For Quick Alerts
ALLOW NOTIFICATIONS  
For Daily Alerts

PMV Eas-E : ಭಾರತದ ಅತಿಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; ಇಲ್ಲಿದೆ ಅಗ್ಗದ ಕಾರುಗಳ ಪಟ್ಟಿ

|

ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚೆಚ್ಚು ಆದ್ಯತೆ ಕೊಡುತ್ತಿರುವಂತೆಯೇ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ದೇಶದಲ್ಲಿ ಹೆಚ್ಚಲು ಆರಂಭಿಸಿವೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳು ಸಿಗುತ್ತಿವೆ. ಇದೀಗ ಮುಂಬೈನ ಪಿಎಂವಿ ಎಲೆಕ್ಟ್ರಿಕ್ ಸಂಸ್ಥೆ ಎಲೆಕ್ಟ್ರಿಕ್ ಕಾರೊಂದನ್ನು ಬಿಡುಗಡೆ ಮಾಡಿದೆ. ಪಿಎಂವಿ ಇಎಎಸ್-ಇ ಎಲೆಕ್ಟ್ರಿಕ್ ಕಾರನ್ನು 6.79 ಲಕ್ಷ ರೂ ಮತ್ತು 7.79 ಲಕ್ಷ ರೂಪಾಯಿಗೆ ಮಾರುಕಟ್ಟೆಗೆ ತರಲಾಗಿದೆ.

 

ಇಂಟ್ರಡಕ್ಟರಿ ಆಫರ್ ಅಗಿ ಕಂಪನಿಯು ಮೂಲ ಆವೃತ್ತಿಯ ಕಾರನ್ನು ಮೊದಲು ತಂದಿದ್ದು ಇದು 4.79 ಲಕ್ಷ ರೂಪಾಯಿಗೆ ಸಿಗುತ್ತದೆ. ಆದರೆ, ಮೊದಲು ಬುಕ್ ಮಾಡುವ 10 ಸಾವಿರ ಮಂದಿಗೆ ಮಾತ್ರ ಈ 5 ಲಕ್ಷ ರೂ ಒಳಗಿನ ಕಾರು ಸಿಗುತ್ತದೆ. ಕಂಪನಿ ನಿನ್ನೆ ಹೇಳಿಕೊಂಡಿರು ಪ್ರಕಾರ ಅದಾಗಲೇ 6 ಸಾವಿರ ಮಂದಿ ಈ ಕಾರನ್ನು ಪ್ರೀ ಆರ್ಡರ್ ಮಾಡಿದ್ದಾರೆ. ಬಹುಶಃ 10 ಸಾವಿರ ಆರ್ಡರ್ ಬುಕ್ ಆಗಿ ಹೋಗಿರುವ ಸಾಧ್ಯತೆ ಇದೆ.

ಹೆಚ್ಚು ಬ್ಯಾಟರಿ ಶಕ್ತಿ ಇರುವ ಎರಡು ವೇರಿಯಂಟ್‌ಗಳು 6.79 ಲಕ್ಷ ರೂ ಮತ್ತು 7.79 ಲಕ್ಷ ರೂಪಾಯಿಗೆ ಲಭ್ಯ ಇವೆ. ಆದರೂ 6.79 ಲಕ್ಷ ರೂ ಬೆಲೆಯಲ್ಲಿ ಇಎಎಸ್-ಇ ಕಾರು ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಎನಿಸಿದೆ. ಈ ಮೂಲಕ ಟಾಟಾ ಕಂಪನಿಯ ಟಿಯಾಗೋ ಇವಿ ಕಾರನ್ನು ಬೆಲೆ ಸ್ಪರ್ಧೆಯಲ್ಲಿ ಹಿಂದಿಕ್ಕಿದೆ.

ಟಾಟಾ ಮೋಟಾರ್ಸ್ ಕಂಪನಿ ಇತ್ತೀಚೆಗಷ್ಟೇ ಟಿಯಾಗೋ ಇವಿ ಕಾರನ್ನು 8.49 ಲಕ್ಷ ರೂಪಾಯಿಗೆ ಬಿಡುಗಡೆ ಮಾಡಿ ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಎಂದು ಸದ್ದು ಮಾಡಿತ್ತು. ಈಗ ಪಿಎಂವಿ ಕಂಪನಿ ಹೊಸ ದಾಖಲೆ ಬರೆದಿದೆ.

ಇಎಎಸ್-ಇ ಕಾರಿನ ವಿಶೇಷತೆಗಳೇನು?

ಇಎಎಸ್-ಇ ಕಾರಿನ ವಿಶೇಷತೆಗಳೇನು?

