For Quick Alerts
ALLOW NOTIFICATIONS  
For Daily Alerts

ಎಚ್‌-1ಬಿ ವೀಸಾ ನಿಷೇಧದ ಅವಧಿ ಮುಕ್ತಾಯ: ಭಾರತದ ಐಟಿ ಕಂಪನಿಗಳಿಗೆ ಏನು ಲಾಭ?

|

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದಲ್ಲಿ ಎಚ್‌-1ಬಿ ವೀಸಾಗಳ ಮೇಲೆ ಹೇರಲಾಗಿದ್ದ ನಿಷೇಧವು ಜಗತ್ತಿನ ಹಲವು ಐಟಿ ಕಂಪನಿಗಳಿಗೆ ಸಾಕಷ್ಟು ತೊಡಕಾಗಿತ್ತು. ಅದ್ರಲ್ಲೂ ಪ್ರಮುಖವಾಗಿ ಭಾರತೀಯ ಐಟಿ ಉದ್ಯೋಗಿಗಳು ಈ ನಿಷೇಧದ ಬಿಸಿ ಎದುರಿಸಿದ್ರು. ಆದ್ರೀಗ ಎಚ್‌-1ಬಿ ವೀಸಾ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಭಾರತದ ಐಟಿ ಕಂಪನಿಗಳು ನಿರಾಳವಾಗಿವೆ.

ಟ್ರಂಪ್ ಆಡಳಿತ ಹೇರಿದ್ದ ಹೊಸ ವಲಸೆರಹಿತ ಕಾರ್ಮಿಕರ ವೀಸಾಗಳ ವಿತರಣೆಯನ್ನು ನಿಷೇಧಿಸುವ ಆದೇಶವನ್ನು ಅಧ್ಯಕ್ಷ ಜೋ ಬಿಡೆನ್ ಆಡಳಿತವು ಗುರುವಾರ ಮುಕ್ತಾಯಗೊಳಿಸಿದೆ.

ಮಾರ್ಚ್ 31ರವರೆಗೆ ಎಚ್‌-1ಬಿ ವೀಸಾ ನಿಷೇಧ ಹೇರಲಾಗಿತ್ತು

ಮಾರ್ಚ್ 31ರವರೆಗೆ ಎಚ್‌-1ಬಿ ವೀಸಾ ನಿಷೇಧ ಹೇರಲಾಗಿತ್ತು

ಡೊನಾಲ್ಡ್‌ ಟ್ರಂಪ್ ಆಡಳಿತದಲ್ಲಿ ವಿದೇಶದಿಂದ ನುರಿತ ಕಾರ್ಮಿಕರಿಗೆ ನೀಡಲಾಗುವ ವೀಸಾಗಳನ್ನು ತೀವ್ರವಾಗಿ ಸೀಮಿತಗೊಳಿಸುವ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶವು ಅರ್ಹವಾದ ಕೆಲಸದ ವೀಸಾ ಹೊಂದಿರುವವರ ಪ್ರವೇಶವನ್ನು ಮೊದಲು ನಿರ್ಬಂಧಿಸಿತ್ತು, ಮೊದಲು ಆಗಸ್ಟ್ ವರೆಗೆ 60 ದಿನಗಳವರೆಗೆ, ನಂತರ ಅದನ್ನು ಡಿಸೆಂಬರ್ ಅಂತ್ಯಕ್ಕೆ ಮತ್ತು ನಂತರ ಮಾರ್ಚ್ 31 ರವರೆಗೆ ವಿಸ್ತರಿಸಲಾಯಿತು.

ಕೋವಿಡ್-19 ಕಾರಣ ಅಮೆರಿಕನ್ನರಿಗೆ ಮೊದಲ ಆದ್ಯತೆ !

ಕೋವಿಡ್-19 ಕಾರಣ ಅಮೆರಿಕನ್ನರಿಗೆ ಮೊದಲ ಆದ್ಯತೆ !

