ದುಬೈನಲ್ಲಿ ಮೇ 27ರಿಂದ ಮತ್ತೆ ಆರ್ಥಿಕ ಚಟುವಟಿಕೆಗಳು ಶುರು

ದುಬೈನಲ್ಲಿ ಬುಧವಾರದಿಂದ (ಮೇ 27, 2020) ಮುಕ್ತ ಸಂಚಾರ ಹಾಗೂ ವ್ಯವಹಾರ ಚಟುವಟಿಕೆಗಳು ಆರಂಭವಾಗಲಿವೆ ಎಂದು ರಾಜ ಶೇಖ್ ಹಮ್ದಾನ್ ಬಿನ್ ಮೊಹಮದ್ ಸೋಮವಾರ ತಿಳಿಸಿದ್ದಾರೆ. ಕೊರೊನಾ ಕಾರಣಕ್ಕೆ ಅಲ್ಲಿಯೂ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದರೆ ಬುಧವಾರದಿಂದ ಸಂಚಾರ ಅಥವಾ ವ್ಯಾಪಾರ- ವ್ಯವಹಾರಗಳಲ್ಲಿ ನಿರ್ಬಂಧ ಇಲ್ಲ. ಬೆಳಗ್ಗೆ 6ರಿಂದ ರಾತ್ರಿ 11ರ ತನಕ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಲಾಗಿದೆ.

ಕೆಲವು ರೀಟೇಲ್ ಹಾಗೂ ಹೋಲ್ ಸೇಲ್ ವ್ಯವಹಾರಗಳನ್ನು ಆರಂಭಿಸಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಇತರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಚಿತ್ರಮಂದಿರಗಳು, ಒಳಾಂಗಣ ಜಿಮ್ ಗಳು, ಶಿಕ್ಷಣ ಹಾಗೂ ಚಿಕಿತ್ಸಾ ಕೇಂದ್ರಗಳು ಎಲ್ಲಕ್ಕೂ ಇದು ಅನ್ವಯ ಆಗುತ್ತದೆ.

ಏಪ್ರಿಲ್ 24ರಿಂದ ಆರಂಭವಾಗಿದ್ದ ಮುಸ್ಲಿಮರ ಪವಿತ್ರ ಮಾಸ ರಮ್ಜಾನ್ ಗೆ ಸೀಮಿತ ಸಾಮರ್ಥ್ಯದೊಂದಿಗೆ ಮಾಲ್ ಗಳನ್ನು ತೆರೆಯಲು ದುಬೈನಲ್ಲಿ ಅನುಮತಿ ನೀಡಲಾಗಿತ್ತು. ರೆಸ್ಟೋರೆಂಟ್ ಹಾಗೂ ಕೆಫೆಗಳು ಶೇಕಡಾ 30ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿತ್ತು. ಕೆಲವು ನಿರ್ಬಂಧದೊಂದಿಗೆ ಸಾರ್ವಜನಿಕ ಉದ್ಯಾನಗಳನ್ನು ತೆರೆಯಲು ಅನುಮತಿಸಲಾಗಿತ್ತು.

ದುಬೈನಲ್ಲಿ ಮೇ 27ರಿಂದ ಮತ್ತೆ ಆರ್ಥಿಕ ಚಟುವಟಿಕೆಗಳು ಶುರು

ದುಬೈನಲ್ಲಿ ಮಾಮೂಲಿ ಪ್ರಯಾಣಿಕರ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿತ್ತು. ಅದೇ ರೀತಿ ಸಾರ್ವಜನಿಕ ಸ್ಥಳಗಳು ಸಹ ಬಹುತೇಕ ಮುಚ್ಚಲಾಗಿತ್ತು. ಆದರೆ ಗಲ್ಫ್ ಅರಬ್ ನ ಇತರ ದೇಶಗಳಂತೆಯೇ ಕಡಿಮೆ ಆದಾಯದ, ವಲಸಿಗ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕಡೆಗಳಲ್ಲಿ ಕೊರೊನಾ ವೈರಸ್ ಹೆಚ್ಚಾಗಿ ಕಾಣಿಸಿಕೊಂಡಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+