For Quick Alerts
ALLOW NOTIFICATIONS  
For Daily Alerts

ಆರ್ಥಿಕ ಹಿಂಜರಿತದಿಂದ ಕುಸಿದ ಡೀಸೆಲ್ ಬೇಡಿಕೆ

|

ದೇಶದಲ್ಲಿನ ಆರ್ಥಿಕ ಹಿಂಜರಿತದಿಂದಾಗಿ ಅಕ್ಟೋಬರ್‌ನಲ್ಲಿ ಶೇಕಡಾ 7.4 ರಷ್ಟು ಡೀಸೆಲ್ ಬೇಡಿಕೆ ಕುಸಿದಿದೆ ಎಂದು ವರದಿಯಾಗಿದೆ.

 

ದೇಶದಲ್ಲಿ ಆರ್ಥಿಕತೆ ನಿಧಾನಗೊಳ್ಳುತ್ತಿರುವುದರ ಜೊತೆಗೆ ಅಕ್ಟೋಬರ್‌ನಲ್ಲಿ ಡೀಸೆಲ್ ಒಟ್ಟಾರೆ ಬೇಡಿಕೆಯು ಶೇಕಡಾ 7.4 ರಷ್ಟು ಕುಸಿದಿದ್ದು ಕಳೆದ 3 ವರ್ಷಗಳಲ್ಲಿ ಅತ್ಯಂತ ಕಡಿಮೆ ಬೇಡಿಕೆ ದಾಖಲಾದ ತಿಂಗಳಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

 
ಆರ್ಥಿಕ ಹಿಂಜರಿತದಿಂದ ಕುಸಿದ ಡೀಸೆಲ್ ಬೇಡಿಕೆ

2018 ಅಕ್ಟೋಬರ್‌ನಿಂದ ದೇಶದ ಒಟ್ಟು ತೈಲ ಬೇಡಿಕೆ ಶೇಕಡಾ 1.4ರಷ್ಟು ಕಡಿಮೆಯಾಗಿದೆ. ಆರ್ಥಿಕ ಕುಸಿತ, ವಿಸ್ತೃತ ಮಾನ್ಸೂನ್, ನಿಧಾನಗತಿಯ ವಾಹನ ಮಾರಾಟ, ಪೆಟ್ರೋಲ್ ವಾಹನಗಳಿಗೆ ಆದ್ಯತೆ, ಹೆಚ್ಚಿದ ವಿದ್ಯುತ್ ಲಭ್ಯತೆ, ರೈಲ್ವೆಯ ವಿದ್ಯುದೀಕರಣದಿಂದಾಗಿ ದೇಶದ ತೈಲ ಅವಶ್ಯಕತೆಯ ಸುಮಾರು ಶೇಕಡಾ 40ರಷ್ಟು ಡೀಸೆಲ್ ಬೇಡಿಕೆ ಕುಸಿಯುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.

ದೇಶದಲ್ಲಿ ಇಂಧನ ಬೇಡಿಕೆ ಬೆಳವಣಿಗೆಗೆ ಅಡ್ಡಿಯಾಯ್ತು ಮಳೆದೇಶದಲ್ಲಿ ಇಂಧನ ಬೇಡಿಕೆ ಬೆಳವಣಿಗೆಗೆ ಅಡ್ಡಿಯಾಯ್ತು ಮಳೆ

ಒಟ್ಟು ತೈಲ ಬೇಡಿಕೆಯಲ್ಲಿ ಶೇಕಡಾ 15ರಷ್ಟಿರುವ ಪೆಟ್ರೋಲ್ ಮಾರಾಟವು, ಅಕ್ಟೋಬರ್‌ನಲ್ಲಿ ಶೇಕಡಾ 8.9 ರಷ್ಟು ಏರಿಕೆಯಾಗಿದ್ದು, ಏಪ್ರಿಲ್ ನಿಂದ ಸೆಪ್ಟೆಂಬರ್‌ವರೆಗೆ ಶೇಕಡಾ 9.1ರಷ್ಟು ಏರಿಕೆ ಕಂಡಿದೆ.

English summary

Diesel Demand Falls 7.4 Percent In October Due To Economic Slowdown

India Diesel demand fell 7.4 percent in october from a year ago, make a biggest monthly fall in about three years.
Story first published: Monday, November 18, 2019, 18:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X