For Quick Alerts
ALLOW NOTIFICATIONS  
For Daily Alerts

ಡಿಜಿಲಾಕರ್‌ನಲ್ಲಿ ಪೆನ್ಷನ್ ಸರ್ಟಿಫಿಕೇಟ್ ಸೇರಿ ಹೊಸ ಸೇವೆಗಳು

|

ನಮ್ಮ ಅನೇಕ ಮಹತ್ವದ ದಾಖಲೆಗಳನ್ನು ಪೇಪರ್ ರೂಪದಲ್ಲಿ ಫೈಲ್‌ಗಳಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ, ಈ ಪದ್ಧತಿಯಲ್ಲಿ ಸದಾ ರಿಸ್ಕ್ ಇದ್ದದ್ದೇ. ಈಗಂತೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಪ್ರವೃತ್ತಿ ಹೆಚ್ಚಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡ ಡಿಜಿಲಾಕರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ನಮಗೆ ಯಾವಾಗಲಾದರೂ ಅಗತ್ಯ ಬೀಳಬಹುದಾದ ಆಧಾರ್, ಪಾನ್, ಲೈಸೆನ್ಸ್, ಮಾರ್ಕ್ಸ್‌ಕಾರ್ಡ್ ಇತ್ಯಾದಿ ಹಲವು ದಾಖಲೆಗಳು ಒಂದೇ ಕಡೆ ಲಭ್ಯ ಇದ್ದು ಬೇಕಂದಾಗೆಲ್ಲಾ ಕೈಗೆ ಸಿಗುವಂತಿದ್ದರೆ ಎಷ್ಟು ಚೆನ್ನ ಎನಿಸಬಹುದು. ಡಿಜಿಲಾಕರ್ ಈ ಸೌಲಭ್ಯವನ್ನು ಒದಗಿಸುತ್ತದೆ.

ಬೋನಸ್, ಡಿಎ ಹೆಚ್ಚಳ: ಹಬ್ಬದ ಸೀಸನ್ ಫಳಫಳಬೋನಸ್, ಡಿಎ ಹೆಚ್ಚಳ: ಹಬ್ಬದ ಸೀಸನ್ ಫಳಫಳ

 ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ರೂಪುಗೊಂಡಿರುವುದೇ ಡಿಜಿಲಾಕರ್. ಸರಕಾರ ನೀಡುವ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮಾರ್ಕ್ಸ್ ಕಾರ್ಡ್, ವೆಹಿಕಲ್ ರಿಜಿಸ್ಟ್ರೇಶನ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಸೇರಿದಂತೆ ಬಹುದಾಖಲೆಗಳನ್ನು ಡಿಜಿಲಾಕರ್ ಆ್ಯಪ್‌ನಲ್ಲಿ ಇರಿಸಬಹುದು. ಇವನ್ನು ಬೇಕೆಂದಾಗೆಲ್ಲಾ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ತೆರೆಯಬಹುದು.

ಅಂದರೆ ನಿಮ್ಮ ಸರ್ಕಾರಿ ದಾಖಲೆಗಳೆಲ್ಲವನ್ನೂ ಡಿಜಿಲಾಕರ್‌ನಲ್ಲಿ ಇರಿಸುವ ಅವಕಾಶ ಇದೆ. ಈಗ ಡಿಜಿಲಾಕರ್‌ನಲ್ಲಿ ಇರಿಸಲು ಅನೇಕ ದಾಖಲೆಗಳ ಪಟ್ಟಿಗೆ ಪೆನ್ಷನ್ ಸರ್ಟಿಫಿಕೇಟ್ ಕೂಡ ಸೇರಿದೆ.

ಡಿಜಿಲಾಕರ್ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್ ಒಂದು ರೀತಿಯಲ್ಲಿ ಗುರುತಿನ ಚೀಟಿ ಇದ್ದಂತೆ. ಡಿಜಿಲಾಕರ್ ಬಳಸಲು ಆಧಾರ್ ನಂಬರ್ ಅಗತ್ಯ. ಆಧಾರ್ ಕಾರ್ಡ್ ಇದ್ದವರು ಮಾತ್ರ ಡಿಜಿಲಾಕರ್ ಸೌಲಭ್ಯ ಬಳಸಲು ಸಾಧ್ಯ. ಡಿಜಿಲಾಕರ್ ಅನ್ನು ಆಫ್‌ಲೈನ್‌ನಲ್ಲಿ ಬಳಸಲು ಬರುವುದಿಲ್ಲ. ಇಂಟರ್ನೆಟ್ ಕನೆಕ್ಷನ್ ಅಗತ್ಯ. ಇದು ಬಿಟ್ಟರೆ ಉಳಿದಂತೆ ಡಿಜಿಲಾಕರ್ ಸೌಲಭ್ಯ ಬಹಳ ಪರಿಣಾಮಕಾರಿ ಎನಿಸಿದೆ.

 

 ಪೆನ್ಷನ್ ಸರ್ಟಿಫಿಕೇಟ್

ಪೆನ್ಷನ್ ಸರ್ಟಿಫಿಕೇಟ್

ಈಗ ಡಿಜಿಲಾಕರ್ ಪ್ಲಾಟ್‌ಫಾರ್ಮ್‌ನಲ್ಲಿ ಪೆನ್ಷನ್ ಸರ್ಟಿಫಿಕೇಟ್‌ಗಳ ಸಂಗ್ರಹಕ್ಕೂ ಅವಕಾಶ ಕೊಡಲಾಗಿದೆ. ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಪೆನ್ಷನ್ ಸರ್ಟಿಫಿಕೇಟ್ ಒದಗಿಸುತ್ತಿದೆ.

