವು ತಿಂಗಳಲ್ಲಿ 17ರಿಂದ 18 ಅತಿ ಮುಖ್ಯ ವಸತಿ ಮಾರಾಟಕ್ಕೆ ಬಂದಿವೆ.

ಭಾರತದ ರಾಷ್ಟ್ರಪತಿ, ಪ್ರಧಾನಿ, ಗಣ್ಯ ಮಾನ್ಯ ಅತಿರಥ- ಮಹಾರಥ ರಾಜಕಾರಣಿಗಳ ನಿವಾಸ, ಭಾರೀ ಭಾರೀ ಶ್ರೀಮಂತಿಕೆ ಇರುವವರ ವಾಸ್ತವ್ಯ ಇರುವುದು ಇದೇ ಪ್ರದೇಶದಲ್ಲಿ. 2800 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ LBZನಲ್ಲಿ 3000 ಸರ್ಕಾರಿ ಒಡೆತನದ ಆಸ್ತಿ ಹಾಗೂ 6000 ಖಾಸಗಿ ಒಡೆತನದ ಆಸ್ತಿ 101 ಹೆಕ್ಟೇರ್ ಗಿಂತ ಸ್ವಲ್ಪ ಹೆಚ್ಚಿನ ಸ್ಥಳದಲ್ಲಿದೆ.

ಗಾಲ್ಫ್ ಲಿಂಕ್ಸ್ ನಲ್ಲಿ 3,375 ಚದರಡಿ, ಕೆಲವು 5,175 ಚದರಡಿ ಇವೆ. ಅಮೃತಾ ಶೆರ್ಗಿಲ್ ಮಾರ್ಗ್ ನಲ್ಲಿ ಎರಡರಿಂದ ಮೂರು ದೊಡ್ಡ ಆಸ್ತಿಗಳಿವೆ. ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಹದಿನೇಳರಿಂದ ಹದಿನೆಂಟಾಗುತ್ತದೆ ಎಂದು ಸೌತ್ ಡೆಲ್ಲಿ ಫ್ಲೋರ್ಸ್ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿಯ ಸ್ಥಾಪಕರಾದ ಮೋಹಿತ್ ಮಿನೋಚ ಹೇಳಿದ್ದಾರೆ.

5175 ಚದರಡಿಗೆ 110ರಿಂದ 120 ಕೋಟಿ ರುಪಾಯಿ ಇತ್ತು

5175 ಚದರಡಿಗೆ 110ರಿಂದ 120 ಕೋಟಿ ರುಪಾಯಿ ಇತ್ತು

ದುಬಾರಿ ಸ್ಥಳಗಳ ವ್ಯವಹಾರಗಳನ್ನು ಮಾಡುವುದೇ ಮಿನೋಚ ಅವರ ವೃತ್ತಿ. ಅವರೇ ಹೇಳುವಂತೆ, ಕೊರೊನಾಗೆ ಮುಂಚೆ ಗಾಲ್ಫ್ ಲಿಂಕ್ಸ್ ನಲ್ಲಿ 5175 ಚದರಡಿಗೆ 110ರಿಂದ 120 ಕೋಟಿ ರುಪಾಯಿ (ಚದರಡಿಗೆ 2 ಲಕ್ಷ ರುಪಾಯಿ) ಇತ್ತು. ಆದರೆ ಈಗ 85ರಿಂದ 90 ಕೋಟಿ (ಚದರಡಿಗೆ 1.65 ಲಕ್ಷ ರುಪಾಯಿ) ಆಗಿದೆ. ಅಂತಿಮವಾಗಿ ಯಾವ ಸ್ಥಳ, ಪ್ರದೇಶ ಹಾಗೂ ಹೇಗೆ ಚೌಕಾಶಿ ಮಾಡುತ್ತಾರೆ ಎಂಬಿತ್ಯಾದಿ ಅಂಶಗಳ ಮೇಲೆ ನಿರ್ಧಾರ ಆಗುತ್ತದೆ. ಸುಂದರ್ ನಗರ್ ನಲ್ಲಿ ಎರಡರಿಂದ ಮೂರು ಆಸ್ತಿ ಮಾರಾಟಕ್ಕಿದೆ. ಇಲ್ಲಿ ಬೆಲೆಗಳು 85ರಿಂದ 90 ಕೋಟಿ (ಚದರಡಿಗೆ 1.15 ಲಕ್ಷ ರುಪಾಯಿ) ಆಗಿದೆ. ಕೊರೊನಾಗೆ ಮುಂಚೆ ಇಲ್ಲಿ 110ರಿಂದ 120 ಕೋಟಿ (ಚದರಡಿಗೆ 1.55 ಲಕ್ಷ ರುಪಾಯಿ) ಇತ್ತು. ಎಲ್ಲ ಪ್ಲಾಟ್ ಗಳು ಇಲ್ಲಿ 7,794 ಚದರಡಿಯದೇ ಇದೆ.