* ಕಾರಿನ ಗಾತ್ರ ಬಹಳ ಚಿಕ್ಕದು. ಒಟ್ಟು ಗಾತ್ರ 36 ಚದರ ಅಡಿ ಎಂದು ಕಂಪನಿ ಹೇಳಿಕೊಂಡಿದೆ. ಇದು ನಗರದಂಥ ಟ್ರಾಫಿಕ್ ದಟ್ಟನೆಯ ಪ್ರದೇಶಗಳಿಗೆ ಹೇಳಿ ಮಾಡಿಸಿದ್ದು.
* ಇಬ್ಬರು ಪ್ರಯಾಣಿಕರಿಗೆ ಸೀಟಿಂಗ್ ಇದೆ. ಡ್ರೈವಿಂಗ್ ಸೀಟು ಹಾಗೂ ಮತ್ತೊಬ್ಬರು ಕೂರಬಹುದು. ಜೊತೆಗೆ ಒಬ್ಬ ಸಣ್ಣ ಹುಡುಗ ಕೂರಬಹುದು. ಪುಟ್ಟ ಕುಟುಂಬಕ್ಕೆ ಸಾಕಾಗುವ ಕಾರು.
* ಉದ್ದ 2,915 ಮಿಮೀ ದ್ದರೆ 1,157 ಮಿಮೀ ಅಗಲ ಇದೆ. ಒಟ್ಟು ತೂಕ 550 ಕಿಲೋ ಇದೆ.
* ಟ್ರಾಫಿಕ್‌ನಲ್ಲಿ ಕಿರಿಕಿರಿ ಇಲ್ಲದೇ ಡ್ರೈವಿಂಗ್ ಮಾಡಲು ಫೀಟ್ ಫ್ರೀ ಮೋಡ್ ಇತ್ಯಾದಿ ಹಲವು ಫೀಚರ್‌ಗಳು ಈ ಕಾರಿನಲ್ಲಿವೆ.
* ರಿಮೋಟ್ ಪಾರ್ಕ್ ಅಸಿಸ್ಟ್, ರಿಮೋಟ್ ಹಾರ್ನ್ ಇತ್ಯಾದಿ ಸ್ಮಾರ್ಟ್ ಫೀಚರ್‌ಗಳಿವೆ.

ಬ್ಯಾಟರಿ ಮತ್ತು ವೇಗ

ಬ್ಯಾಟರಿ ಮತ್ತು ವೇಗ

* ಇಎಎಸ್-ಇ ಕಾರು ಗರಿಷ್ಠ ಗಂಟೆಗೆ 70 ಕಿಮೀ ವೇಗದಲ್ಲಿ ಹೋಗಬಲ್ಲುದು.
* 5 ಸೆಕೆಂಡ್‌ನಲ್ಲಿ 40 ಕಿಮೀ ಟಾಪ್ ಸ್ಪೀಡ್ ಪಡೆಯಬಲ್ಲುದು
* ಮೂರು ರೀತಿಯ ಬ್ಯಾಟರಿ ಪ್ಯಾಕ್ ಲಭ್ಯ ಇರುತ್ತದೆ. ಈ ಬ್ಯಾಟರಿಗಳಿಂದ ಕಾರನ್ನು 120 ಕಿಮೀ, 160 ಕಿಮೀ ಮತ್ತು 200 ಕಿಮೀ ದೂರದವರೆಗೂ ಹೋಗಬಹುದು.
* 3-4 ಗಂಟೆಯೊಳಗೆ ಬ್ಯಾಟರಿ ಚಾರ್ಜ್ ಆಗುತ್ತದೆ.
* ಒಂದು ಕಿಲೋಮೀಟರ್ ಓಡಿದರೆ ಸುಮಾರು 75 ಪೈಸೆ ವೆಚ್ಚವಾಗಬಹುದು ಅಷ್ಟೇ ಎನ್ನುತ್ತಿದೆ ಪಿಎಂವಿ ಸಂಸ್ಥೆ

 

 

ಟಾಟಾ ಕಾರುಗಳು
 

ಟಾಟಾ ಕಾರುಗಳು

ಟಾಟಾ ಮೋಟಾರ್ಸ್ ಸೆಪ್ಟೆಂಬರ್ ತಿಂಗಳಲ್ಲಿ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿತ್ತು. ಟಿಯಾಗೋ ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಯಲ್ಲಿ ಈ ಹಿಂದೆಯೇ ಲಭ್ಯ ಇತ್ತು. ಈಗ ಎಲೆಕ್ಟ್ರಿಕ್ ವಾಹನ ರೂಪದಲ್ಲಿ ಈ ಮಾಡೆಲ್ ಬಿಡುಗಡೆಯಾಗಿದೆ. ಆರಂಭಿಕ ಬೆಲೆ 8.49 ಲಕ್ಷ ರೂ ಇದೆ. ಇದರ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 250ರಿಂದ 315 ಕಿಮೀವರೆಗೂ ಕಾರು ಹೋಗಬಲ್ಲುದು. ಇದು 5.7 ಸೆಕೆಂಡ್‌ನೊಳಗೆ 60 ಕಿಮೀ ಟಾಪ್ ಸ್ಪೀಡ್ ಪಡೆಯಬಲ್ಲುದು.

