For Quick Alerts
ALLOW NOTIFICATIONS  
For Daily Alerts

DHFL ವಾಧ್ವಾನ್ ಸೋದರರನ್ನು ಬಂಧಿಸಿದ ED; ಇದು ಯೆಸ್ ಬ್ಯಾಂಕ್ ಹಗರಣದ ಕೊಂಡಿ

|

ಜಾರಿ ನಿರ್ದೇಶನಾಲಯವು (ಇ.ಡಿ.) ಗುರುವಾರದಂದು ಡಿಎಚ್ ಎಫ್ ಎಲ್ ಪ್ರವರ್ತಕರಾದ (ಪ್ರಮೋಟರ್ಸ್) ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರನ್ನು ಬಂಧಿಸಿದೆ. ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಪಿಲ್- ಧೀರಜ್ ಸೋದರರನ್ನು ಮುಂಬೈನಲ್ಲಿ ಇರುವ ವಿಶೇಷ ಕೋರ್ಟ್ ಹತ್ತು ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿದೆ. ಇದೇ ಪ್ರಕರಣಕ್ಕೆ ವಾಧ್ವಾನ್ ಸೋದರರನ್ನು ಸಿಬಿಐ ಬಂಧಿಸಿದ್ದು, ಸದ್ಯಕ್ಕೆ ಜೈಲಿನಲ್ಲಿ ಇದ್ದಾರೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA) ಅಡಿಯಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ.

ಕೊರೊನಾ ಕಾರಣ ನೀಡಿ ವಿಚಾರಣೆಗೆ ತಪ್ಪಿಸಿದ್ದರು
 

ಕೊರೊನಾ ಕಾರಣ ನೀಡಿ ವಿಚಾರಣೆಗೆ ತಪ್ಪಿಸಿದ್ದರು

ಗ್ಯಾಂಗ್ ಸ್ಟರ್ ಇಕ್ಬಾಲ್ ಮಿರ್ಚಿಗೆ ಸಂಬಂಧಿಸಿದ ಮತ್ತೊಂದು ಅಕ್ರಮ ಹಣ ವರ್ಗಾವಣೆಯಲ್ಲಿ ಕೂಡ ವಾಧ್ವಾನ್ ಸೋದರರು ಇ.ಡಿ. ವಿಚಾರಣೆ ಎದುರಿಸುತ್ತಿದ್ದಾರೆ. ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರೂ ಕೊರೊನಾದ ಪ್ರಯಾಣ ನಿರ್ಬಂಧದ ಕಾರಣ ನೀಡಿ ತಪ್ಪಿಸಿದ್ದರು.

ವಾಧ್ವಾನ್ ಸೋದರರ ಕಾರು ವಶಕ್ಕೆ

ವಾಧ್ವಾನ್ ಸೋದರರ ಕಾರು ವಶಕ್ಕೆ

ದೇಶದಾದ್ಯಂತ ಲಾಕ್ ಡೌನ್ ಇರುವ ವೇಳೆಯಲ್ಲಿ, ಕಳೆದ ಏಪ್ರಿಲ್ ನಲ್ಲಿ ವಾಧ್ವಾನ್ ಕುಟುಂಬ ಸದಸ್ಯರು ಅನಧಿಕೃತವಾಗಿ ಮಹಾರಾಷ್ಟ್ರದ ಲೋನಾವಾಲದಿಂದ ಮಹಾಬಲೇಶ್ವರಕ್ಕೆ ತೆರಳಿದ್ದರು ಎಂದು ವರದಿ ಆಗಿತ್ತು. ಆ ನಂತರ ವಾಧ್ವಾನ್ ಸೋದರರಿಗೆ ಸೇರಿದ ಐದು ಕಾರುಗಳನ್ನು ಇ.ಡಿ. ವಶಕ್ಕೆ ಪಡೆದಿತ್ತು.

34 ಸಾವಿರ ಕೋಟಿ ರುಪಾಯಿ ಬ್ಯಾಡ್ ಲೋನ್

34 ಸಾವಿರ ಕೋಟಿ ರುಪಾಯಿ ಬ್ಯಾಡ್ ಲೋನ್

ಹತ್ತು ದೊಡ್ಡ ಗ್ರೂಪ್ ಗಳ 44 ಕಂಪೆನಿಗಳಿಂದ ಯೆಸ್ ಬ್ಯಾಂಕ್ ನಲ್ಲಿ 34 ಸಾವಿರ ಕೋಟಿ ರುಪಾಯಿ ಬ್ಯಾಡ್ ಲೋನ್ ಇದೆ. ಅನಿಲ್ ಅಂಬಾನಿ ಗ್ರೂಪ್, ಎಸ್ಸೆಲ್ ಗ್ರೂಪ್, ಐಎಲ್ ಅಂಡ್ ಎಫ್ ಎಸ್, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್, ಕಾಕ್ಸ್ ಅಂಡ್ ಕಿಂಗ್ಸ್ ಮತ್ತು ಭಾರತ್ ಇನ್ಫ್ರಾದಿಂದ ಇಷ್ಟು ದೊಡ್ಡ ಮೊತ್ತ ಬ್ಯಾಡ್ ಲೋನ್ ಆಗಿದೆ.

4300 ಕೋಟಿ ರುಪಾಯಿ ಕಿಕ್ ಬ್ಯಾಕ್
 

4300 ಕೋಟಿ ರುಪಾಯಿ ಕಿಕ್ ಬ್ಯಾಕ್

ಜಾರಿ ನಿರ್ದೇಶನಾಲಯ ಆರೋಪ ಮಾಡುವಂತೆ, ರಾಣಾ ಕಪೂರ್ ಮತ್ತು ಆತನ ಕುಟುಂಬ ಸದಸ್ಯರು, ಇತರರು ದೊಡ್ಡ ಮೊತ್ತದ ಸಾಲವನ್ನು ಯೆಸ್ ಬ್ಯಾಂಕ್ ನಿಂದ ಮಂಜೂರು ಮಾಡುವುದಕ್ಕೆ 4300 ಕೋಟಿ ರುಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಆ ನಂತರ ಸಾಲದ ಮೊತ್ತವು ನಾನ್ ಪರ್ಫಾರ್ಮಿಂಗ್ ಅಸೆಟ್ ಗಳಾಗಿವೆ (NPA). ಸದ್ಯಕ್ಕೆ ರಾಣಾ ಕಪೂರ್ ಕೂಡ ಜೈಲಿನಲ್ಲಿದ್ದಾರೆ.

English summary

DHFL Promoters Wadhawan Brothers Arrested By E.D.

DHFL promoters Kapil and Dheeraj Wadhawan brothers arrested by E.D. related to Yes ban scam.
Story first published: Friday, May 15, 2020, 8:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X