For Quick Alerts
ALLOW NOTIFICATIONS  
For Daily Alerts

ಕೊರೊನಾ ಭೀತಿ: ವಿಮಾನದಲ್ಲಿ 3 ಸೀಟ್‌ನಲ್ಲಿ ಇಬ್ಬರಿಗೆ ಮಾತ್ರ ಕೂರಲು ಡಿಜಿಸಿಎ ಆದೇಶ

|

ಮಹಾಮಾರಿ ಕೊರೊನಾಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ವಿಮಾನದಲ್ಲಿ ಮೂರು ಸೀಟ್‌ಗಳಲ್ಲಿ ಇಬ್ಬರು ಮಾತ್ರ ಕುಳಿತುಕೊಂಡು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ನಾಗರೀಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ.

ದೇಶೀಯ ಸರ್ಕ್ಯೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ವಿಮಾನದೊಳಗಿನ ಪ್ರಯಾಣಿಕರು ಮೂರು ಆಸನವಿರುವ ಜಾಗದಲ್ಲಿ ಒಬ್ಬರಿಗೊಬ್ಬರು ಹತ್ತಿರ ಕುಳಿತುಕೊಳ್ಳದಂತೆ ನೋಡಿಕೊಳ್ಳುವಂತೆ ಆದೇಶಿಸಿದೆ.

"ಚೆಕ್-ಇನ್ ಸಮಯದಲ್ಲಿ ಆಸನ ಹಂಚಿಕೆ ಮಾಡುವಾಗ ಇಬ್ಬರು ಪ್ರಯಾಣಿಕರ ನಡುವಿನ ಆಸನವನ್ನು ಖಾಲಿ ಇಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು" ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಿದೆ.

ಪ್ರಯಾಣಿಕರ ನಡುವೆ ಇರಬೇಕು 1 ಮೀಟರ್ ಅಂತರ

ಪ್ರಯಾಣಿಕರ ನಡುವೆ ಇರಬೇಕು 1 ಮೀಟರ್ ಅಂತರ

ಚೆಕ್-ಇನ್ ಮತ್ತು ಬೋರ್ಡಿಂಗ್ ಸಮಯದಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ವಾಯುಯಾನ ನಿಯಂತ್ರಕದ ಪ್ರಯತ್ನವಾಗಿದೆ. ಎರಡು ಚೆಕ್-ಇನ್ ಕೌಂಟರ್‌ಗಳ ನಡುವೆ 1 ಮೀಟರ್ ಅಂತರವನ್ನು ಕಾಯ್ದುಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದನ್ನ ತಪ್ಪಿಸಿದ್ದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ಕ್ಯಾಬಿನ್ ಸಿಬ್ಬಂದಿಗೂ ಅಂತರ ಕಾಯ್ದುಕೊಳ್ಳಲು ಆದೇಶ

ಕ್ಯಾಬಿನ್ ಸಿಬ್ಬಂದಿಗೂ ಅಂತರ ಕಾಯ್ದುಕೊಳ್ಳಲು ಆದೇಶ

ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನ ನಡುವೆ ಅಂತರವಿರಬೇಕು ಎಂಬ ಆದೇಶದ ಜೊತೆಗೆ, ಕ್ಯಾಬಿನ್ ಸಿಬ್ಬಂದಿಯು ಸೇವೆ ಒದಗಿಸುವಾಗ ಪ್ರಯಾಣಿಕರೊಂದಿಗೆ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳಬೇಕು ಎಂದು ಡಿಜಿಸಿಎ ಆದೇಶಿಸಿದೆ.

ವಿಮಾನಗಳಿಗೆ ಕಾಯುತ್ತಿರುವಾಗಲು ಹತ್ತಿರ ಕೂರುವಂತಿಲ್ಲ

ವಿಮಾನಗಳಿಗೆ ಕಾಯುತ್ತಿರುವಾಗಲು ಹತ್ತಿರ ಕೂರುವಂತಿಲ್ಲ

ವಿಮಾನದಲ್ಲಿ ಪ್ರಯಾಣ ಮಾಡುವಾಗ ಮೂರು ಸೀಟಿನಲ್ಲಿ ಇಬ್ಬರು ಕುಳಿತಕೊಳ್ಳಬೇಕು. ಎರಡು ಸೀಟುಗಳ ನಡುವೆ ಅಂತರವಿರಬೇಕು ಎಂಬ ಆದೇಶದ ಜೊತೆಗೆ ಪ್ರಯಾಣಿಕರು ತಮ್ಮ ವಿಮಾನಗಳಿಗಾಗಿ ಕಾಯುತ್ತಿರುವಾಗ ಪರಸ್ಪರ ಹತ್ತಿರ ಕುಳಿತುಕೊಳ್ಳದಂತೆ ನೋಡಿಕೊಳ್ಳುವಂತೆ ಸಹ ಆದೇಶಿಸಲಾಗಿದೆ. ಜೊತೆಗೆ ಪ್ರಯಾಣಿಕರು ಸ್ಯಾನಿಟೈಸರ್ ಬಳಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಿದೆ.

ವಿಮಾನಗಳ ಹಾರಾಟದಲ್ಲಿ ಅರ್ಧದಷ್ಟು ಇಳಿಕೆ

ವಿಮಾನಗಳ ಹಾರಾಟದಲ್ಲಿ ಅರ್ಧದಷ್ಟು ಇಳಿಕೆ

ದೇಶದಲ್ಲಿ ಕೊರೊನಾವೈರಸ್ ಭೀತಿ ಹಾಗೂ ಪ್ರಯಾಣಿಕರು ಕಮ್ಮಿ ಆಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ, ಮೂರನೇ ಎರಡರಷ್ಟು ವಿಮಾನಗಳನ್ನು ರದ್ದುಗೊಳಿಸಿದೆ. ಗೋ ಏರ್‌ ವಿಮಾನಯಾನ ಸಂಸ್ಥೆಯು ತನ್ನ 60 ಪರ್ಸೆಂಟ್ ವಿಮಾನವನ್ನು ಹಾರಾಟ ನಡೆಸುತ್ತಿಲ್ಲ. ಇನ್ನು ವಿಸ್ತಾರ ಕೂಡ ಅರ್ಧದಷ್ಟು ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ.

English summary

DGCA Order Airlines To Keep Seats Between Passengers Empty

The DGCA has asked all airlines operating in domestic circuit to ensure passengers inside the aircraft are not seated next to each other and there remains a seat between two passengers.
Story first published: Monday, March 23, 2020, 16:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X