ಮುಂದಿನ ವರ್ಷ ಟಾಟಾ ಸಂಸ್ಥೆ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಮೊದಲು ಪಂಚ್ ಎಲೆಕ್ಟ್ರಿಕ್ ಕಾರು ಬರದಲಿದೆ. ನಂತರ ಹ್ಯಾರಿಯರ್ ಹೆಸರಿನ ಎಲೆಕ್ಟ್ರಿಕ್ ಕಾರು ರಸ್ತೆಗೆ ಇಳಿಯಲಿದೆ. ಪಂಚ್ ಕಾರಿನ ಬೆಲೆ ಸುಮಾರು 12 ಲಕ್ಷ ರೂ ಇರಬಹುದಾದರೆ, ಹ್ಯಾರಿಯರ್ ಇವಿ ಬೆಲೆ ಸುಮಾರು 25 ಲಕ್ಷ ಇರಬಹುದು ಎಂಬ ಅಂದಾಜಿದೆ.

 

ಮಹೀಂದ್ರ ಎಕ್ಸ್‌ಯುವಿ400

ಮಹೀಂದ್ರ ಎಕ್ಸ್‌ಯುವಿ400

ಇದರ ಜೊತೆಗೆ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇದು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 456 ಕಿಮೀ ಹೋಗಬಲ್ಲುದಂತೆ. ಬ್ಯಾಟರಿ ಚಾರ್ಜಿಂಗ್ ವೇಗ ಕೂಡ ಗಮನಾರ್ಹ ರೀತಿಯಲ್ಲಿ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ 50 ನಿಮಿಷದಲ್ಲಿ ಶೇ. 80ರಷ್ಟು ಬ್ಯಾಟರಿ ಚಾರ್ಜಿಂಗ್ ಮಾಡಬಹುದು. ಇದರ ಬೆಲೆ 15ರಿಂದ 20 ಲಕ್ಷ ರೂ ಇರಬಹುದು ಎಂದು ಹೇಳಲಾಗುತ್ತಿದೆ.

ಇವೆಲ್ಲದೇ ಭಾರತದಲ್ಲಿ ಈಗಾಗಲೇ ಇರುವ ಎಲೆಕ್ಟ್ರಿಕ್ ಕಾರುಗಳನ್ನು ನೋಡುವುದಾದರೆ ಟಾಟಾ ಟೈಗರ್, ಟಾಟಾ ನೆಕ್ಸಾನ್, ಬಿವೈಡಿ ಆ್ಯಟ್ಟೋ, ಕಿಯಾ ಇವಿ6, ಟಾಟಾ ಟಿಯಾಗೋ, ಎಂಜಿ ಝಡ್‌ಎಸ್ ಇವಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್, ವೋಲ್ವೋ ಎಕ್ಸ್‌ಸಿ40, ಬಿವೈಡಿ ಇ6, ಜಾಗ್ವಾರ್ ಐ-ಪೇಸ್, ಬಿಎಂಡಬ್ಲ್ಯೂ ಐ4, ಮರ್ಸಿಡೆಸ್ ಬೆಂಜ್ ಇಕ್ಯೂಎಸ್, ಪೋರ್ಷೆ ಟೇಕನ್ ಇತ್ಯಾದಿ ಕಾರುಗಳಿವೆ. ಆಡಿಯ ಎಲೆಕ್ಟ್ರಿಕ್ ಕಾರುಗಳಿವೆ.

ಆಡಿ, ವೋಲ್ವೋ, ಜಾಗ್ವಾರ್, ಮರ್ಸಿಡೆಸ್ ಬೆಂಜ್, ಪೋರ್ಷೆ ಮೊದಲಾದ ಕಂಪನಿಗಳ ಎಲೆಕ್ಟ್ರಿಕ್ ಕಾರುಗಳು ಒಂದು ಕೋಟಿ ರೂಗೂ ಅಧಿಕ ಬೆಲೆ ಹೊಂದಿವೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಟಾಟಾ ಹೆಚ್ಚು ಪ್ರಾಬಲ್ಯ ಸಾಧಿಸಿದೆ. ಹಲವಾರು ವೇರಿಯೆಂಟ್ ಇವಿಗಳನ್ನು ಟಾಟಾದವರು ಮಾರುಕಟ್ಟೆಗೆ ತಂದಿದ್ದಾರೆ. ಸಾಂಪ್ರದಾಯಿಕ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಪ್ರಾಬಲ್ಯ ಮೆರೆದಂತೆ ಇವಿ ಕ್ಷೇತ್ರದಲ್ಲಿ ಟಾಟಾ ಮುಂಚೂಣಿಯಲ್ಲಿದೆ.

 

English summary

EaS-E: India's Cheapest Car From PMV; See List of Other EVs

Mumbai base PMV Electric has introduced EaS-E electric car with an introductory offer of Rs. 4.79 lakh for limited number of customers. Its regular car is available for under Rs 8 lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X