ನಿಮ್ಮ ಆಧಾರ್ ನಂಬರ್ ಅಥವಾ ಫೋನ್ ನಂಬರ್ ಮೂಲಕ ಡಿಜಿಲಾಕರ್ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಲಾಗಿನ್ ಆಗಿ ಪೆನ್ಷನ್ ಸರ್ಟಿಫಿಕೇಟ್‌ಗಳನ್ನು ವೀಕ್ಷಿಸಬಹುದು. ಇವು ಕಾಣಿಸದಿದ್ದಲ್ಲಿ ವೆಬ್‌ಸೈಟ್‌ನ ಎಡಬದಿಯ್ಲಿ ಸರ್ಚ್ ಡಾಕುಮೆಂಟ್ಸ್ ಗೆ ಹೋಗಿ ಪೆನ್ಷನ್ ಡಾಕುಮೆಂಟ್ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ಹಲವು ಪೆನ್ಷನ್ ಡಾಕುಮೆಂಟ್ಸ್ ಪಟ್ಟಿ ಕಾಣಿಸುತ್ತದೆ. ನಿಮಗೆ ಬೇಕಾದುದನ್ನು ಆಯ್ದುಕೊಂಡು ಪಿಂಚಣಿದಾರರ ಜನ್ಮದಿನಾಂಕ ಮತ್ತು ಪಿಪಿಒ ನಂಬರ್ ನಮೂದಿಸಬೇಕು. ಆ ಬಳಿಕ ಗೆಟ್ ಡಾಕುಮೆಂಟ್ ಮೇಲೆ ಕ್ಲಿಕ್ ಮಾಡಿದರೆ ಅದು ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಆಗಿ ಉಳಿಯುತ್ತದೆ.

 

 ಬೇರೆ ಹೊಸ ಸೇವೆಗಳು

ಬೇರೆ ಹೊಸ ಸೇವೆಗಳು

ಉದ್ಯಂ ಪ್ರಮಾಣಪತ್ರ, ಕಾರಿನ ಇನ್ಷೂರೆನ್ಸ್ ಇತ್ಯಾದಿ ಸೌಲಭ್ಯವನ್ನು ಡಿಜಿಲಾಕರ್‌ನಲ್ಲಿ ಕೊಡಲಾಗಿದೆ. ಇತ್ತೀಚೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳನ್ನು ಡಿಜಿಲಾಕರ್‌ನಲ್ಲಿ ಒದಗಿಸಲಾಗಿದ್ದು ಗಮನಾರ್ಹ ಎನಿಸಿತ್ತು.

ವಾಟ್ಸಾಪ್‌ನಲ್ಲಿ ಡಿಜಿಲಾಕರ್
ಡಿಜಿಲಾಕರ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಾಟ್ಸಾಪ್ ಫೀಚರ್ ಅನ್ನು ಸೇರಿಸಲಾಗಿದೆ. ವಾಟ್ಸಾಪ್ ಮೂಲಕ ಡಿಜಿಲಾಕರ್ ಖಾತೆ ತೆರೆಯಲು ಮತ್ತು ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಈ ಫೀಚರ್ ಬಳಸಲು ಮೊದಲಿಗೆ 9013151515 ನಂಬರ್ ಅನ್ನು ಮೊಬೈಲ್‌ಗೆ ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಾಪ್ ಓಪನ್ ಮಾಡಿ ಆ ನಂಬರ್‌ಗೆ ಡಿಜಿಲಾಕರ್ ಎಂದು ಇಂಗ್ಲೀಷ್‌ನಲ್ಲಿ ಟೈಪ್ ಮಾಡಿ ಮೆಸೇಜ್ ಕಳುಹಿಸಿ. ಅಲ್ಲಿಂದ ಸಿಗುವ ಸೂಚನೆಗಳನ್ನು ಪಾಲಿಸಿದರೆ ಸಾಕು.

 

 ಡಿಜಿಲಾಕರ್ ಬಳಸುವವರೆಷ್ಟು?

ಡಿಜಿಲಾಕರ್ ಬಳಸುವವರೆಷ್ಟು?

ಡಿಜಿಲಾಕರ್ ವೆಬ್‌ಸೈಟ್‌ನಲ್ಲಿ ಸಿಗುವ ಮಾಹಿತಿ ಪ್ರಕಾರ ಡಿಜಿಲಾಕರ್ ಬಳಕೆದಾರರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಬಹಳ ಹೆಚ್ಚಾಗಿದೆ. ಸದ್ಯ 12 ಕೋಟಿಗೂ ಹೆಚ್ಚು ಜನರು ಈ ಸೇವೆಯನ್ನು ಬಳಸುತ್ತಿದ್ದಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ 560 ಕೋಟಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇದಕ್ಕಾಗಿ ಕ್ಲೌಡ್ ತಂತ್ರಜ್ಞಾನವನ್ನು ಬಳಸಲಾಗಿದೆ.

ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?ಡಿಜಿಟಲ್ ಬ್ಯಾಂಕಿಂಗ್ ಎಂದರೇನು? ಈಗ ಸ್ಥಾಪಿಸಿರುವ ಡಿಬಿಯುಗಳಿಂದ ಏನು ಪ್ರಯೋಜನ?

English summary

DigiLocker Pension Certificate New Service Added, Know How To Use

With over 12 crore users DigiLocker app is increasing its services, and has now added another pension certificate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X