For Quick Alerts
ALLOW NOTIFICATIONS  
For Daily Alerts

ಡಿಎಚ್ ಎಫ್ ಎಲ್ ನಲ್ಲಿ ಹನ್ನೆರಡು ವರ್ಷದಲ್ಲಿ 17,394 ಕೋಟಿ ವಂಚನೆ

|

ಈಗಾಗಲೇ ಸಾಲದ ಹೊರೆಯಲ್ಲಿ ಕುಗ್ಗಿಹೋಗಿರುವ ಡಿಎಚ್ ಎಫ್ ಎಲ್ ನಲ್ಲಿ ಆರ್ಥಿಕ ವರ್ಷ 2007ರಿಂದ 2019ರ ಮಧ್ಯೆ 17,394 ಕೋಟಿ ರುಪಾಯಿ ಮೌಲ್ಯದ ವಂಚನೆ ನಡೆದಿದೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ಗ್ರಾಂಟ್ ಥೋರ್ ನ್ಟಾನ್ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಇನ್ ಸಾಲ್ವೆನ್ಸಿ ಹಾಗೂ ಬ್ಯಾಂಕ್ ರಪ್ಸಿ ಕೋಡ್ (IBC) ಅಡಿಯಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (DHFL)ಗೆ ಆಡಳಿತಗಾರರನ್ನು ನೇಮಿಸಲಾಯಿತು.

1 ಲಕ್ಷ ಅಸ್ತಿತ್ವದಲ್ಲಿಲ್ಲದ ಖಾತೆ ಮೂಲಕ DHFLನಿಂದ 12,773 ಕೋಟಿ ವರ್ಗಾವಣೆ1 ಲಕ್ಷ ಅಸ್ತಿತ್ವದಲ್ಲಿಲ್ಲದ ಖಾತೆ ಮೂಲಕ DHFLನಿಂದ 12,773 ಕೋಟಿ ವರ್ಗಾವಣೆ

ಈ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಗ್ರಾಂಟ್ ಥೋರ್ ನ್ಟಾನ್ ನೆರವು ಪಡೆಯಲಾಯಿತು. ಕಳೆದ ವರ್ಷ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್ (NCLT) ಮುಂಬೈ ಪೀಠವು ಕಳೆದ ವರ್ಷ ಕಂಪೆನಿಯ ದಿವಾಳಿ ನಿರ್ಣಯವನ್ನು ಒಪ್ಪಿಕೊಂಡಿತು.

14,046 ಕೋಟಿ ರುಪಾಯಿ ಮೊತ್ತ

14,046 ಕೋಟಿ ರುಪಾಯಿ ಮೊತ್ತ

ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಆರ್. ಸುಬ್ರಮಣಿಯಕುಮಾರ್ ಅವರನ್ನು ಕಂಪೆನಿ ಆಡಳಿತಗಾರರಾಗಿ ನೇಮಿಸಲಾಯಿತು. ಎನ್ ಸಿಎಲ್ ಟಿ ಮುಂದೆ ದಾಖಲಿಸಿರುವ ಅರ್ಜಿ ಪ್ರಕಾರ, ಹಣಕಾಸು ಪರಿಣಾಮ ಬೀರುವ ಅಂದಾಜು 14,046 ಕೋಟಿ ರುಪಾಯಿ ಮೊತ್ತವು ಜೂನ್ 30, 2019ಕ್ಕೆ ಕಂಪೆನಿ ಲೆಕ್ಕದ ಅನ್ವಯ ಬಾಕಿ ಇದೆ.

3,348 ಕೋಟಿ ರುಪಾಯಿ ನಷ್ಟ

3,348 ಕೋಟಿ ರುಪಾಯಿ ನಷ್ಟ

ಇನ್ನು ಕೆಲವು ಕಂಪೆನಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡಿರುವ ಸಾಲದಿಂದ ಆಗಿರುವ ನಷ್ಟದ ಪ್ರಮಾಣದ ಅಂದಾಜು 3,348 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ. ಈ ಕುರಿತು ಬುಧವಾರ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಮಾಹಿತಿ ನೀಡಲಾಗಿದೆ. ಈ ವ್ಯವಹಾರಗಳು ಆರ್ಥಿಕ ವರ್ಷ 2006- 2007ರಿಂದ 2018- 2019ರ ಮಧ್ಯೆ ನಡೆದಿವೆ ಎಂದು ಟ್ರಾನ್ಸಾಕ್ಷನ್ ಆಡಿಟರ್ ವರದಿಯಲ್ಲಿ ತಿಳಿಸಲಾಗಿದೆ.

87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ

87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ

ಈ ವರದಿಯನ್ನು ಆಧರಿಸಿ, ಕಪಿಲ್ ವಾಧ್ವಾನ್ ಹಾಗೂ ಧೀರಜ್ ವಾಧ್ವಾನ್ ಸೆರಿದಂತೆ 87 ಸಂಸ್ಥೆ ಹಾಗೂ ಮಾಲೀಕರ ವಿರುದ್ಧ ಅರ್ಜಿ ಹಾಕಲಾಗಿದೆ. ಕಳೆದ ವರ್ಷ ಡಿಎಚ್ ಎಫ್ ಎಲ್ ನ ದಿವಾಳಿ ಕಲಾಪಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳಿಸಿತ್ತು. ತೀರುವಳಿಗಾಗಿ ಎನ್ ಸಿಎಲ್ ಟಿಗೆ ಕಳಿಸಿದ ಮೊದಲ ಹಣಕಾಸು ಸೇವಾ ಸಂಸ್ಥೆ ಡಿಎಚ್ ಎಫ್ ಎಲ್ ಆಯಿತು.

83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ

83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ

ಜುಲೈ 2019ರ ಹೊತ್ತಿಗೆ ಬ್ಯಾಂಕ್ ಗಳು, ನ್ಯಾಷನಲ್ ಹೌಸಿಂಗ್ ಬೋರ್ಡ್, ಮ್ಯೂಚುವಲ್ ಫಂಡ್ ಗಳು, ಬಾಂಡ್ ಹೋಲ್ಡರ್ ಗಳು/ರೀಟೇಲ್ ಬಾಂಡ್ ಹೋಲ್ಡರ್ ಗಳಿಗೆ ಡಿಎಚ್ ಎಫ್ ಎಲ್ ನಿಂದ 83,873 ಕೋಟಿ ರುಪಾಯಿ ಬಾಕಿ ಪಾವತಿಸಬೇಕಿದೆ. ಅದರಲ್ಲಿ ಸೆಕ್ಯೂರ್ಡ್ ಸಾಲ ಮೊತ್ತ 74,054 ಕೋಟಿ ರುಪಾಯಿಯಾದರೆ, ಅನ್ ಸೆಕ್ಯೂರ್ಡ್ ಮೊತ್ತ 9,818 ಕೋಟಿ. ಹಲವು ಬ್ಯಾಂಕ್ ಗಳು ಡಿಎಚ್ ಎಫ್ ಎಲ್ ಖಾತೆಯನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಎಂದು ಘೋಷಿಸಿವೆ.

English summary

DHFL Scam: Auditor Report Fraudulent Transactions Worth 17394 Crore Rupees

According to transaction auditor Grant Thornton, fraudulent transactions worth Rs 17,394 crore happened at DHFL during FY07 to FY19.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X