For Quick Alerts
ALLOW NOTIFICATIONS  
For Daily Alerts

ಇ ಕಾಮರ್ಸ್ ಕಂಪೆನಿ ಅಮೆಜಾನ್ ಗೆ ದಂಡ ವಿಧಿಸಿದ ಸರ್ಕಾರ

|

ಇ ಕಾಮರ್ಸ್ ಕಂಪೆನಿ ಅಮೆಜಾನ್ ಗೆ ಸರ್ಕಾರದಿಂದ ದಂಡ ವಿಧಿಸಲಾಗಿದೆ. ಅಮೆಜಾನ್ ನಲ್ಲಿ ಮಾರಾಟ ಆಗುವ ವಸ್ತು ಉತ್ಪಾದನೆಯಾದ ದೇಶವೂ ಸೇರಿದಂತೆ ಮತ್ತಿತರ ಕಡ್ಡಾಯ ಮಾಹಿತಿಗಳನ್ನು ಪ್ರದರ್ಶನ ಮಾಡಿಲ್ಲ ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

 

Good News: ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿತ್‌ಡ್ರಾ ಮಿತಿ ಹಿಂತೆಗೆತ

ಕಳೆದ ತಿಂಗಳು ಗ್ರಾಹಕ ವ್ಯವಹಾರಗಳ ಸಚಿವಾಯದಿಂದ ಈ ಬಗ್ಗೆ ನೋಟಿಸ್ ಹೊರಡಿಸಲಾಗಿತ್ತು. ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಿಂದ ಈ ಮಾಹಿತಿಗಳನ್ನು ಪ್ರದರ್ಶಿಸುತ್ತಿಲ್ಲ ಎಂಬುದು ಅದಕ್ಕೆ ಕಾರಣ ಆಗಿತ್ತು. ಎಲ್ಲ ಇ ಕಾಮರ್ಸ್ ಗಳು ಕಾನೂನು ನಿಯಮಾವಳಿಗೆ ಬದ್ಧವಾಗಿವೆಯೇ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಎಲ್ಲ ರಾಜ್ಯಗಳಿಗೂ ಸಚಿವಾಲಯದಿಂದ ತಿಳಿಸಲಾಗಿತ್ತು.

ಇ ಕಾಮರ್ಸ್ ಕಂಪೆನಿ ಅಮೆಜಾನ್ ಗೆ ದಂಡ ವಿಧಿಸಿದ ಸರ್ಕಾರ

ಅಮೆಜಾನ್ ಗೆ ನೀಡಿದ ನೋಟಿಸ್ ಗೆ ಸಮಾಧಾನಕರ ಪ್ರತಿಕ್ರಿಯೆ ನೀಡ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ನವೆಂಬರ್ 19ನೇ ತಾರೀಕಿನಂದು ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಕಾನೂನು ಪ್ರಕಾರ, ಮೊದಲ ಅಪರಾಧಕ್ಕೆ ಪ್ರತಿ ನಿರ್ದೇಶಕರಿಗೆ 25,000 ರುಪಾಯಿ ದಂಡ ಹಾಕಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಫ್ಲಿಪ್ ಕಾರ್ಟ್ ಗೆ ದಂಡ ವಿಧಿಸಿಲ್ಲ ಎನ್ನಲಾಗಿದೆ.

English summary

Amazon fined for not displaying mandatory info about products

E commerce company Amazon fined by government for not displaying mandatory information on products.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X