ಸಾಮಾನ್ಯವಾಗಿ ಐದರಿಂದ ಎಂಟು ಆಸ್ತಿ ಮಾರಾಟಕ್ಕೆ ಬರುತ್ತದೆ

ಸಾಮಾನ್ಯವಾಗಿ ಐದರಿಂದ ಎಂಟು ಆಸ್ತಿ ಮಾರಾಟಕ್ಕೆ ಬರುತ್ತದೆ

ರಿಯಲ್ ಎಸ್ಟೇಟ್ ಕನ್ಸಲ್ಟಂಟ್ ಗಳು ಹೇಳುವ ಪ್ರಕಾರ, LBZನಲ್ಲಿ ಸಾಮಾನ್ಯವಾಗಿ ಐದರಿಂದ ಎಂಟು ಆಸ್ತಿ ಮಾರಾಟಕ್ಕೆ ಬರುತ್ತದೆ. ಆದರೆ ಹದಿನೆಂಟರ ತನಕ ಬಂದಿರುವುದು ಅಪರೂಪ. ವ್ಯವಹಾರಗಳನ್ನು ನಡೆಸುವವರು ನಗದು ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ವ್ಯವಹಾರಗಳು ಕಡಿಮೆ. ಹಾಗಂತ ಏನೂ ಆಗೋದೇ ಇಲ್ಲ ಅಂತಲ್ಲ. ಆದರೆ ಒಂದು ಅಥವಾ ವರ್ಷಕ್ಕೆ ಎರಡು ಆಗುತ್ತದೆ. LBZನಲ್ಲಿ ಖರೀದಿ ಹಾಗೂ ಮಾರಾಟ ಮಾಡುವುದು ದೀರ್ಘವಾದ ಪ್ರಕ್ರಿಯೆ. ಆರು ತಿಂಗಳಿಂದ ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ನೂರಾರು ಕೊಟಿ ರುಪಾಯಿ ಬೇಕಾಗುವುದರಿಂದ ಒಂದು ವರ್ಷದಲ್ಲಿ ಎರಡರಿಂದ ನಾಲ್ಕು ವ್ಯವಹಾರ ಪೂರ್ತಿ ಆಗುತ್ತದೆ. ಜತೆಗೆ ಇಲ್ಲಿ ಬೇಸ್ ಮೆಂಟ್ ನಿರ್ಮಾಣ ಮಾಡುವಂತಿಲ್ಲ. ಜತೆಗೆ ಇಷ್ಟೇ ಅಂತಸ್ತಿನ ನಿರ್ಮಾಣ ಮಾಡಬೇಕು ಎಂಬ ನಿರ್ಬಂಧ ಇದೆ.

ಸದ್ಯಕ್ಕೆ ಎಲ್ಲೆಲ್ಲಿ ಮಾರಾಟಕ್ಕೆ ಬಂದಿವೆ?

ಸದ್ಯಕ್ಕೆ ಎಲ್ಲೆಲ್ಲಿ ಮಾರಾಟಕ್ಕೆ ಬಂದಿವೆ?

ಸಾಮಾನ್ಯವಾಗಿ ಕಂಪೆನಿಗಳ ಹೆಸರಿನಲ್ಲಿ ಆಸ್ತಿ ಖರೀದಿ- ಮಾರಾಟ ನಡೆಯುತ್ತದೆ. ಏಕೆಂದರೆ ನೋಂದಣಿ ಶುಲ್ಕ ಉಳಿಸಲು ಅನುಕೂಲವಾಗುತ್ತದೆ. ಆಸ್ತಿಯನ್ನು ಒಂದು ಸಂಸ್ಥೆಯಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡಿದಂತೆ ತೋರಿಸಲಾಗುತ್ತದೆ. ಸದ್ಯಕ್ಕೆ LBZನ ಹೇಲಿ ರಸ್ತೆಯಲ್ಲಿ ವಿಲ್ಲಾವೊಂದು 200 ಕೋಟಿಗೆ ಮತ್ತು ಬಾರಾಖಂಬ ರಸ್ತೆಯಲ್ಲಿ 600 ಕೋಟಿಗೆ ಮಾರಾಟಕ್ಕಿದೆ. ಇನ್ನು ಪೃಥ್ವಿರಾಜ್ ರಸ್ತೆಯಲ್ಲಿ ಅಂದಾಜು ಮಾರುಕಟ್ಟೆ ಮೌಲ್ಯ 600 ಕೋಟಿ ಹಾಗೂ 400 ಕೋಟಿಗೆ ಎರಡು ಬಂಗಲೆಗಳು ಮಾರಾಟಕ್ಕಿವೆ. ರಿಯಲ್ ಎಸ್ಟೇಟ್ ಕನ್ಸಲ್ಟಂಟ್ ಗಳು ಅಭಿಪ್ರಾಯ ಪಡುವಂತೆ, ವ್ಯವಹಾರಗಳು ಇನ್ನಷ್ಟು ಕಡಿಮೆ ಆಗಬಹುದು. ಕಸ್ತೂರ್ಬಾ ಗಾಂಧಿ ರಸ್ತೆ, ಸುಂದರ್ ನಗರ್, ಪೃಥ್ವಿರಾಜ್ ರಸ್ತೆಯಲ್ಲಿ ನಾಲ್ಕರಿಂದ ಐದು ಆಸ್ತಿ ಮಾರಾಟಕ್ಕೆ ಬಂದಿವೆಯಂತೆ. ಒಟ್ಟಿನಲ್ಲಿ ಸದ್ಯಕ್ಕೆ ರಿಯಲ್ ಎಸ್ಟೇಟ್ ಗೆ ಸೂಕ್ತ ವಾತಾವರಣ ಇಲ್ಲ. ಮುಂದಿನ ವರ್ಷ ಚೇತರಿಕೆ ಕಾಣಿಸಿಕೊಳ್ಳಬಹುದು.

English summary

Delhi's Richest Lutyens Bungalow Zone Real Estate Become Dull

India's costliest residence area Lutyens Bungalow Zone real estate before and after Corona explained here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X