2020ರ ಅಂತ್ಯದವರೆಗೆ ಎಚ್‌-1ಬಿ, ಹೆಚ್ -2 ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಕೆಲಸದ ವೀಸಾಗಳನ್ನು ಅಮಾನತುಗೊಳಿಸುವುದಾಗಿ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ವಲಸೆಯನ್ನು ನಿಗ್ರಹಿಸಲು ಮತ್ತು ದೇಶದಲ್ಲಿ ಸ್ಥಳೀಯ ಉದ್ಯೋಗಕ್ಕೆ ಸಹಾಯ ಮಾಡುವ ಪ್ರಯತ್ನಗಳ ಭಾಗವಾಗಿ ಎಚ್ -1 ಬಿ, ಎಲ್ -1 ಮತ್ತು ಇತರ ತಾತ್ಕಾಲಿಕ ಕೆಲಸದ ಪರವಾನಗಿಗಳನ್ನು ಟ್ರಂಪ್ ಸರ್ಕಾರವು ಅಮಾನತುಗೊಳಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದ್ದರು.

ಭಾರತೀಯರಿಗೆ ಹೆಚ್ಚಿನ ಅವಕಾಶ ನೀಡುತ್ತದೆ

ಭಾರತೀಯರಿಗೆ ಹೆಚ್ಚಿನ ಅವಕಾಶ ನೀಡುತ್ತದೆ

ಎಚ್‌-1ಬಿ ವೀಸಾ ಅಮೆರಿಕಾದಲ್ಲಿ ಭಾರತೀಯ ಟೆಕ್ಕಿಗಳು ಹೆಚ್ಚು ಬಳಸುವ ಕೆಲಸದ ವೀಸಾಗಳಲ್ಲಿ ಒಂದಾಗಿದೆ. ಈ ವೀಸಾ ಅಲ್ಲಿನ ಕಂಪನಿಗಳಿಗೆ ವಿದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ.

ಈ ವೀಸಾಗಳಲ್ಲಿಯೇ ಗೂಗಲ್, ಮೈಕ್ರೋಸಾಫ್ಟ್, ಇಂಡಿಯನ್ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ ಕಂಪೆನಿಗಳು ಭಾರತದಿಂದ ಯುಎಸ್‌ಗೆ ಎಂಜಿನಿಯರ್‌ಗಳನ್ನು ಕರೆತರುತ್ತವೆ. ಎಚ್‌-1ಬಿ ವೀಸಾ ಹೊಂದಿರುವ ಅಮೆರಿಕಾದಲ್ಲಿ ವಾಸಿಸುವ 75 ಪರ್ಸೆಂಟ್ ಜನರು ಭಾರತೀಯ ಪ್ರಜೆಗಳು ಅನ್ನೋದು ಗಮನಾರ್ಹ.

 

ಟ್ರಂಪ್ ಆಡಳಿತದ ವೀಸಾ ನಿಷೇಧವನ್ನು ಜೋ ಬೈಡನ್ ಏಕೆ ಮುಂದುವರಿಸಲಿಲ್ಲ?

ಟ್ರಂಪ್ ಆಡಳಿತದ ವೀಸಾ ನಿಷೇಧವನ್ನು ಜೋ ಬೈಡನ್ ಏಕೆ ಮುಂದುವರಿಸಲಿಲ್ಲ?

ಎಚ್‌-1ಬಿ ವೀಸಾ ಮತ್ತು ಇತರ ಕೆಲಸದ ವೀಸಾಗಳು ಅಮೆರಿಕಾದಲ್ಲಿ ಸ್ಥಳೀಯ ಉದ್ಯೋಗಕ್ಕೆ ಹೊಡೆತ ನೀಡುತ್ತದೆ ಮತ್ತು ಅಗ್ಗದ ವೆಚ್ಚದಲ್ಲಿ ಉದ್ಯೋಗಿಗಳನ್ನು ಕರೆತರಲು ಸಾಧ್ಯವಾಗುತ್ತದೆ ಎಂಬ ಟೀಕೆಗಳಿವೆ. ಆದರೆ ಹೆಚ್ಚು ನುರಿತ ಮತ್ತು ತರಬೇತಿ ಪಡೆದ ಕಾರ್ಮಿಕರನ್ನು ಪಡೆಯುವಾಗ ಈ ವೀಸಾಗಳು ಅಮೆರಿಕಾಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ.


ಇದರ ಜೊತೆಗೆ ಟ್ರಂಪ್ ಆಡಳಿತ ಹೇರಿದ್ದ ನಿಷೇಧವನ್ನು ಅಲ್ಫಾಬೆಟ್‌ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಟೆಸ್ಲಾ ಸಿಇಒ ಎಲೋನ್ ಮಸ್ಕ್‌ ಸೇರಿದಂತೆ ಅನೇಕ ಐಟಿ ದಿಗ್ಗಜರ ಜೊತೆಗೆ ಕೈಗಾರಿಕಾ ಸಂಸ್ಥೆಗಳು ಖಂಡಿಸಿದ್ದವು. ಜೊತೆಗೆ ಎಚ್ -1 ಬಿ ವೀಸಾ ಅಮೆರಿಕಾ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಿರುವಾಗ ವೀಸಾ ನಿಷೇಧದ ಅವಧಿಯನ್ನು ಬೈಡೆನ್ ಆಡಳಿತವು ಮುಂದುವರಿಸಲು ಇಷ್ಟ ಪಡಲಿಲ್ಲ.

 

ಎಚ್ -1 ಬಿ ವೀಸಾದಿಂದ ಭಾರತದ ಐಟಿ ಉದ್ಯಮಕ್ಕೆ ಏನು ಲಾಭ?

ಎಚ್ -1 ಬಿ ವೀಸಾದಿಂದ ಭಾರತದ ಐಟಿ ಉದ್ಯಮಕ್ಕೆ ಏನು ಲಾಭ?

ಅಮೆರಿಕಾ ಸರ್ಕಾರವು ಪ್ರತಿವರ್ಷ 85,000 ಎಚ್‌-1ಬಿ ವೀಸಾಗಳನ್ನು ನೀಡುತ್ತದೆ. ಇದರಲ್ಲಿ, 65,000 ಎಚ್ -1 ಬಿ ವೀಸಾಗಳನ್ನು ಹೆಚ್ಚು ನುರಿತ ವಿದೇಶಿ ಕಾರ್ಮಿಕರಿಗೆ ನೀಡಲಾಗುತ್ತದೆ, ಉಳಿದ 20,000 ಜನರನ್ನು ಹೆಚ್ಚುವರಿಯಾಗಿ ಅಮೆರಿಕನ್ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಅಥವಾ ಸ್ನಾತಕೋತ್ತರ ಪದವಿ ಪಡೆದ ಹೆಚ್ಚು ನುರಿತ ವಿದೇಶಿ ಕಾರ್ಮಿಕರಿಗೆ ನೀಡಬಹುದು.

ಆದರೆ ಭಾರತೀಯ ಐಟಿ ಕಂಪನಿಗಳು ಅಮೆರಿಕಾದಲ್ಲಿ ಎಚ್ -1 ಬಿ ವೀಸಾ ಆಡಳಿತದ ಅತಿದೊಡ್ಡ ಫಲಾನುಭವಿಗಳಲ್ಲಿ ಸೇರಿವೆ ಮತ್ತು 1990 ರ ದಶಕದಿಂದ ಪ್ರತಿವರ್ಷ ನೀಡಲಾಗುವ ಒಟ್ಟು ವೀಸಾಗಳ ಸಂಖ್ಯೆಯಲ್ಲಿ ಸಿಂಹ ಪಾಲನ್ನು ಹೊಂದಿದೆ. ವರ್ಷಗಳಲ್ಲಿ ಹೆಚ್ಚಿನ ಭಾರತೀಯ ಕಂಪನಿಗಳು ಕೆಲಸದ ವೀಸಾಗಳಾದ ಎಚ್ -1 ಬಿ ಮತ್ತು ಎಲ್ -1 ನಂತಹ ಅವಲಂಬನೆಯನ್ನು ಕಡಿಮೆಗೊಳಿಸಿದರೂ, ಒಟ್ಟಾರೆ ಭಾರತೀಯ ಕಾರ್ಮಿಕರಲ್ಲಿ ಇದರ ಪಾಲು ಹೆಚ್ಚಿದೆ.

 

English summary

Donald Trump's H-1B Visa Ban Has Expired: What are the benefits for India's IT Sector

US President Joe Biden on Thursday let a June 2020 executive order banning the issuance of new non-immigrant worker visas expire.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X